UPI Alert: ಪ್ರತಿನಿತ್ಯ UPI ಮೂಲಕ ಪೇಮೆಂಟ್ ಮಾಡುವವರಿಗೆ ಹೊಸ ರೂಲ್ಸ್, ಈ ತಪ್ಪು ಮಾಡಿದರೆ ಖಾತೆ ಖಾಲಿ.

ಪ್ರತಿನಿತ್ಯ UPI ಮೂಲಕ ಪೇಮೆಂಟ್ ಮಾಡುವವರಿಗೆ ಹೊಸ ರೂಲ್ಸ್

UPI Payment: ಸದ್ಯ ದೇಶದಲ್ಲಿ ಎಲ್ಲ ರೀತಿಯ ಹಣಕಾಸಿನ ವಹಿವಾಟುಗಳು UPI ಮೂಲಕವೇ ನಡೆಯುತ್ತಿದೆ. ಜನರು ಹೆಚ್ಚಾಗಿ UPI Application ಗಳನ್ನೂ ಬಳಸುತ್ತಿದ್ದಾರೆ. ಇನ್ನು ಬಳಕೆದಾರರಿರಿಗೆ ಅನುಕೂಲವಾಗಲು UPI ಹೊಸ ಹೊಸ ಫೀಚರ್ ಅನ್ನು ನೀಡುತ್ತಾ ಬರುತ್ತಿದೆ. ಸದ್ಯದ ಡಿಜಿಟಲ್ ದುನಿಯಾದಲ್ಲಿ UPI ಜನಸ್ನೇಹಿಯಾಗಿದೆ ಎಂದರೆ ತಪ್ಪಾಗಲಾರದು.

UPI Payment Rules
Image Credit: Telanganatoday

ಈ ತಪ್ಪು ಮಾಡಿದರೆ ಖಾಲಿ ಆಗಲಿದೆ ನಿಮ್ಮ ಖಾತೆ
ಇನ್ನು ದೇಶದಲ್ಲಿ ತಂತ್ರಜ್ಞಾನಗಳು ಬೆಳೆದಂತೆ ವಂಚನೆ ಕೂಡ ಹೆಚ್ಚು ಹೆಚ್ಚು ತಲೆ ಎತ್ತಿಕೊಳ್ಳುತ್ತಿದೆ. ಅದರಲ್ಲೂ ಆನ್ಲೈನ್ ಫ್ರಾಡ್ ಹೆಚ್ಚಿದೆ. UPI ಮೂಲಕ ವಂಚನೆ ಹೆಚ್ಚು ಬೆಳಕಿಗೆ ಬರುತ್ತಿದೆ. ವಂಚನೆಯ ತಡೆಗೆಂದು ಸರ್ಕಾರ ಎಷ್ಟೇ ಎಚ್ಚರಿಕೆ ವಹಿಸಿದರು ಕೂಡ ವಂಚನೆಯ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಇನ್ನು UPI ಪಾವತಿ ಎಷ್ಟು ಉಪಯೋಗಕಾರಿಯೋ ಕೆಲವೊಮ್ಮೆ ಅಷ್ಟೇ ಅಪಾಯವನ್ನು ನೀಡುತ್ತದೆ.

UPI ಪಾವತಿಯಲ್ಲಿ ನೀವು ಸಣ್ಣ ತಪ್ಪನ್ನು ಮಾಡಿದರು ಕೂಡ ನಿಮ್ಮ ಖಾತೆಯಲ್ಲಿನ ಅಷ್ಟು ಹಣವನ್ನು ನೀವು ಕಳೆದುಕೊಳ್ಳಬೇಕಾದ ಪರಿಸ್ಥಿತ ಎದುರಾಗಬಹುದು. ಇದೀಗ UPI ಪಾವತಿ ಮಾಡುವ ಸಮಯದಲ್ಲಿ ಯಾವೆಲ್ಲ ವಿಷ್ಯಗಳಿಂದ ಎಚ್ಚರಿಕೆ ವಹಿಸಬೇಕು ಎನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ. ನೀವು ಈ ಕೆಳಗಿನ ಮಾಹಿತಿಯನ್ನು ತಿಳಿದುಕೊಂಡು UPI ಪಾವತಿ ಮಾಡುವಾಗ ಎಚ್ಚರ ವಹಿಸಿದರೆ ವಂಚನೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು.

UPI Payment Alert
Image Credit: Entrackr

ಪ್ರತಿನಿತ್ಯ UPI ಮೂಲಕ ಪೇಮೆಂಟ್ ಮಾಡುವವರಿಗೆ ಹೊಸ ರೂಲ್ಸ್
•UPI ಪಾವತಿ ಮಾಡಲು ನಿಮಗೆ UPI Application ಅಗತ್ಯವಿರುತ್ತದೆ. ನೀವು RBI ನಿಂದ ಅನುಮೋದಿಸಲ್ಪಟ್ಟ UPI Application ಗಳನ್ನೂ ಮಾತ್ರ ಬಳಸಿ.

*UPI ಪಾವತಿಯನ್ನು ಯಶಸ್ವಿಗೊಳಿಸಲು PIN ಅನ್ನು ನಮೂದಿಸಬೇಕಾಗುತ್ತದೆ. ನೀವು ನಿಮ್ಮ UPI PIN ಅನ್ನು ಆದಷ್ಟು ಗೌಪ್ಯವಾಗಿರಿಸಿ. ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿಗೆ ನಿಮ್ಮ ಪಿನ್ ಅನ್ನು ನೀಡಬೇಡಿ.

Join Nadunudi News WhatsApp Group

•UPI ಪಾವತಿಗೆ ಒಮ್ಮೆ ಬ್ಯಾಂಕ್ ಖಾತೆಯ ವಿವರವನ್ನು ನೀಡಿದ ನಂತರ ಮತ್ತೊಮೆ ಇಂದಿಗೂ ನೀಡಬೇಡಿ. ಹಾಗೆಯೆ ಯಾರೇ ನಿಮ್ಮ ಖಾತೆಯ ವಿವರ ಕೇಳಿದರು ಕೂಡ ಹಂಚಿಕೊಳ್ಳಬಾರದು.

•ಇನ್ನು ಸಾರ್ವಜನಿಕ ವೈಫೈ ಹೆಚ್ಚು ಸುರಕ್ಷಿತವಾಗಿರುವುದಿಲ್ಲ. ಇದನ್ನು ಬಳಸುವಾಗ ಹೆಚ್ಚು ಜಾಗರೂಕರಾಗಿರಬೇಕು. ವೈಫೈ ಮೂಲಕ UPI ಪಾವತಿ ಮಾಡುವುದನ್ನು ಕಡಿಮೆ ಮಾಡಿ.

UPI Payment Latest Updates
Image Credit: Cleartax

•UPI Application ಅನ್ನು ಓಪನ್ ಮಾಡುವ ಮುನ್ನ ಪಿಂಗರ್ ಫ್ರಿನ್ಟ್ ಸೇರಿದಂತೆ ಇನ್ನಿತರ ಸುರಕ್ಷತಾ ಫೀಚರ್ ಅನ್ನು ಬಳಸುವುದು ಉತ್ತಮ. ನೀವು ಆಪ್ ಅನ್ನು ಲಾಕ್ ಮಾಡುವುದರಿಂದ ಬೇರೆಯವರು ಆಪ್ ಅನ್ನು ಬಳಸುವುದನ್ನು ತಡೆಯಬಹುದು.

•ನಿಮ್ಮ ಸ್ಮಾರ್ಟ್ ಫೋನ್ ಅನ್ನು ನಿಯಮಿತವಾಗಿ ಅಪ್ ಡೇಟ್ ಮಾಡಿ. ಸಾಫ್ಟ್ವೇರ್ ನವೀಕರಣಗಳ ಸಹಾಯದಿಂದ, ನಿಮ್ಮ ಸ್ಮಾರ್ಟ್ಫೋನ್ ಸುರಕ್ಷತೆಯನ್ನು ಸುಧಾರಿಸಲಾಗಿದೆ.

•ನಿಮ್ಮ UPI Application ಗಳನ್ನೂ ಆಗಾಗ ನವೀಕರಿಸಿಕೊಳ್ಳುತ್ತ ಇರುವುದು ಉತ್ತಮ.

•ನೀವು ಯಾವ ವ್ಯಕ್ತಿಗೆ ಹಣವನ್ನು ಕಳುಹಿಸುತ್ತೀರಿ, ಹಾಗೆಯೆ ಎಷ್ಟು ಹಣವನ್ನು ಕಳುಹಿಸುತ್ತಿದ್ದೀರಿ ಎನ್ನುವುದನ್ನು ಎರೆಡೆರಡು ಬಾರಿ ಗಮನಿಸಿಕೊಳ್ಳಿ.

 

Join Nadunudi News WhatsApp Group