Upendra Prajaakeeya: ನಾನು ಬದುಕಿದ್ದಾಗಲೇ ಸಾಯಬೇಕು ಅಂದ ಉಪೇಂದ್ರ, ಗೊಂದಲಕ್ಕೆ ಒಳಗಾದ ಜನರು.

ನಾನು ಬದುಕಿದ್ದಾಗಲೇ ಸಾಯಬೇಕು ಎಂದು ಹೇಳಿಕೆ ನೀಡಿದ ನಟ ಉಪೇಂದ್ರ, ಗೊಂದಲಕ್ಕೆ ಒಳಗಾದ ಫ್ಯಾನ್ಸ್.

Actor Upendra Facebook Live: ಇದೀಗ ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ರಾಜಕೀಯ ಮುಖಂಡರು ತಮ್ಮ ತಮ್ಮ ಪಕ್ಷದ ಪ್ರಚಾರ ಕಾರ್ಯ ಮುಗಿಸಿದ್ದಾರೆ. ನಿನ್ನೆ ಸಂಜೆಯಿಂದ ಪ್ರಚಾರ ಕಾರ್ಯಕ್ಕೆ ತಡೆಬಿದ್ದಿದೆ.

ಇನ್ನು ನಾಳೆ ರಾಜ್ಯದಾದ್ಯಂತ ಚುನಾವಣೆ ನಡೆಯಲಿದ್ದು ಮತದಾದರೂ ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಹಾಕಲು ಕಾಯುತ್ತಿದ್ದಾರೆ. ಈ ನಡುವೆ ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ತಮ್ಮ ಪ್ರಜಾಕಿಯ  (Prajaakeeya) ಪಕ್ಷದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ವೇಳೆ ಉಪೇಂದ್ರ ಮಾತನಾಡಿದ ಮಾತುಗಳು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

Actor Upendra Facebook Live
Image Credit: zee5

ಪ್ರಜಾಕಿಯ ಪಕ್ಷದ ಪ್ರಚಾರದಲ್ಲಿ ರಿಯಲ್ ಸ್ಟಾರ್
ನಟ ಉಪೇಂದ್ರ ಅವರು ತಮ್ಮ ಪ್ರಜಾಕಿಯ ಪಕ್ಷದ ಸಲುವಾಗಿ ಫೇಸ್ ಬುಕ್ ಲೈವ್ ಬಂದಿದ್ದು, ಈ ವೇಳೆ ನೋಡುಗರ ಪ್ರಶ್ನೆಗೆ ನಟ ಉತ್ತರಿಸಿದ್ದಾರೆ. ಈ ವೇಳೆ ವ್ಯಕ್ತಿಯೋರ್ವ ‘ನನಗೆ 70 ವರ್ಷ. ನಾನು ನಿವೃತ್ತ ಸರ್ಕಾರೀ ನೌಕರ. ನೀವು ಹಚ್ಚಿದ ಜ್ಯೋತಿ ನಿಮ್ಮ ಸಾವಿನ ನಂತರ ಕಾಡ್ಗಿಚ್ಚಾಗಿ ಹರಡುತ್ತದೆ, ಶುಭವಾಗಲಿ’ ಎಂದಿದ್ದರು. ಈ ವೇಳೆ ನಟ ಉಪೇಂದ್ರ ಅವರ ಪ್ರತಿಕ್ರಿಗೆ ಎಲ್ಲರಲ್ಲೂ ಗೊಂದಲ ಸ್ರಷ್ಟಿಮಾಡಿದೆ.

ನಾನು ಬದುಕಿದ್ದಾಗಲೇ ಸಾಯಬೇಕು ಎಂದ ಉಪೇಂದ್ರ
“ಸತ್ತ ಮೇಲೆ ಮನುಷ್ಯನಿಗೆ ಬೆಲೆ ಕೊಡುವುದು ನನಗೆ ಅರ್ಥ ಆಗುತ್ತಿಲ್ಲ. ನಾನು ಬದುಕೋದು, ಸಾಯೋದು ಸೆಕಂಡರಿ, ಅದು ಬಿಟ್ಟು ಬಿಡಿ. ನೀವು ಸತ್ತ ಮೇಲೆ ಹೆಚ್ಚು ಫೇಮಸ್ ಆಗುತ್ತೆ, ಸತ್ತ ಮೇಲೆ ನಿಮ್ಮನ್ನು ಜಾಸ್ತಿ ನಂಬೋಕೆ ಶುರು ಮಾಡ್ತಾರೆ ಅಂತೆಲ್ಲ ಅಂದ್ಕೊಂಡು ನೀವು ಬೆಂಬಲ ಕೂಡುವುದನ್ನು ಪೋಸ್ಟ್ ಫೋನ್ ಮಾಡಿ.

Actor Upendra came live on Facebook and said that I should die while I am still alive
Image Credit: thehindu

ಅದಕೋಸ್ಕರ ಹೆಸರು ಬೇಡ, ಪೋಸ್ಟ್ ಬೇಡ, ಏನು ಬೇಡ ಅಂತ ಹೇಳುತ್ತೇನೆ. ಮತ್ತೆ ನನ್ನಲ್ಲೇನೋ ಸ್ವಾರ್ಥವಿದೆ, ಅದಕ್ಕೆ ಇಲ್ಲಿ ಬಂದಿದ್ದಾನೆ ಅನ್ನೋ ಅಭಿಪ್ರಾಯ ಬರಬಾರದು ಅಂತ ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡುತ್ತೇನೆ , ಬದುಕಿದ್ದಾಗಲೇ ಸತ್ತು ಪ್ರಜಾಕಿಯಾ ಮಾಡಲು ಆಸೆ ಪಡುತ್ತೇನೆ” ಎಂದು ಉಪೇಂದ್ರ ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group