UIDAI Penalty: ಆಧಾರ್ ಕಾರ್ಡ್ ಕುರಿತಂತೆ ಮಹತ್ವದ ಘೋಷಣೆ ಮಾಡಿದ ಕೇಂದ್ರ ಸರ್ಕಾರ, ಇಂತವರಿಗೆ 50 ಸಾವಿರ ದಂಡ.

ತಿದ್ದುಪಡಿ ಶುಲ್ಕಕ್ಕೆ ಸಂಬಂಧಿಸಿದಂತೆ UIDAI ಮಹತ್ವದ ಘೋಷಣೆ ಹೊರಡಿಸಿದೆ

UIDAI New Rule: UIDAI ದೇಶದಲ್ಲಿ Aadhaar Card ಸಂಬಂಧಿತ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತ ಇರುತ್ತದೆ. ಸದ್ಯ Aadhaar Update ಮಾಡುವಂತೆ UIDAI ಜನರಿಗೆ ಸೂಚನೆ ನೀಡಿದೆ. ಹೌದು ಆಧಾರ್ ಕಾರ್ಡ್ ಕುರಿತಂತೆ ಈಗಾಗಲೇ ಹಲವು ಆದೇಶವನ್ನ ಹೊಸರಿದಿಸುವ UIDAI ಈಗ ಇನ್ನೊಂದು ಆದೇಶವನ್ನ ಹೊರಡಿಸಿದೆ.

UIDAI ಉಚಿತ ಆಧಾರ್ ಅಪ್ಡೇಟ್ ಅನ್ನು ನೀಡುತ್ತಿದೆ. ಇದೀಗ UIDAI ಆಧಾರ್ ತಿದ್ದುಪಡಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಪರಿಚಯಿಸಿದೆ. ಆಧಾರ್ ತಿದ್ದುಪಡಿ ಮಾಡುವಲ್ಲಿ ಆಧಾರ್ ಕೇಂದ್ರದಲ್ಲಿ ಇಂತಹ ತಪ್ಪಾದರೆ ಹೆಚ್ಚಿನ ದಂಡ ವಿಧಿಸುವುದಾಗಿ UIDAI ಸೂಚನೆ ನೀಡಿದೆ.

UIDAI New Rule
Image Credit: Original Source

ಆಧಾರ್ ಕಾರ್ಡ್ ಕುರಿತಂತೆ ಮಹತ್ವದ ಘೋಷಣೆ ಮಾಡಿದ ಕೇಂದ್ರ ಸರ್ಕಾರ
ಸಾಮಾನ್ಯವಾಗಿ ವಯಸ್ಸು, ಲಿಂಗ, ಹೆಸರು ಸೇರಿದಂತೆ ಆಧಾರ್ ನಲ್ಲಿ ಯಾವುದೇ ರೀತಿಯ ತಿದ್ದುಪಡಿ ಮಾಡಲು UIDAI ಅನುಮತಿ ನೀಡುತ್ತಿದೆ. ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥವಾ ಆನ್ಲೈನ್ ನಲ್ಲಿ ಆಧಾರ್ ತಿದ್ದುಪಡಿಯನ್ನು ಮಾಡಿಕೊಳ್ಳಬಹುದು. ಇನ್ನು ಆಧಾರ್ ಮಾಹಿತಿ ತಿದ್ದುಪಡಿಗೆ 50 ರೂ. ಶುಲ್ಕವನ್ನು ವಿಧಿಸಲಾಗುತ್ತದೆ. ಸದ್ಯ ಈ ಶುಲ್ಕಕ್ಕೆ ಸಂಬಂಧಿಸಿದಂತೆ UIDAI ಮಹತ್ವದ ಘೋಷಣೆ ಹೊರಡಿಸಿದೆ.

ಇಂತವರಿಗೆ 50 ಸಾವಿರ ದಂಡ
ಆಧಾರ್ ಮಾಹಿತಿ ತಿದ್ದುಪಡಿಗೆ 50 ರೂ. ಗಿಂತ ಹೆಚ್ಚಿನ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ಭಾರತೀಯ ಗುರುತಿನ ಚೀಟಿ ಪ್ರಾಧಿಕಾರ ಆಧಾರ್ ದಾಖಲಾತಿ ಏಜೆನ್ಸಿಗಳಿಗೆ ಸೂಚನೆ ನೀಡಿದೆ. ಇನ್ನು ನಿಯಮ ಉಲ್ಲಂಘನೆ ಮಾಡುವ ತಿದ್ದುಪಡಿ ಆಪರೇಟರ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ. ಆಧಾರ್ ತಿದ್ದುಪಡಿಯಲ್ಲಿ ಹೆಚ್ಚಿನ ಶುಲ್ಕ ವಸೂಲಾತಿ ಕಂಡುಬಂದರೆ, ಪ್ರಾಧಿಕಾರಕ್ಕೆ ಇಮೈಲ್ ಅಥವಾ ಟೋಲ್ ಫ್ರೀ ಸಂಖ್ಯೆ 1947 ಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಹೆಚ್ಚು ಶುಲ್ಕ ವಿಧಿಸಿದರೆ ಅಂತವರಿಗೆ 50 ಸಾವಿರ ದಂಡ ವಿಧಿಸಲಾಗುತ್ತದೆ ಎಂದು UIDAI ಸ್ಪಷ್ಟಪಡಿಸಿದೆ.

Free Aadhaar Update Date Extend
Image Credit: Oneindia

ಉಚಿತ ಆಧಾರ್ ನವೀಕರಣಕ್ಕೆ ದಿನಾಂಕ ವಿಸ್ತರಣೆ
ಸದ್ಯ UIDAI ಆಧಾರ್ ನವೀಕರಣಕ್ಕೆ ಇನ್ನು 3 ತಿಂಗಳುಗಳ ಕಾಲ ಸಮಯಾವಕಾಶವನ್ನು ನೀಡಿದೆ. ಅಂದರೆ December 15 2023 ರಿಂದ March 14 2024 ರ ವರೆಗೆ ನಿಮಗೆ ಉಚಿತ ಆಧಾರ್ ನವೀಕರಣಕ್ಕೆ  ಅವಕಾಶವಿದೆ. ಈ ಹಿಂದೆ ಉಚಿತ ಆಧಾರ್ ನವೀಕರಣಕ್ಕೆ ಡಿ. 14 ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದು, ಸದ್ಯ ಇನ್ನಾಷ್ಟು ದಿನವನ್ನು UIDAI ನೀಡಿದೆ. ಇನ್ನು ಕೂಡ ಸಾಕಷ್ಟು ಜನರ ಆಧಾರ್ ಕಾರ್ಡ್ ನವೀಕರಣ ಆಗದೆ ಇರುವ ಕಾರಣ UIDAI ಈ ನಿರ್ಧಾರವನ್ನು ಕೈಗೊಂಡಿದೆ. Free Aadhaar Update Date Extend ಮಾಡುವ ಬಗ್ಗೆ UIDAI ಅಧಿಕೃತ ಘೋಷಣೆ ಹೊರಡಿಸಿದೆ.

Join Nadunudi News WhatsApp Group

Join Nadunudi News WhatsApp Group