Calls Mute: ವಾಟ್ಸಾಪ್ ನಲ್ಲಿ ಅಪರಿಚಿತ ಕರೆ ಮ್ಯೂಟ್ ಮಾಡುವ ಸಿಂಪಲ್ ವಿಧಾನ

ಈ ವಿಧಾನದ ಮೂಲಕ ವಾಟ್ಸಾಪ್ ನಲ್ಲಿ ಅಪರಿಚಿತ ಕರೆಗಳನ್ನ ಮ್ಯೂಟ್ ಮಾಡಬಹುದು.

Silence Unknown Callers: ಮೆಟಾ ಮಾಲೀಕತ್ವದ ವಾಟ್ಸಾಪ್ (WhatsApp) ಇತ್ತೀಚಿಗೆ ವಿವಿಧ ವೈಶಿಷ್ಟ್ಯಗಳೊಂದಿದೆ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಹಲವು ವಿಭಿನ್ನ ಫೀಚರ್ ಗಳನ್ನೂ ಪರಿಚಯಿಸುವ ಮೂಲಕ ಬಳಕೆದಾರರರನ್ನು ಆಕರ್ಷಿಸುತ್ತಿದೆ.

ಈಗಾಗಲೇ ವಾಟ್ಸಾಪ್ ಚಾಟಿಂಗ್ ಸಿಸ್ಟಮ್ ನಲ್ಲಿ ಅನೇಕ ಬದಲಾವಣೆ ಆಗಿದ್ದು ಬಳಕೆದಾರರು ವಿವಿಧ ರೀತಿಯ ಅನುಕೂಲವನ್ನು ಪಡೆಯುತ್ತಿದ್ದಾರೆ. ಇದೀಗ ವಾಟ್ಸಾಪ್ ನಲ್ಲಿ ಹೊಸ ಫೀಚರ್ ಬರಲಿದೆ.ಈ ಫೀಚರ್ ವಾಟ್ಸಾಪ್ ಬಳಕೆದಾರರಿಗೆ ಇನ್ನಷ್ಟು ಹೆಚ್ಚಿನ ಬದ್ರತೆ ನೀಡಲಿದೆ.

Silence Unknown Callers
Image Source: Gizbot Kannada

ಸೈಲೆಂಟ್ ಅನ್ನೋನ್ನ್ ಕಾಲ್ಸ್
ವಾಟ್ಸಾಪ್ ನಲ್ಲಿ ಇದೀಗ ಸೈಲೆಂಟ್ ಅನ್ನೋನ್ನ್ ಕಾಲ್ಸ್ ಫೀಚರ್ ಪರಿಚಯವಾಗಲಿದೆ. ಈ ಹೊಸ ಫೀಚರ್ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳನ್ನು ಆಟೋಮ್ಯಾಟಿಕ್ ಆಗಿ ಮ್ಯೂಟ್ ಮಾಡಲು ಸಹಕಾರಿಯಾಗಿದೆ. ವಾಟ್ಸಾಪ್ ನಲ್ಲಿ ಸ್ಪ್ಯಾಮ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಈ ಸೈಲೆಂಟ್ ಅನ್ನೋನ್ನ್ ಕಾಲ್ಸ್ ಫೀಚರ್ ಅನ್ನು ಕಂಪನಿಯು ಪರಿಚಯಿಸಲು ನಿರ್ಧರಿಸಿದೆ. ಈ ಫೀಚರ್ ಸ್ಪ್ಯಾಮ್,ವಂಚನೆ ಮತ್ತು ಅಪರಿಚಿತ ಸಂಖ್ಯೆಯ ಕರೆಗಳನ್ನು ನಿರ್ಬಂಧಿಸುತ್ತದೆ.

ಸೈಲೆಂಟ್ ಅನ್ನೋನ್ನ್ ಕಾಲ್ಸ್ ಫೀಚರ್ ಬಳಸುವ ವಿಧಾನ
ವಾಟ್ಸಾಪ್ ಬಳಕೆದಾರರು ಮೊದಲಿಗೆ ಸೆಟ್ಟಿಂಗ್ ಗೆ ಹೋಗಿ ಅಲ್ಲಿ ಬಲಭಾಗದಲ್ಲಿ ಕಾಣುವ ಚುಕ್ಕೆಯನ್ನು ಆರಿಸಿದರೆ ಐಓಎಸ್ ನಲ್ಲಿ ಎಡಮೂಲೆಯಲ್ಲಿ ಸೆಟ್ಟಿಂಗ್ ಐಕಾನ್ ಅನ್ನು ಆಯ್ಕೆ ಮಾಡಬೇಕು. ನಂತರ ಪ್ರೈವಸಿ ಆಯ್ಕೆಯನ್ನು ಆರಿಸಿ ಕಾಲ್ಸ್ ಆಯ್ಕೆ ಮಾಡಿ ನಂತರ ಸೈಲೆಂಟ್ ಅನ್ನೋನ್ನ್ ಕಾಲ್ಸ್ ಎಂಬ ಆಯ್ಕೆ ಕಾಣುತ್ತದೆ. ಈ ಆಯ್ಕೆಯನ್ನು ಆನ್ ಮಾಡಿದರೆ ನಿಮ್ಮ ಮೊಬೈಲ್ ನಲ್ಲಿ ಅಪರಿಚಿತ ಕಾಲ್ ಅನ್ನು ಮ್ಯೂಟ್ ಮಾಡುವ ಫೀಚರ್ ಆಕ್ಟಿವೇಟ್ ಆಗುತ್ತದೆ.

Silence Unknown Callers
Image Source: Kannada News

ವಾಟ್ಸಾಪ್ ಪಿನ್ ಚಾಟ್ ನಲ್ಲಿ ಮತ್ತೊಂದು ಅಪ್ಡೇಟ್
ಇನ್ನು ವಾಟ್ಸಾಪ್ ನಲ್ಲಿ ಈಗಾಗಲೇ ಚಾಟ್ ಪಿನ್ ಫೀಚರ್ ಬಿಡುಗಡೆಗೊಂಡಿದೆ. WhatsApp Pin Duration ಆಯ್ಕೆ ಇನ್ನುಮುಂದೆ ಬಳಕೆದಾರರಿಗೆ ಲಭ್ಯವಾಗಲಿದೆ. ಬಳಕೆದಾರರು ಚಾಟ್ ಮತ್ತು ಗ್ರೂಪ್ ನಲ್ಲಿ ಪಿನ್ ಮಾಡಿ ಇಟ್ಟಿರುವ ಮುಖ್ಯ ಸಂದೇಶಗಳಿಗೆ ಟೈಮರ್ ಅಳವಡಿಸಲು ಸಾಧ್ಯವಾಗಲಿದೆ. 24 ಗಂಟೆಗಳು, ಏಳು ದಿನಗಳು ಹಾಗೂ 30 ದಿನಗಳ ಎನ್ನುವ ಮೂರು ಆಯ್ಕೆಗಳನ್ನು ಬಳಕೆದಾರರಿಗೆ ನೀಡಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group