Free Gas 2023: ಇಂತಹ ಕುಟುಂಬಗಳಿಗೆ ಕೇಂದ್ರದಿಂದ ಉಚಿತ ಗ್ಯಾಸ್ ಸಂಪರ್ಕ, ಕೇಂದ್ರದ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ.

75 ಲಕ್ಷ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲು ಕೇಂದ್ರದ ನಿರ್ಧಾರ.

Ujjwala Yojana Latest Update: ನರೇಂದ ಮೋದಿ (Narendra Modi) ದೇಶದ ಪ್ರಮುಖ ನಾಯಕ ಎಂದು ಹೇಳಬಹುದು. ದೇಶದಲ್ಲಿ ಎರಡನೆಯ ಬಾರಿಗೆ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನರೇಂದ್ರ ಮೋದಿಯವರು ಅನೇಕ ಯೋಜನೆಗಳ ಅಡಿಯಲ್ಲಿ ಜನರಿಗೆ ಸಾಕಷ್ಟು ಸಹಾಯವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು.

ಇದರ ನಡುವೆ ದೇಶದಲ್ಲಿ ಸಾಕಷ್ಟು ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದು ಜನರ ಬೇಸರಕ್ಕೆ ಕಾರಣವಾಗುತ್ತಿದೆ. ಹೌದು ತರಕಾರಿಗಳ ಬೆಲೆ, ಬೇಳೆಕಾಳುಗಳ ಬೆಲೆ, ಪೆಟ್ರೋಲ್ ಡೀಸೆಲ್ ಬೆಲೆ ಮತ್ತು ಇನ್ನಿತರ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.

Announcement of free gas cylinder for 75 lakh families under Ujjwala Yojana
Image Credit: Dialabank

ಗ್ಯಾಸ್ ಬೆಲೆ ಇಳಿಕೆ ಮಾಡಿದ ಕೇಂದ್ರ ಸರ್ಕಾರ
ಹೌದು ತಿಂಗಳ ಆರಂಭದಲ್ಲಿ ಗ್ಯಾಸ್ ಬೆಲೆಯನ್ನ ಇಳಿಕೆ ಮಾಡುವುದರ ಮೂಲಕ ದೇಶದ ಜನರಿಗೆ ಸಂತಸದ ಸುದ್ದಿಯನ್ನ ನೀಡಿದ್ದ ಕೇಂದ್ರ ಸರ್ಕಾರ ಈಗ ಇನ್ನೊಂದು ಮಹತ್ವದ ಹೆಜ್ಜೆಯನ್ನ ಇಡಲು ತಯಾರಾಗಿದೆ ಎಂದು ಹೇಳಬಹುದು. ತಿಂಗಳ ಆರಂಭದಲ್ಲಿ ಗ್ಯಾಸ್ ಬೆಲೆಯಲ್ಲಿ ಸುಮಾರು 200 ರೂಪಾಯಿ ಇಳಿಕೆ ಮಾಡುವುದರ ಮೂಲಕ ದೇಶದ ಜನರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ ಈಗ ಇಂತಹ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲು ಮುಂದಾಗಿದೆ.

ದೇಶದ 75 ಲಕ್ಷ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್
ಕೇಂದ್ರ ಸರ್ಕಾರದ ಪ್ರಮುಖವಾದ ಯೋಜನೆಯಾದ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಈಗಾಗಲೇ ಸಾಕಷ್ಟು ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗಿದೆ ಎಂದು ಹೇಳಬಹುದು. ಹೌದು ಲಕ್ಷಾಂತರ ಜನರು ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ (Ujjwala Yojana) ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಂಡಿದ್ದಾರೆ. ಸದ್ಯ ಇದರ ಬೆನ್ನಲ್ಲೇ ಈಗ 2023 ರ ಅವಧಿಯಲ್ಲಿ 70 ಲಕ್ಷ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರ ಮತ್ತೆ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲು ಮುಂದಾಗಿದೆ.

Ujjwala Yojana Latest Update
Image Credit: Financialexpress

ಮೂರೂ ವರ್ಷಗಳ ಕಾಲ ವಿಸ್ತರಣೆಯಾದ ಉಜ್ವಲ ಯೋಜನೆ
ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನ ಮುಂದಿನ ಮೂರೂ ವರ್ಷಗಳ ಕಾಲ ವಿಸ್ತರಣೆ ಮಾಡಲು ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನವನ್ನ ತಗೆದುಕೊಳ್ಳಲಾಗಿದೆ. 1650 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನ ವಿಸ್ತರಣೆ ಮಾಡಲು ತೀರ್ಮಾನವನ್ನ ಮಾಡಲಾಗಿದೆ ಎಂದು ಹೇಳಬಹುದು.

Join Nadunudi News WhatsApp Group

ಸಾಮಾನ್ಯ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ 200 ರೂ ಇಳಿಕೆ ಮಾಡಿದ್ದ ಕೇಂದ್ರ ಸರ್ಕಾರ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಿಲಿಂಡರ್ ಪಡೆಯುವವರಿಗೆ 400 ರೂಪಾಯಿ ಇಳಿಕೆ ಮಾಡುವುದರ ಜೊತೆಗೆ ಈಗ ಯೋಜನೆಯನ್ನ ಮತ್ತಷ್ಟು ವಿಸ್ತರಣೆ ಮಾಡಿದೆ ಎಂದು ಹೇಳಬಹುದು.

ಉಜ್ವಲ ಯೋಜನೆಯ ಅಡಿಯಲ್ಲಿ 200 ರೂ ಇಳಿಕೆ ಮತ್ತು ಸಬ್ಸಿಡಿಯಾಗಿ 200 ರೂ ಫಲಾನುಭವಿಗಳ ಖಾತೆ ಸೇರಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಮತ್ತೆ 75 ಲಕ್ಷ ಕುಟುಂಬ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲಿದೆ.

Join Nadunudi News WhatsApp Group