UPI Update: ಫೋನ್ ಪೇ, ಗೂಗಲ್ ಪೇ, ಪೆಟಿಎಂ ಮತ್ತು UPI ಬಳಸುವವರಿಗೆ ಡಿ 31 ಕೊನೆಯ ದಿನಾಂಕ, ಬೇಗನೆ ಈ ಕೆಲಸ ಮುಗಿಸಿಕೊಳ್ಳಿ.

UPI ಪಾವತಿ ಬಳಕೆದಾರರು ವರ್ಷಾಂತ್ಯದಲ್ಲಿ ಈ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ.

UPI Latest Update: ಇನ್ನು ದೇಶದಲ್ಲಿ ತಂತ್ರಜ್ಞಾನಗಳು ಬೆಳೆದಂತೆ ವಂಚನೆ ಕೂಡ ಹೆಚ್ಚು ಹೆಚ್ಚು ತಲೆ ಎತ್ತಿಕೊಳ್ಳುತ್ತಿದೆ. ಅದರಲ್ಲೂ ಆನ್ಲೈನ್ ಫ್ರಾಡ್ ಹೆಚ್ಚಿದೆ. UPI ಮೂಲಕ ವಂಚನೆ ಹೆಚ್ಚು ಬೆಳಕಿಗೆ ಬರುತ್ತಿದೆ.

ವಂಚನೆಯ ತಡೆಗೆಂದು ಸರ್ಕಾರ ಎಷ್ಟೇ ಎಚ್ಚರಿಕೆ ವಹಿಸಿದರು ಕೂಡ ವಂಚನೆಯ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಇನ್ನು UPI ಪಾವತಿ ಎಷ್ಟು ಉಪಯೋಗಕಾರಿಯೋ ಕೆಲವೊಮ್ಮೆ ಅಷ್ಟೇ ಅಪಾಯವನ್ನು ನೀಡುತ್ತದೆ. ಸದ್ಯ UPI ಪಾವತಿ ಬಳಕೆದಾರರು ಈ ವರ್ಷಾಂತ್ಯದಲ್ಲಿ ಈ ಕೆಲಸವನ್ನು ಮಾಡುವುದು ಅಗತ್ಯವಾಗಿದೆ.

UPI Latest Update
Image Credit: Original Source

ಫೋನ್ ಪೇ, ಗೂಗಲ್ ಪೇ, ಪೆಟಿಎಂ ಮತ್ತು UPI ಬಳಸುವವರಿಗೆ ಡಿ 31 ಕೊನೆಯ ದಿನಾಂಕ
ಸದ್ಯ NPCI ಹೊಸ ನಿಯಮದ ಪ್ರಕಾರ ಬಳಕೆದಾರರು ತಮ್ಮ UPI ID ಯನ್ನು ಉಳಿಸಿಕೊಳ್ಳಲು ಒಂದು ವರ್ಷದವರೆಗೂ ಬಳಸದೆ ಇರುವ UPI ID ಯಲ್ಲಿ ತಕ್ಷಣ ವಹಿವಾಟು ನಡೆಸಬೇಕಿದೆ.

ಒಂದು ವರ್ಷದಲ್ಲಿ ಯಾವುದೇ ವಹಿವಾಟು ಕಂಡುಬರದಿದ್ದರೆ, ಅಂತಹ UPI ID ಯನ್ನು December 31 ರ ನಂತರದ ದಿನಗಳಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆ. ಎಲ್ಲ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ ಗಳು ಮತ್ತು PSP ಬ್ಯಾಂಕ್‌ ಗಳು UPI ಐಡಿ ಮತ್ತು ನಿಷ್ಕ್ರಿಯ ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸುತ್ತವೆ. ಒಂದು ವರ್ಷದವರೆಗೆ ಈ ಐಡಿಯಿಂದ ಯಾವುದೇ ರೀತಿಯ ಕ್ರೆಡಿಟ್ ಅಥವಾ ಡೆಬಿಟ್ ವಹಿವಾಟು ನಡೆಯದಿದ್ದರೆ ಅಂತಹ UPI ಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

UPI Payment Rules
Image Credit: Tazahindisamachar

5000 ರೂ. ಗಿಂತ ಹೆಚ್ಚಿನ ಡಿಜಿಟಲ್ ಪಾವತಿಗೆ ಹೊಸ ರೂಲ್ಸ್
ಇನ್ನುಮುಂದೆ UPI ಡಿಜಿಟಲ್ ಪಾವತಿಯ ಮೂಲಕ ಡೆಬಿಟ್ ಮಾಡುವ ಮೊದಲು ಪರಿಶೀಲನಾ ಸಂದೇಶ ಅಥವಾ ಕರೆ ಮಾಡಲು ಕೇಂದ್ರ ನಿರ್ಧರಿಸಿದೆ. ಹೌದು UPI ನಂತಹ ಆನ್‌ ಲೈನ್ ಪಾವತಿ ವ್ಯವಸ್ಥೆಯಿಂದ ಯಾರಾದರೂ 5000 ರೂಪಾಯಿಗಳನ್ನು ಡೆಬಿಟ್ ಮಾಡಲು ಬಯಸಿದರೆ, ಅವರು ಮೊತ್ತವನ್ನು ಡೆಬಿಟ್ ಮಾಡುವ ಮೊದಲು ವಹಿವಾಟಿನ ದೃಢೀಕರಣವನ್ನು ಕೇಳುವ ಮೂಲಕ ಪರಿಶೀಲನೆ ಸಂದೇಶವನ್ನು ಕಳುಹಿಸಬಹುದು ಅಥವಾ ಕರೆ ಮಾಡಬಹುದು. ಹಣಕಾಸು ಸಚಿವಾಲಯ 5000 ರೂ. ಗಿಂತ ಹೆಚ್ಚಿನ ಡಿಜಿಟಲ್ ಪಾವತಿಗೆ ಹೆಚ್ಚಿನ ಕ್ರಮ ಕೈಗೊಂಡಿದೆ. UPI ವಂಚನೆ ತಡೆ ಕೇಂದ್ರದ ಉದ್ದೇಶವಾಗಿದೆ.

Join Nadunudi News WhatsApp Group

ಒಬ್ಬ ಬಳಕೆದಾರನು ಮೊದಲ ಬಾರಿಗೆ ಇನ್ನೊಬ್ಬ ವ್ಯಕ್ತಿ ಅಥವಾ ಅಂಗಡಿಯವನಿಗೆ UPI ಮೂಲಕ ಐದು ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿದಾಗ, ಅವನು ಮೊದಲು ಪರಿಶೀಲನಾ ಕರೆಯನ್ನು ಸ್ವೀಕರಿಸುತ್ತಾನೆ ಅಥವಾ SMS ಸ್ವೀಕರಿಸುತ್ತಾನೆ. ಬಳಕೆದಾರರು ಈ ಪಾವತಿಯನ್ನು ಅನುಮೋದಿಸಬೇಕಾಗುತ್ತದೆ. ಇದರ ನಂತರ ನೀವು ನಿಮ್ಮ ಪಿನ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಎರಡು ಹಂತದ ಪರಿಶೀಲನೆಯ ನಂತರ ಪಾವತಿಯನ್ನು ಪೂರ್ಣಗೊಳಿಸಲಾಗುತ್ತದೆ. ಯಾವುದೇ ಹಂತದಲ್ಲಿ ಪರಿಶೀಲನೆ ಪ್ರಕ್ರಿಯೆಯು ಪೂರ್ಣಗೊಳ್ಳದಿದ್ದರೆ ಪಾವತಿಯು ಸ್ಥಗಿತಗೊಳ್ಳುತ್ತದೆ.

Join Nadunudi News WhatsApp Group