Mission Shakti Abhiyan: ಮಹಿಳೆಯರಿಗಾಗಿ ಜಾರಿಗೆ ತಂದು ಇನ್ನೊಂದು ಯೋಜನೆ, ಎಲೆಕ್ಟ್ರಿಕ್ ರಿಕ್ಷಾ ಖರೀದಿಗೆ ಸರ್ಕಾರದಿಂದ ಸಬ್ಸಿಡಿ

ಮಹಿಳೆಯರಿಗಾಗಿ ಬಂತು ಇನ್ನೊಂದು ಯೋಜನೆ, ಎಲೆಕ್ಟ್ರಿಸಿ ರಿಕ್ಷಾ ಖರೀದಿಯ ಸರ್ಕಾರದಿಂದ ಸಬ್ಸಿಡಿ

UP Government Mission Shakti Abhiyan: ದೇಶದಲ್ಲಿ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಅನೇಕ ಯೋಜನೆಯನ್ನ ಜಾರಿಗೆ ತರಲಾಗುತ್ತಿದೆ ಎಂದು ಹೇಳಬಹುದು. ಹೌದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಹಿಳೆಯರಿಗಾಗಿ ಹಲವು ವಿಶೇಷ ಯೋಜನೆಯನ್ನ ಜಾರಿಗೆ ತರಲಾಗುತ್ತಿದ್ದು ಈ ಎಲ್ಲಾ ಯೋಜನೆಗಳ ಲಾಭವನ್ನ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಇದರ ನಡುವೆ ಈಗ ಎಲೆಕ್ಟ್ರಿಕ್ ರಿಕ್ಷಾ ಖರೀದಿ ಮಾಡುವ ಮಹಿಳೆಯರಿಗೆ ಸಬ್ಸಿಡಿ ಯೋಜನೆಯನ್ನ ಪರಿಚಯಿಸಲಾಗಿದ್ದು ಇದು ಸಾಕಷ್ಟು ಮಹಿಳೆಯರ ಸಂತಸಕ್ಕೆ ಕಾರಣವಾಗಿದೆ. ಹಾಗಾದರೆ ಯಾವ ಮಹಿಳೆಯರಿಗೆ ಈ ಸಬ್ಸಿಡಿ ಲಾಭ ಸಿಗಲಿದೆ ಮತ್ತು ಯಾವ ರಾಜ್ಯದಲ್ಲಿ ಈ ಯೋಜನೆ ಜಾರಿಗೆ ಬಂದಿರುತ್ತದೆ ಅನ್ನುವುದರ ಬಗ್ಗೆ ತಿಳಿಯೋಣ.

UP Government Mission Shakti Abhiyan
Image Credit: Navodayatimes

ಸಬ್ಸಿಡಿ ಅಡಿಯಲ್ಲಿ ಇ-ರಿಕ್ಷಾ ವಿತರಣೆ

ಮಿಷನ್ ಶಕ್ತಿ ಅಭಿಯಾನದ ಅಡಿಯಲ್ಲಿ, ಮಹಿಳೆಯರು ಸ್ವಯಂ ಉದ್ಯೋಗಿಗಳಾಗಲು ಸಹಾಯ ಮಾಡುವ ತರಬೇತಿ ಮತ್ತು ಸಬ್ಸಿಡಿ ಇ-ರಿಕ್ಷಾಗಳನ್ನು ಪಡೆಯುತ್ತಾರೆ. ಈ ಕಾರ್ಯಕ್ರಮವು ಪ್ರತಿ ಜಿಲ್ಲೆಯಲ್ಲಿ 250 ಉದ್ಯೋಗಿ ಉದ್ಯಮಿ ಮಹಿಳೆಯರಿಗೆ 60 ದಿನಗಳ ತರಬೇತಿ ಕೋರ್ಸ್ ಅನ್ನು ಒಳಗೊಂಡಿದೆ. ಉತ್ತರ ಪ್ರದೇಶ ರಾಜ್ಯದಲ್ಲಿ ಸುಮಾರು 20,000 ಮಹಿಳೆಯರಿಗೆ ತರಬೇತಿ ನೀಡಿ ಸಬಲೀಕರಣಗೊಳಿಸುವುದು ಗುರಿಯಾಗಿದೆ.

ಹೆಚ್ಚುವರಿಯಾಗಿ, ಪ್ರಾದೇಶಿಕ ಸಾರಿಗೆ ಕಚೇರಿ (RTO) ನೊಂದಿಗೆ ಸಮನ್ವಯ ಸಾಧಿಸುವ ಮೂಲಕ ಇ-ರಿಕ್ಷಾಗಳಿಗೆ ಚಾಲನಾ ಪರವಾನಗಿಯನ್ನು ಪಡೆಯಲು ತರಬೇತಿ ಪಡೆದ ಮಹಿಳೆಯರಿಗೆ ಸರ್ಕಾರವು ಸಹಾಯ ಮಾಡುತ್ತದೆ. ಇನ್ನು ಸಬ್ಸಿಡಿ ಯೋಜನೆಯನ್ನ ಉತ್ತರ ಪ್ರದೇಶದ ಮುಖ್ಯ ಮಂತ್ರಿಯಾದ ಯೋಗಿ ಆದಿತ್ಯನಾಥ್ ಅವರು ಅವರು ಜಾರಿಗೆ ತಂದಿರುತ್ತಾರೆ. ಉತ್ತರ ಪ್ರದೇಶದ ಅರ್ಹ ಮಹಿಳೆಯರು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳಬಹುದಾಗಿದೆ. ಲೈಸೆನ್ಸ್ ಪಡೆದ ಮಹಿಳೆಯರಿಗೆ ಸಬ್ಸಿಡಿ ದರದಲ್ಲಿ ಆಟೋ ರಿಕ್ಷಾ ನೀಡಲಾಗುತ್ತದೆ.

Join Nadunudi News WhatsApp Group

UP Government E Auto Rickshaw Subsidy
Image Credit: Cleanmobilityshift

ಮಹಿಳಾ ಸಬಲೀಕರಣಕ್ಕೆ ಉತ್ತೇಜನ

ಉತ್ತರ ಪ್ರದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ರಫ್ತು ಉತ್ತೇಜನ ಇಲಾಖೆಯು ನಡೆಸುತ್ತಿರುವ ಮುಖ್ಯಮಂತ್ರಿ ಸ್ವರೋಜ್‌ಗಾರ್ ಯೋಜನೆ ಮೂಲಕ ತರಬೇತಿ ಪಡೆದ ಮಹಿಳೆಯರಿಗೆ ಕಡಿಮೆ ಬಡ್ಡಿದರದ ಸಾಲವನ್ನು ನೀಡಲಾಗುತ್ತದೆ. ಈ ಉಪಕ್ರಮವು ಮಹಿಳಾ ಸಬಲೀಕರಣವನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುತ್ತದೆ, ಪ್ರತಿ ಜಿಲ್ಲೆಯಲ್ಲೂ ಮಹಿಳೆಯರನ್ನು ಬಲಿಷ್ಠ, ಸುರಕ್ಷಿತ ಮತ್ತು ಸ್ವಾವಲಂಬಿಗಳನ್ನಾಗಿ ಮಾಡುವತ್ತ ಗಮನಹರಿಸುತ್ತದೆ. ಮಹಿಳೆಯರು ಈ ಯೋಜನೆಯಡಿ ಆರ್ಥಿಕವಾಗಿ ಪ್ರಬಲರಾಗಲು ಹಾಗು ಸ್ವಾವಲಂಬನೆಯಿಂದ ಜೀವನ ನೆಡೆಸಲು ಸಹಕಾರಿ ಆಗಿದೆ.

Join Nadunudi News WhatsApp Group