Thar 5 Door: ಥಾರ್ 5 ಡೋರ್ ಕಾಯುತ್ತಿರುವವರಿಗೆ ಬಿಗ್ ಅಪ್ಡೇಟ್, ಥಾರ್ 5 ಡೋರ್ ಕಾರಿನ ಬೆಲೆ ಮತ್ತು ಮೈಲೇಜ್ ಎಷ್ಟು…?

ಮಹಿಂದ್ರಾ ಥಾರ್ 5 ಕಾರಿನ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಮಹಿಂದ್ರಾ

Mahindra Thar 5 Door Update: ಮಹಿಂದ್ರಾ ಥಾರ್ (Mahindra Thar) ದೇಶದ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಹೌದು ದೇಶದಲ್ಲಿ ಸಾಕಷ್ಟು ಜನರು ಖರೀದಿ ಮಾಡಿರುವ ಕಾರುಗಳಲ್ಲಿ ಮಹಿಂದ್ರಾ ಥಾರ್ ಅಗ್ರ ಸ್ಥಾನದಲ್ಲಿ ಇದೆ ಎಂದು ಹೇಳಿದರೆ ತಪ್ಪಗಲ್ಲ.

ಹೌದು ಮಹಿಂದ್ರಾ ಕಂಪನಿಯ ಥಾರ್ ಕಾರು ದೇಶದಲ್ಲಿ ಅತೀ ಸೇಲ್ ಆದ ಕಾರುಗಳ ಪಟ್ಟಿಯಲ್ಲಿ ಒಂದಾಗಿದೆ. ಸದ್ಯ ದೇಶದಲ್ಲಿ ಥಾರ್ ಕಾರಿಗೆ ಪೈಪೋಟಿ ಕೊಡಲು ಕೆಲವು ಕಂಪನಿಗಳು ಬೇರೆ ಬೇರೆ ಮಾದರಿಯ ಕಾರನ್ನ ಮಾರುಕಟ್ಟೆಗೆ ಲಾಂಚ್ ಮಾಡುತ್ತಿದೆ. ಇದರ ನಡುವೆ ಮಹಿಂದ್ರಾ ಥಾರ್ 5 ಡೋರ್ ಕಾರಿಗಾಗಿ ಜನರು ಕಾಯುತ್ತಿದ್ದಾರೆ ಎಂದು ಹೇಳಬಹುದು.

Mahindra Thar 5 Door Update
Image Credit: Gaadiwaadi

ಮಹಿಂದ್ರಾ ಥಾರ್ 5 ಡೋರ್ ಕಾರಿಗಾಗಿ ಕಾಯುತ್ತಿದ್ದಾರೆ ಜನರು
ಹೌದು ದೇಶದಲ್ಲಿ ಮಹಿಂದ್ರಾ ಥಾರ್ 5 ಕಾರಿಗೆ ಬೇಡಿಕೆ ಬಹಳ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ದೇಶದಲ್ಲಿ ಸದ್ಯ ಮಹಿಂದ್ರಾ ಥಾರ್ 3 ದೂರ ಕಾರ್ ಇದ್ದು ದೇಶದಲ್ಲಿ ಸಾಕಷ್ಟು ಸೇಲ್ ಕಾಣುತ್ತಿದೆ. ಇದರ ನಡುವೆ ಈಗ ಮಹಿಂದ್ರಾ 5 ಆಸನಗಳ ಥಾರ್ ಕಾರನ್ನ ಮಾರುಕಟ್ಟೆಗೆ ಲಾಂಚ್ ಮಾಡಲು ತೀರ್ಮಾನವನ್ನ ಮಾಡಿದೆ. ಸದ್ಯ ಮಹಿಂದ್ರಾ 5 ಆಸನಗಳ ಥಾರ್ ಕಾರಿನ ಬಗ್ಗೆ ಬಿಗ್ ಅಪ್ಡೇಟ್ ನೀಡಿದೆ ಎಂದು ಹೇಳಬಹುದು.

ಮಹಿಂದ್ರಾ ಥಾರ್ 5 ಡೋರ್ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಮಹಿಂದ್ರಾ
ಮಹಿಂದ್ರಾ ಥಾರ್ ದೇಶದಲ್ಲಿ ಅತೀ ಹೆಚ್ಚು ಸೇಲ್ ಆಗಿರುವ SUV ಗಳಲ್ಲಿ ಒಂದಾಗಿದೆ. ಸದ್ಯ ತನ್ನ ಸೇಲ್ ಹೆಚ್ಚಳ ಮಾಡಲು ಮುಂದಾಗಿರುವ ಮಹಿಂದ್ರಾ ಈಗ 5 ಕಾರನ್ನ ಮಾರುಕಟ್ಟೆಗೆ ಲಾಂಚ್ ಮಾಡಲು ತೀರ್ಮಾನವನ್ನ ಮಾಡಿದೆ. ಮಹಿಂದ್ರಾ ಥಾರ್ ಮೊದಲ ಮಾದರಿಗಿಂತ ಉದ್ದವಾಗಿರಲಿದ್ದು ಅದರ ಟೆಸ್ಟ್ ಡ್ರೈವ್ ಕೂಡ ಮಾಡಲಾಗಿದೆ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ಮಹಿಂದ್ರಾ ಥಾರ್ 5 ಕಾರಿನಲ್ಲಿ ಯಾವ ಯಾವ ಫೀಚರ್ ಇರಲಿದೆ ಅನ್ನುವುದರ ಬಗ್ಗೆ ತಿಳಿಯಲಿದೆ ಎಂದು ಮಹಿಂದ್ರಾ ಮಾಹಿತಿ ನೀಡಿದೆ.

Mahindra Thar 4x4 Price
Image Credit: Navbharattimes

ಮಹಿಂದ್ರಾ ಥಾರ್ 5 ಬೆಲೆ ಮತ್ತು ಮೈಲೇಜ್ ಎಷ್ಟು
ಸದ್ಯ ಮಾರುಕಟ್ಟೆಯಲ್ಲಿ ಮಹಿಂದ್ರಾ ಥಾರ್ 5 ಡೋರ್ ಬಗ್ಗೆ ಅಪ್ಡೇಟ್ ಬಂದಿದ್ದೆ ತಡ ಕಾರಿನ ಬೆಲೆ ಮತ್ತು ಮೈಲೇಜ್ ಬಗ್ಗೆ ಚರ್ಚೆ ಉದ್ಭವ ಆಗಿದೆ ಎಂದು ಹೇಳಬಹುದು. ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಮಹಿಂದ್ರಾ ಥಾರ್ 5 ಆಸನಗಳ ಆರಂಭಿಕ ಬೆಲೆ ಸುಮಾರು 15 ಲಕ್ಷ ರೂ ಇದ್ದು ಟಾಪ್ ಎಂಡ್ ಬೆಲೆ ಸುಮಾರು 22 ಲಕ್ಷ ರೂ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಇನ್ನು ಮೈಲೇಜ್ ವಿಷಯಕ್ಕೆ ಬರುವುದಾದರೆ, ಮಹಿಂದ್ರಾ ಥಾರ್ 5 ಸುಮಾರು 14 ರಿಂದ 16 ಕಿಲೋಮೀಟರ್ ಮೈಲೇಜ್ ಕೊಡಲಿದೆ ಎಂದು ಅಂದಾಜು ಮಾಡಲಾಗಿದೆ. ಅದೇ ರೀತಿಯಲ್ಲಿ ಈ ಕಾರಿನಲ್ಲಿ ಸುಮಾರು 6 ಏರ್ ಬ್ಯಾಗ್ ಇರಲಿದೆ ಎಂದು ತಿಳಿದುಬಂದಿದೆ.

Join Nadunudi News WhatsApp Group

Join Nadunudi News WhatsApp Group