UPI Payment: ನೆಟ್ ಪ್ಯಾಕ್ ಇಲ್ಲದೆ ಇನ್ಮೇಲೆ ಹಣ ಕಳಿಸಿ, ಹೊಸ ವಿಧಾನ

ಇಂಟರ್ನೆಟ್ ಇಲ್ಲದೆ upi ಮೂಲಕ ಹಣ ಕಳಿಸುವ ವಿಧಾನದ ಬಗ್ಗೆ ತಿಳಿಯಿರಿ.

UPI Payment By Without Internet: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪಾವತಿಯ (Online Payment) ವಹಿವಾಟು ಹೆಚ್ಚುತ್ತಿದೆ. ಗೂಗಲ್ ಪೇ, ಫೋನ್ ಪೇ,ಪೆಟಿಎಂ ಸೇರಿದಂತೆ ಇನ್ನಿತರ ಆನ್ಲೈನ್ ಡಿಜಿಟಲ್ ಪಾವತಿ ಅಪ್ಲಿಕೇಶನ್ ಗಳು ಜನರಿಗೆ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡುತ್ತಿದೆ.

ಈ ಆನ್ಲೈನ್ ಪಾವತಿಯ ಬಳಕೆಯ ಕಾರಣ ಗ್ರಾಹಕರು ಸಣ್ಣ ಪುಟ್ಟ ವಿಚಾರಗಳಿಗೆ ಬ್ಯಾಂಕ್ ಗಳಿಗೆ ಭೇಟಿ ನೀಡುವುದು ಕಡಿಮೆಯಾಗಿದೆ. ನಗದು ರಹಿತ ವಹಿವಾಟುಗಳು ಇಂದಿನ ದಿನಗಳಲ್ಲಿ ಹೆಚ್ಚುತ್ತಿದೆ ಆನ್ಲೈನ್ ಮೂಲಕ ಪಾವತಿ ಹೆಚ್ಚಾಗಿದೆ.

ಯುಪಿಐ ಪಾವತಿದಾರರಿಗೆ ಹೊಸ ಸೌಲಭ್ಯ
ಇನ್ನು ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗಲು ಯುಪಿಐ (UPI) ವಹಿವಾಟುಗಳು ತನ್ನ ಸೇವೆಯನ್ನು ವಿಸ್ತರಿಸುತ್ತಿವೆ. ಹೊಸ ಹೊಸ ಸೌಲಭ್ಯಗಳನ್ನು ನೀಡುವ ಮೂಲಕ ಇನ್ನಷ್ಟು ಗ್ರಾಹಕರನ್ನು ಸೆಳೆಯುತ್ತಿದೆ.

You can send money on UPI without internet
Image Credit: Beebom

ಇನ್ನು ಸಾಮಾನ್ಯವಾಗಿ ಯುಪಿಐ ವಹಿವಾಟುಗಳನ್ನು ನಡೆಸಲು ಇಂಟರ್ನೆಟ್ ನ ಅಗತ್ಯವಿರಬೇಕಾಗುತ್ತದೆ. ಆದರೆ ಇದೀಗ ಇಂಟರ್ನೆಟ್ ಇಲ್ಲದೆಯೂ ಕೂಡ ಯುಪಿಐ ಬಳಸಲು ಮೂರು ಆಯ್ಕೆಗಳು ಸಿಗಲಿದೆ. ಇದೀಗ ಇಂಟರ್ನೆಟ್ ಇಲ್ಲದೆ ಯುಪಿಐ ಪಾವತಿ ಹೇಗೆ ಸಾಧ್ಯ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಈ 3 ಆಯ್ಕೆಯ ಮೂಲಕ ಇಂಟರ್ನೆಟ್ ಇಲ್ಲದೆ UPI ನಲ್ಲಿ ಹಣ ಕಳುಹಿಸಬಹುದು
*ಬಳಕೆದಾರರು ಡಯಲ್ ಕೋಡ್ ಸೇವೆಯನ್ನು ಬಳಸಿಕೊಂಡು ಹಣವನ್ನು ಸುಲಭವಾಗಿ ಕಳುಹಿಸಬಹುದು. ಡಯಲ್  ಕೋಡ್ (USSD) ಸೇವೆಗಳನ್ನು ಬಳಸುವುದು ಬ್ಯಾಂಕ್ ಒದಗಿಸಿದ USSD ಸೇವೆಗಳನ್ನು ಅಥವಾ ನೀವು ಬಳಸುವ ಪಾವತಿ ಸೇವೆಗಳನ್ನು ಬಳಸಿಕೊಂಡು ಫೋನ್ ನ ಡಯಲರ್ ನಲ್ಲಿ ವಿಶೇಷ ಕೋಡ್ ಅನ್ನು ಡಯಲ್ ಮಾಡುವ ಮೂಲಕ ಹಣವನ್ನು ಕಳುಹಿಸಬಹುದು. ನಿಮ್ಮ ಫೋನ್ ಡಯಲರ್ ನಲ್ಲಿ *99# ಬಳಸಿ ಹಣವನ್ನು ಕಳುಹಿಸಬಹುದು.

Join Nadunudi News WhatsApp Group

You can send money on UPI without internet
Image Credit: Payu

*ವಿವಿಧ ಯುಪಿಐ ಅಪ್ಲಿಕೇಶನ್ ಗಳು ಮೊಬೈಲ್ ವ್ಯಾಲೆಟ್ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಒದಗಿಸುತ್ತದೆ. ನೀವು ಮೊಬೈಲ್ ವ್ಯಾಲೆಟ್ ಅಪ್ಲಿಕೇಶನ್ ಅನ್ನು ಬಳಸಿ ಇಂಟರ್ನೆಟ್ ಇಲ್ಲದೆ ಯುಪಿಐ ಮೂಲಕ ಹಣದ ವಹಿವಾಟನ್ನು ನಡೆಸಬಹುದು.

*ಇನ್ನು ಈ ಆಯ್ಕೆಗಳು ನಿಮಗೆ ಸರಿ ಹೊಂದದಿದ್ದರೆ ಬ್ಯಾಂಕ್ ಶಾಖೆಗೆ ತೆರಳುವ ಮೂಲಕ ನೀವು ಹಣವನ್ನು ವರ್ಗಾಯಿಸಬಹುದು.

Join Nadunudi News WhatsApp Group