UPI Payments: ಈಗ ಬ್ಯಾಂಕಿನಲ್ಲಿ ಹಣ ಇಲ್ಲದಿದ್ದವರು UPI ಮಾಡಬಹುದು, ಹೊಸ ಯೋಜನೆ ಬಿಡುಗಡೆ.

UPI ಗಳಿಗೆ ಕ್ರೆಡಿಟ್ ಕಾರ್ಡುಗಳನ್ನ ಲಿಂಕ್ ಮಾಡುವುದರಿಂದ ಬ್ಯಾಂಕ್ ಬ್ಯಾಲೆನ್ಸ್ ಇಲ್ಲದೆ ಇದ್ದರೂ UPI ಪೇಮೆಂಟ್ ಮಾಡಬಹುದು

UPI Payment Without Bank Balance: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ಇದೀಗ UPI ವಹಿವಾಟಿನಲ್ಲಿ (UPI Payment) ಅನೇಕ ಬದಲಾವಣೆಯನ್ನು ತಂದಿದೆ. ಯುಪಿಏ ವಹಿವಾಟಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಮಹತ್ವದ ನಿರ್ಧಾರವನ್ನು ಘೋಷಿಸಿದೆ. ಇನ್ನುಮುಂದೆ ನೀವು ನಿಮ್ಮ ಬ್ಯಾಂಕ್ ನಲ್ಲಿ ಹಣ ಇಲ್ಲದಿದ್ದರೂ ಕೂಡ ಯುಪಿಐ ಮಾಡಬಹುದು.

UPI Payment Without Bank Balance
Image Source: India Today

ಆರ್ ಬಿಐ (RBI) ನಿಂದ ಮಹತ್ವದ ಘೋಷಣೆ
ಇನ್ನು ಯಾವುದೇ ಬ್ಯಾಂಕ್ ಗ್ರಾಹಕರು ಬ್ಯಾಂಕ್ ನಲ್ಲಿ ಹಣ ಇಲ್ಲದಿದ್ದರೂ ಕೂಡ ಯುಪಿಐ ಮಾಡಬಹುದು. ಯುಪಿಐ ನೆಟ್ ವರ್ಕ್ ನ ಮೂಲಕ ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ ಗಳನ್ನೂ ವರ್ಗಾಯಿಸಲು ಆರ್ ಬಿಐ ಬ್ಯಾಂಕ್ ಗಳಿಗೆ ಅವಕಾಶ ನೀಡುತ್ತಿದೆ. ಬ್ಯಾಂಕ್ ಖಾತೆಯಲ್ಲಿ ಹಣ ಹೊಂದಿಲ್ಲದಿದ್ದರು ಖಾತೆದಾರರು ಮಿತಿಯ ವರೆಗೆ ಯುಪಿಐ ಮೂಲಕ ಹಣವನ್ನು ಪಾವತಿಸಲು ಸಾಧ್ಯವಾಗುತ್ತದೆ.

UPI Payment Without Bank Balance
Image Source: Times Of India

ಕ್ರೆಡಿಟ್ ಕಾರ್ಡ್ ಗಳಿಗೆ ಯುಪಿಐ ಲಿಂಕ್
ಗ್ರಾಹಕರಿಗೆ ಓವರ್ ಡ್ರಾಫ್ಟ್ ಸೌಲಭ್ಯವನ್ನು ನೀಡಲು ಆರ್ ಬಿಐ ಈಗಾಗಲೇ ಬ್ಯಾಂಕುಗಳಿಗೆ ಅನುಮತಿ ನೀಡಿದೆ. ಹಾಗೆಯೆ ಕ್ರೆಡಿಟ್ ಕಾರ್ಡ್ ಗಳನ್ನೂ ಯುಪಿಐ ಗೆ ಲಿಂಕ್ ಮಾಡಲು ಸೂಚಿಸಿದೆ. ಬ್ಯಾಂಕ್ ಗಳಲ್ಲಿನ ಠೇವಣಿ ಖಾತೆಗಳ ನಡುವೆ ಯುಪಿಐ ವಹಿವಾಟುಗಳನ್ನು ಸಕ್ರಿಯಗೊಳಿಸಬಹುದು.

ಕ್ರೆಡಿಟ್ ಕಾರ್ಡುಗಳನ್ನ UPI ಗೆ ಲಿಂಕ್ ಮಾಡುವುದರಿಂದ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಇರುವ ಸಮಯದಲ್ಲಿ UPI ಪೇಮೆಂಟ್ ಮಾಡಿದರೆ ನಿಮ್ಮ ಕ್ರೆಡಿಟ್ ಕಾರ್ಡಿನಿಂದ ಹಣ ಕಡಿತ ಆಗುತ್ತದೆ. ಕ್ರೆಡಿಟ್ ಕಾರ್ಡ್ ಗಳಿಗೆ ಯುಪಿಐ ಲಿಂಕ್ ಮಾಡುದರಿಂದ ಬ್ಯಾಂಕ್ ಗಳು ಹೊಸ ಬಳಕೆದಾರರಿಗೆ ಸೈನ್ ಅಪ್ ಮಾಡುವ ಅವಶ್ಯಕತೆ ಇರುವುದಿಲ್ಲ. ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಇದರ ಮೂಲಕ ಕ್ರೆಡಿಟ್ ನೀಡಬಹುದಾಗಿದೆ.

UPI Payment Without Bank Balance
Image Source: Times Of India

UPI ಸೇವೆಗಳಲ್ಲಿ ಮತ್ತಷ್ಟು ವಿಸ್ತರಣೆ
ಈಗಾಗಲೇ UPI ವಹಿವಾಟುಗಳಲ್ಲಿ ಸಾಕಷ್ಟು ಹಣಕಾಸಿನ ವ್ಯವಹಾರಗಳು ನಡೆಯುತ್ತವೆ.ಇದೀಗ UPI ತನ್ನ ಸೇವೆಗಳನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ.ಇನ್ನುಮುಂದೆ UPI ಸೇವೆಗಳು ಬ್ಯಾಂಕ್ ಗಳ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್ ಗಳಿಗೂ ಅನ್ವಯಿಸುತ್ತದೆ.

Join Nadunudi News WhatsApp Group

UPI ಲಿಂಕ್ ಮಾಡುವ ಸೇವೆಗಳನ್ನು ಬ್ಯಾಂಕ್ ಗಳ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್ ಗಳಿಗೂ ತರಲಾಗಿದೆ ಎಂದು ರಿಸರ್ವ್ ಬ್ಯಾಂಕ್ ನ ಗವರ್ನರ್ ಶಕ್ತಿಕಾಂತ್ ದಾಸ್ ಬಹಿರಂಗಪಡಿಸಿದ್ದಾರೆ.ಇನ್ನುಮುಂದೆ ನೀವು UPI ಮೂಲಕ ಬ್ಯಾಂಕ್ ಸಾಲ ಪಡೆಯಬಹುದು.

UPI Payment Without Bank Balance
Image Source: Times Of India

Join Nadunudi News WhatsApp Group