Unihertz Jelly Star: ಕಡಿಮೆ ಬೆಲೆಗೆ ಬಿಡುಗಡೆಯ್ತು ಪ್ರಪಂಚದ ಅತಿ ಚಿಕ್ಕ ಸ್ಮಾರ್ಟ್ ಫೋನ್.

ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ದೈತ್ಯ ಯುನಿಹರ್ಟ್ಜ್ (Unihertz) ಕಂಪನಿ ಜೆಲ್ಲಿ ಸ್ಟಾರ್ ಎಂಬ ಹೆಸರಿನ ವಿಶ್ವದ ಅತ್ಯಂತ ಚಿಕ್ಕ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

Unihertz Jelly Star Smartphone: ಸ್ಮಾರ್ಟ್ ಫೋನ್(Smart Phone) ಖರೀದಿ ಮಾಡುವವರಿಗಂತೂ ಮಾರುಕಟ್ಟೆಯಲ್ಲಿ ಕೊರತೆಯಿಲ್ಲ ಎನ್ನಬಹುದು. ಏಕೆಂದರೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗಿವೆ. ನಿಮಗೆ ಬೇಕಾದ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಇದೀಗ ವಿಶ್ವದ ಅತ್ಯಂತ ಚಿಕ್ಕ ಫೋನ್ ಒಂದು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ದೈತ್ಯ ಯುನಿಹರ್ಟ್ಜ್ (Unihertz) ಕಂಪನಿ ಜೆಲ್ಲಿ ಸ್ಟಾರ್ ಎಂಬ ಹೆಸರಿನ ವಿಶ್ವದ ಅತ್ಯಂತ ಚಿಕ್ಕ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

Unihertz Jelly Star Smartphone
Image Source: Gadgets

ಜೆಲ್ಲಿ ಸ್ಟಾರ್ ಸ್ಮಾರ್ಟ್ ಫೋನ್
ಈ ಸ್ಮಾರ್ಟ್ ಫೋನ್ 3 ಇಂಚಿನ ಡಿಸ್ ಪ್ಲೇ ಮತ್ತು ಟ್ರಾನ್ಫರೆಂಟ್ ಡಿಸೈನ್ ಅನ್ನು ಹೊಂದಿದೆ. ವಿಶೇಷ ಎಂದರೆ, ಈ ಫೋನ್ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಸ್ಮಾರ್ಟ್‌ಫೋನ್ ವಿಶ್ವದ ಅತ್ಯಂತ ಚಿಕ್ಕ ಫೋನ್ ಆಗಿದೆ. ಯುನಿಹರ್ಟ್ಜ್ ಜೆಲ್ಲಿ ಸ್ಟಾರ್ (Jelly Star) ಸ್ಮಾರ್ಟ್‌ಫೋನ್​ನ ಹಿಂಭಾಗ ನಥಿಂಗ್ ಫೋನ್ 1 ರಂತೆಯೇ ಪಾರದರ್ಶಕ ವಿನ್ಯಾಸದೊಂದಿಗೆ LED ಗಳನ್ನು ಹೊಂದಿದೆ. ಇದಲ್ಲದೆ, ಫೋನ್‌ ನ ಒಳಭಾಗವನ್ನು ಹೊರಗಿನಿಂದಲೂ ನೋಡಬಹುದಾಗಿದೆ.

ಜೆಲ್ಲಿ ಸ್ಟಾರ್ ಸ್ಮಾರ್ಟ್ ಫೋನ್ ನ ಬೆಲೆ
ಜೆಲ್ಲಿ ಸ್ಟಾರ್ ಸ್ಮಾರ್ಟ್ ಫೋನ್ ಕೇವಲ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಅದರಂತೆ ಇದರ 8 GB RAM + 256 GB ಸ್ಟೋರೇಜ್ ಆಯ್ಕೆಗೆ ಭಾರತದಲ್ಲಿ ಸುಮಾರು 17000 ರೂಪಾಯಿ ಇರಬಹುದೆಂದು ಹೇಳಲಾಗುತ್ತಿದೆ. ಸದ್ಯಕ್ಕೆ ಇದು ಹಾಂಗ್ ಕಾಂಗ್ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿದೆ. ಅಕ್ಟೋಬರ್‌ನಲ್ಲಿ ಭಾರತಕ್ಕೂ ಕಾಲಿಡುವ ನಿರೀಕ್ಷೆಯಿದೆ. ಇದು ಮೈಕ್ರೊ ಎಸ್‌ಡಿ ಕಾರ್ಡ್‌ಗಾಗಿ ಪೋರ್ಟ್ ಅನ್ನು ಸಹ ಹೊಂದಿದೆ.

ಜೆಲ್ಲಿ ಸ್ಟಾರ್ ಸ್ಮಾರ್ಟ್ ಫೋನ್ 48 ಮೆಗಾ ಪಿಕ್ಸೆಲ್ ಸಾಮರ್ಥ್ಯದ ಏಕೈಕ ಹಿಂದಿನ ಕ್ಯಾಮೆರಾವನ್ನು ಹೊಂದಿದೆ. ಫೋನ್ ನ ಮುಂಭಾಗವು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಈ ಚಿಕ್ಕ ಸ್ಮಾರ್ಟ್‌ಫೋನ್ 2000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಕಂಪನಿಯ ಪ್ರಕಾರ, ಫೋನ್ ಒಂದು ಚಾರ್ಜ್‌ನಲ್ಲಿ ಒಂದು ದಿನದವರೆಗೆ ಬ್ಯಾಕಪ್ ಅನ್ನು ಒದಗಿಸುತ್ತದಂತೆ.

Join Nadunudi News WhatsApp Group

Unihertz Jelly Star Smartphone
Image Source: Notebook check

Join Nadunudi News WhatsApp Group