Aadhaar Card Cancel: ರದ್ದಾಗುತ್ತಾ 10 ವರ್ಷಗಳ ಹಳೆಯ ಆಧಾರ್ ಕಾರ್ಡ್…? ಸ್ಪಷ್ಟನೆ ನೀಡಿದ UIDAI.

10 ವರ್ಷಗಳ ಹಾಳೆಯ ಆಧಾರ್ ಕಾರ್ಡ್ ರದ್ದತಿಯ ಬಗ್ಗೆ ಸ್ಪಷ್ಟನೆ ನೀಡಿದ UIDAI

UIDAI Rule Rule For Aadhaar Update: ಸದ್ಯ ದೇಶದಲ್ಲಿ Aadhaar Card ಎಷ್ಟು ಮುಖ್ಯ ಎನ್ನುವುದು ಎಲ್ಲರಿಗು ತಿಳಿದೇ ಇದೆ. ಎಲ್ಲ ಸರ್ಕಾರೀ ಅಥವಾ ಸರ್ಕಾರೇತರ ಕೆಲಸಗಳಿಗೆ ಆಧಾರ್ ಮಾಹಿತಿ ಮುಖ್ಯ. ಹಾಗೆಯೆ ಎಲ್ಲ ಹಣಕಾಸಿನ ವಹಿವಾಟಿನಲ್ಲೂ ಆಧಾರ್ ಮಾಹಿತಿ ಮುಖ್ಯ ಪಾತ್ರ ವಹಿಸುತ್ತಿದೆ.

ಸದ್ಯ UIDAI ಆಧಾರ್ ಕುರಿತು ಜನರಿಗೆ ಹೊಸ ಹೊಸ ಅಪ್ಡೇಟ್ ನೀಡುತ್ತಲೇ ಬಂದಿದೆ. ಆಧಾರ್ ಹೊಂದಿರುವವರು UIDAI ನಿಯಮಾನುಸಾರ ನಡೆದುಕೊಳ್ಳಬೇಕಿದೆ. ಇನ್ನು ದೇಶದಲ್ಲಿ ಇತ್ತೀಚಿಗೆ ಹೆಚ್ಚು ಚಾಚ್ರೆಯಾಗುತ್ತಿರುವ ವಿಷಯವೆಯೆಂದರೆ ಅದು Aadhar Update.

UIDAI Rule Rule For Aadhaar Update
Image Credit: The Economic Times

ರದ್ದಾಗುತ್ತಾ 10 ವರ್ಷಗಳ ಹಳೆಯ ಆಧಾರ್ ಕಾರ್ಡ್…?
10 ವರ್ಷ ಹಳೆಯ ಆಧಾರ್ ಕಾರ್ಡ್ ಹೊಂದಿರುವವರು ಅಪ್ಡೇಟ್ ಮಾಡುವುದನ್ನು UIDAI ಕಡ್ಡಾಯಗೊಳಿಸಿದೆ. ಇದಕ್ಕಾಗಿ UIDAI ಹೊಸ ನವೀಕರಣ ನೀತಿಯನ್ನೇ ದೇಶದಲ್ಲಿ ಜಾರಿಗೆ ತಂದಿದೆ. ಇನ್ನು 10 ವರ್ಷ ಹಳೆಯ ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯವೇ..? ಎನ್ನುವ ಪ್ರಶ್ನೆ ಸಾಕಷ್ಟು ಜನರಲ್ಲಿ ಮೂಡಿರಬಹುದು.

UIDAI ಆಧಾರ್ ಅಪ್ಡೇಟ್ ಬಗ್ಗೆ ಏನು ಹೇಳುತ್ತದೆ..? ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಯನ್ನು ನವೀಕರಣಗೊಳ್ಳದಿದ್ದರೂ ಅದನ್ನು ಬಳಸಬಹುದೇ..? ಎನ್ನುವ ಗೊಂದಲ ನಿಮ್ಮಲ್ಲಿರಬಹುದು. ಆಧಾರ್ ನವೀಕರಣ ಕಡ್ಡಾಯವಾಗದಿದ್ದರು, ನವೀಕರಣಕ್ಕೆ ಅದರದ್ದೇ ಆದ ನಿಯಮವಿದೆ. ಮತ್ತು ಆದರೆ ಕಾರ್ಡ್ ವಿಷಯಕ್ಕೆ ಸಂಬಂಧಿಸಿದ ನಿಯಮಗಳನ್ನ ತಿಳಿದುಕೊಳ್ಳುವುದು ಅತೀ ಮುಖ್ಯವಾಗಿದೆ

UIDAI New Rules
Image Credit: currentaffairs

ಆಧಾರ್ ನವೀಕರಣಕ್ಕೆ UIDAI ಸ್ಪಷ್ಟನೆ
ನಿಮ್ಮ ವಿಳಾಸವನ್ನು ನವೀಕರಿಸದಿದ್ದರೂ ನೀವು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಬ್ಯಾಂಕ್ ಸ್ಟೇಟ್‌ ಮೆಂಟ್ ಅನ್ನು ಬಳಸಬಹುದು. ಆದಾಗ್ಯೂ, ನವೀಕರಿಸುವುದು ಕಡ್ಡಾಯವಲ್ಲ. ನೀವು 3 ವರ್ಷಗಳ ಕಾಲ ಒಂದೇ ವಿಳಾಸದಲ್ಲಿ ನಿರಂತರವಾಗಿ ವಾಸಿಸುತ್ತಿದ್ದರೂ ಮತ್ತು ಆಧಾರ್ ಅನ್ನು ನವೀಕರಿಸದಿದ್ದರೂ ಸಹ ಇದನ್ನು ಬಳಸಬಹುದು.

Join Nadunudi News WhatsApp Group

ಈ ಹಿಂದೆ UIDAI ಕೂಡ ಈ ಕುರಿತು ಪ್ರಕಟಣೆ ಹೊರಡಿಸಿತ್ತು. ಆಧಾರ್ ಅನ್ನು ನವೀಕರಿಸುವ ಮೂಲಕ ನಿಮ್ಮ ಛಾಯಾಚಿತ್ರವನ್ನು ಸಹ ನವೀಕರಿಸಲಾಗುತ್ತದೆ. ಆಧಾರ್ ನಲ್ಲಿನ ಛಾಯಾಚಿತ್ರ  ನವೀಕರಣ ಕೂಡ ಅಗತ್ಯ. ಆಧಾರ್ ಅನ್ನು ನವೀಕರಿಸುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಸರ್ಕಾರ ಸೌಲಭ್ಯವನ್ನು ಪಡೆಯಲು ಆಧಾರ್ ನವೀಕರಣ ಹೆಚ್ಚಿನ ಪಾತ್ರ ವಹಿಸುತ್ತದೆ. ಇನ್ನು ಅಪ್ಡೇಟ್ ಮಾಡದೆ ಇರುವ ಆಧಾರ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಸುದ್ದಿ ಸುಳ್ಳು ಎಂದು UIDAI ಸ್ಪಷ್ಟನೆ ಕೂಡ ನೀಡಿದೆ.

Join Nadunudi News WhatsApp Group