uniform Law: ಒಂದೇ ಭಾರತ ಒಂದೇ ಕಾನೂನು, ಏಕರೂಪದ ಕಾನೂನು ಯಾರು ಯಾರಿಗೆ ಅನ್ವಯ, ಕೇಂದ್ರದ ಘೋಷಣೆ.

ಕೇಂದ್ರ ಸರ್ಕ್ರ ಏಕರೂಪದ ಕಾನೂನು ಜಾರಿಗೆ ತರಲು ನಿರ್ಧಾರ ಮಾಡಿದ್ದು, ಈ ನಿಯಮ ಯಾರು ಯಾರಿಗೆ ಅನ್ವಯ ಆಗಲಿದೆ ತಿಳಿದುಕೊಳ್ಳಿ.

Uniform Civil Code: ಇದೀಗ ಏಕರೂಪದ ನಾಗರಿಕ ಸಂಹಿತೆ ಕುರಿತು ಚರ್ಚೆ ಆಗುತ್ತಿದೆ. ಏಕರೂಪದ ನಾಗರಿಕ ಸಂಹಿತೆ ಎಂದರೇನು ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ. ಏಕರೂಪದ ನಾಗರಿಕ ಸಂಹಿತೆ ಎಂದರೆ ಇಡೀ ದೇಶದಲ್ಲಿ ಪ್ರತಿಯೊಂದು ಜಾತಿ ಧರ್ಮ, ಜಾತಿ ಪಂಗಡ, ವರ್ಗಕ್ಕೆ ಒಂದೇ ನಿಯಮವಿರುವುದು.

ಏಕರೂಪ ನಾಗರಿಕ ಸಂಹಿತೆಯು ಜಾತ್ಯತೀತ ಕಾನೂನಾಗಿದ್ದು ಅದರ ಆನುಷ್ಠಾನವಾದರೆ ಬೇರೆಲ್ಲ ಧರ್ಮಗಳ ವೈಯಕ್ತಿಕ ಕಾನೂನುಗಳು ಅಂತ್ಯಗೊಳ್ಳುತ್ತದೆ.

Find out who the uniform law applies to.
Image Credit: latimes

ಏಕರೂಪದ ನಾಗರಿಕ ಸಂಹಿತೆ
ಇದೀಗ ಹಿಂದೂ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳು ವಿಭಿನ್ನ ಧಾರ್ಮಿಕ ಕಾನೂನುಗಳನ್ನು ಹೊಂದಿವೆ. ಹಿಂದೂ ಕಾನೂನು ಬುದ್ಧ ಜೈನ ಮತ್ತು ಸಿಖ್ ಧರ್ಮಗಳ ಅನುಯಾಯಿಗಳಿಗೂ ಅನ್ವಯಿಸುತ್ತದೆ. ವೀಲ್ ಮತ್ತು ಮದುವೆಯಂತಹ ವಿಷಯಗಳಲ್ಲಿ ಈ ಕಾನೂನುಗಳನ್ನು ಪಾಲಿಸಬೇಕು.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶಕ್ಕೆ ಏಕರೂಪದ ಕಾನೂನಿನ ಜೊತೆಗೆ ಮದುವೆ, ವಿಚ್ಚೇಧನ, ಉತ್ತರಾಧಿಕಾರ, ದತ್ತು ಸ್ವೀಕಾರ ನಿಯಮಗಳು ಎಲ್ಲ ಧಾರ್ಮಿಕ ಸಮುದಾಯಗಳಿಗೆ ಒಂದೇ ಆಗಿರುತ್ತದೆ.

ಏಕರೂಪದ ನಾಗರಿಕ ಕಾನೂನು
ಸಂವಿಧಾನದ 44 ನೇ ವಿಧಿಯಲ್ಲಿ ಎಲ್ಲ ನಾಗರಿಕರಿಗೂ ಸಮಾನ ಕಾನೂನನ್ನು ಜಾರಿಗೆ ತರಲು ಹೇಳಲಾಗಿದೆ. ಆರ್ಟಿಕಲ್ 44 ಅನ್ನು ಸಂವಿಧಾನದ ನಿರ್ದೇಶನ ತತ್ವಗಳಲ್ಲಿ ಸೇರಿಸಲಾಗಿದೆ. ಭಾರತದಲ್ಲಿ ಎಲ್ಲಾ ನಾಗರಿಕರಿಗೆ ಏಕರೂಪದ ಕ್ರಿಮಿನಲ್ ಕೋಡ್ ಇದೆ. ಆದರೆ ಏಕರೂಪದ ನಾಗರಿಕ ಕಾನೂನು ಇಲ್ಲ.

Join Nadunudi News WhatsApp Group

Now the central government has come forward to implement a single law for all the citizens of the country.
Image Credit: india

ಏಕರೂಪದ ನಾಗರಿಕ ಸಂಹಿತೆ UCC ಭಾರತದಲ್ಲಿ ಎಲ್ಲಾ ಕಡೆಯೂ ಅನ್ವಯಿಸುತ್ತದೆ. ಸುಪ್ರೀಂ ಕೋರ್ಟ್ ತನ್ನ ನಿರ್ಧಾರಗಳಲ್ಲಿ ಏಕರೂಪ ನಾಗರೀಕ ಸಂಹಿತೆಯ ಅನುಷ್ಠಾನಕ್ಕೆ ಹಲವು ಬಾರಿ ಒತ್ತಾಯಿಸುತ್ತದೆ. 1835 ರಲ್ಲಿ ಬ್ರಿಟಿಷ್ ಸರ್ಕಾರದ ವರದಿಯಲ್ಲಿ ಏಕರೂಪ ನಾಗರಿಕ ಸಂಹಿತೆಯ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಇದರಲ್ಲಿ ಅಪರಾಧಗಳು, ಸಾಕ್ಷ್ಯಗಳು ಮತ್ತು ಒಪ್ಪಂದಗಳಂತಹ ವಿಷಯಗಳ ಬಗ್ಗೆ ಏಕರೂಪದ ಕಾನೂನು ಅನ್ವಯಿಸುವ ಅಗತ್ಯವಿದೆ ಎಂದು ಹೇಳಲಾಗಿದೆ.

Join Nadunudi News WhatsApp Group