UPI Update: ಇಂದು ಮಧ್ಯರಾತ್ರಿಯಿಂದ ಬದಲಾಗಲಿದೆ UPI ನಿಯಮ, ನಾಳೆಯಿಂದ ಇಂತವರ UPI ಖಾತೆ ಕ್ಲೋಸ್.
ಜನವರಿ 1 ರಿಂದ UPI ಪೇಮೆಂಟ್ ನಿಯಮದಲ್ಲಿ ಬದಲಾವಣೆ ಆಗಲಿದೆ, ಸ್ಥಗಿತವಾಗಲಿದೆ ಕೆಲವರ UPI ಖಾತೆ
UPI New Rule From January: ದೇಶದಲ್ಲಿ UPI ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪ್ರತಿಯೊಬ್ಬರೂ ಕೂಡ UPI Payment ಅನ್ನು ಬಳಸುತ್ತಿದ್ದಾರೆ. UPI ಮೂಲಕ ವಹಿವಾಟು ಬಹಳ ಸುಲಭವಾಗಿ ನಡೆಯುತ್ತಿದೆ. ಇನ್ನು ಬಳಕೆದಾರರಿಗೆ UPI ಹೆಚ್ಚಿನ ಅಪ್ಡೇಟ್ ಅನ್ನು ನೀಡುತ್ತಲೇ ಇರುತ್ತದೆ. UPI ಹೊಸ ಹೊಸ ಅಪ್ಡೇಟ್ ಅನ್ನು ನೀಡುವುದರ ಜೊತೆ ಕೆಲ ನಿಯಮಗಳನ್ನು ಕೂಡ ಜಾರಿಗೊಳಿಸಿದೆ. ಹೊಸ ವರ್ಷದಲ್ಲಿ UPI Payment ನಲ್ಲಿ ಮಹತ್ವದ ಬದಲಾವಣೆ ಆಗಲಿದೆ. ನೀವು UPI ಬಳಕೆದಾರರಾಗಿದ್ದರೆ ನಿಮ್ಮ UPI ID ಉಳಿಸಿಕೊಳ್ಳಲು ಇಂದು ಒಂದು ದಿನ ಮಾತ್ರ ಅವಕಾಶವಿದೆ.
![UPI Tap And Payment Facility](https://nadunudi.in/wp-content/uploads/2023/12/UPI-Tap-And-Payment-Facility.png)
ನಾಳೆಯಿಂದ ಇಂತವರ UPI ಖಾತೆ ಕ್ಲೋಸ್
ಸದ್ಯ National Payment Corporation Of India ಇದೀಗ UPI ಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ವರ್ಷಗಳಿಂದ ಬಳಸದೆ ಇರುವ UPI ID ಗಳನ್ನೂ ಸ್ಥಗಿತಗೊಳಿಸಲು NPCI ನಿರ್ಧಾರ ಕೈಗೊಂಡಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ವಹಿವಾಟುಗಳಿಲ್ಲದ UPI ID ಗಳನ್ನೂ ನಿರ್ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ NPCI, Google Pay, PhoneP , Paytm, Amazon Pay, Airtel Pay ಸೇರಿದಂತೆ ಇತರ UPI Application ಗಳಿಗೆ ಸೂಚನೆ ನೀಡಿದೆ.
ಇಂದು ಮಧ್ಯರಾತ್ರಿಯಿಂದ ಬದಲಾಗಲಿದೆ UPI ನಿಯಮ
ಸದ್ಯ NPCI ಹೊಸ ನಿಯಮದ ಪ್ರಕಾರ ಬಳಕೆದಾರರು ತಮ್ಮ UPI ID ಯನ್ನು ಉಳಿಸಿಕೊಳ್ಳಲು ಒಂದು ವರ್ಷದವರೆಗೂ ಬಳಸದೆ ಇರುವ UPI ID ಯಲ್ಲಿ ತಕ್ಷಣ ವಹಿವಾಟು ನಡೆಸಬೇಕಿದೆ. ಒಂದು ವರ್ಷದಲ್ಲಿ ಯಾವುದೇ ವಹಿವಾಟು ಕಂಡುಬರದಿದ್ದರೆ, ಅಂತಹ UPI ID ಯನ್ನು December 31 ರ ನಂತರದ ದಿನಗಳಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆ.
![UPI ID Limit Updates](https://nadunudi.in/wp-content/uploads/2023/12/UPI-ID-Limit-Updates.png)
ಎಲ್ಲ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಗಳು ಮತ್ತು PSP ಬ್ಯಾಂಕ್ ಗಳು UPI ಐಡಿ ಮತ್ತು ನಿಷ್ಕ್ರಿಯ ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸುತ್ತವೆ. ಒಂದು ವರ್ಷದವರೆಗೆ ಈ ID ಯಿಂದ ಯಾವುದೇ ರೀತಿಯ ಕ್ರೆಡಿಟ್ ಅಥವಾ ಡೆಬಿಟ್ ವಹಿವಾಟು ನಡೆಯದಿದ್ದರೆ ಅಂತಹ UPI ಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. NPCI ಒಮ್ಮೆ UPI ID ಯನ್ನು ನಿಷ್ಕ್ರಿಯಗೊಳಿಸಿದರೆ ಮುಂದಿನ ವರ್ಷದಿಂದ ಅವರು ಯಾವುದೇ ವಹಿವಾಟನ್ನು ಮಾಡಲು ಸಾಧ್ಯವಾಗುವುದಿಲ್ಲ. ಇಂದು ಮಧ್ಯರಾತ್ರಿಯಿಂದಲೇ UPI ID ನಿಷ್ಕ್ರಿಯವಾಗಲಿದೆ. ನಿಮ್ಮ ಬಲದ UPI ಖಾತೆ ಉಳಿಸಿಕೊಳ್ಳಲು ತಕ್ಷಣ ಖಾತೆಯಲ್ಲಿ ವ್ಯವಹಾರ ಮಾಡುವುದು ಉತ್ತಮ