UPI Recharge: ತಪ್ಪಾದ ಸಂಖ್ಯೆಗೆ ರಿಚಾರ್ಜ್ ಮಾಡಿದರೆ ಈಗ ಸುಲಭವಾಗಿ ವಾಪಾಸ್ ಪಡೆಯಿರಿ, ಇಲ್ಲಿದೆ ವಿಧಾನ.

UPI ಮೂಲಕ ತಪ್ಪಾದ ಸಂಖ್ಯೆಗೆ ರಿಚಾರ್ಜ್ ಮಾಡಿದರೆ ಅದನ್ನ ಸುಲಭವಾಗಿ ಮರಳಿ ಪಡೆದುಕೊಳ್ಳಬಹುದು.

UPI Wrong Recharge: ಇತ್ತೀಚಿನ ದಿನಗಳಲ್ಲಿ ಡಿಜಿಟ್ ಪಾವತಿಯ ಅಪ್ಲಿಕೇಶನ್ ಗಳು ಹೆಚ್ಚಾಗಿವೆ. ಗೂಗಲ್ ಪೇ, ಫೋನ್ ಪೇ, ಪೆಟಿಎಂ ಸೇರಿದಂತೆ ಇನ್ನಿತರ ಯುಪಿಐ ವಹಿವಾಟುಗಳು ಚಾಲ್ತಿಯಲ್ಲಿವೆ. ಈ ಯುಪಿಐ ವಹಿವಾಟುಗಳು (UPI Payment)  ಬಳಕೆದಾರರಿಗೆ ಸಾಕಷ್ಟು ರೀತಿಯ ಅನುಕೂಲಗಳನ್ನು ಮಾಡಿಕೊಟ್ಟಿವೆ.

ಮೊಬೈಲ್ ರಿಚಾರ್ಜ್ (Mobile Recharge) ಗಳನ್ನೂ ಕೂಡ ಯುಪಿಐ ಅಪ್ಲಿಕೇಶನ್ ಗಳಮೂಲಕ ಮಾಡಿಕೊಳ್ಳಬಹುದಾಗಿದೆ. ಇನ್ನು ಒಂದುವೇಳೆ ನೀವು ತಪ್ಪಾದ ಮೊಬೈಲ್ ಸಂಖ್ಯೆಗೆ ರಿಚಾರ್ಜ್ ಮಾಡಿದ್ದಲ್ಲಿ ಅದನ್ನು ಮರುಪಾವತಿ ಮಾಡಿಕೊಳ್ಳಬಹುದು.

upi recharge update
Image Credit: 91mobiles

ಯುಪಿಐ ಅಪ್ಲಿಕೇಶನ್
ಯುಪಿಐ ಅಪ್ಲಿಕೇಶನ್ ಗಳನ್ನು ಹಲವು ರೀತಿಯ ಆಯ್ಕೆಗಳು ಸಿಗುತ್ತವೆ. ಮೊಬೈಲ್ ರಿಚಾರ್ಜ್, ಟಿವಿ ರಿಚಾರ್ಜ್, ಕರೆಂಟ್ ಬಿಲ್, ವಾಟರ್ ಬಿಲ್, ಗ್ಯಾಸ್ ಬಿಲ್ ಸೇರಿದಂತೆ ವಿವಿಧ ರೀತಿಯ ರಿಚಾರ್ಜ್ ಗಳನ್ನೂ ಮಾಡಬಹುದು. ಇನ್ನು ರಿಚಾರ್ಜ್ ಮಾಡುವ ಸಮಯದಲ್ಲಿ ನೀವು ಕೆಲವೊಮ್ಮೆ ತಪ್ಪಾದ ಸಂಖ್ಯೆ ರಿಚಾರ್ಜ್ ಮಾಡುವುದು ಸಾಮಾನ್ಯವಾದ ವಿಷಯ.

ನಂಬರ್ ಆಯ್ಕೆ ಮಾಡುವ ಸಮಯದಲ್ಲಿ ತಪ್ಪಾದ ನಂಬರ್ ಆಯ್ಕೆ ಮಾಡಿದರೆ ನಿಮ್ಮ ರಿಚಾರ್ಜ್ ಬೇರೆಯವರಿಗೆ ತಲುಪುತ್ತದೆ. ಈ ತಪ್ಪನ್ನು ನೀವು ಸುಲಭ ವಿಧಾನದ ಮೂಲಕ ಸರಿಪಡಿಸಿಕೊಳ್ಳಬಹುದು.

In case of wrong number recharge through UPI, you can get back the recharge amount through some easy method.
Image Credit: telecomtalk

ತಪ್ಪಾಗಿ ರಿಚಾರ್ಜ್ ಮಾಡಿದಾಗ ಏನು ಮಾಡಬೇಕು
*ಮೊದಲಿಗೆ ನೀವು ಬಳಸುತ್ತಿರುವ ಸಿಮ್ ಕಾರ್ಡ್ ಟೆಲಿಕಾಂ ಆಪರೇಟರ್ ಕಸ್ಟಮರ್ ಕೇರ್ ಗೆ ಕರೆ ಮಾಡಬೇಕು.
*ನೀವು ತಪ್ಪಾಗಿ ರಿಚಾರ್ಜ್ ಮಾಡಿದ ನಂಬರ್ ಗಳ ವಿವರಗಳನ್ನು ಟೆಲಿಕಾಂ ಆಪರೇಟರ್ ಗಳಿಗೆ ನೀಡಬೇಕು.
*ಎಷ್ಟು ಮೊತ್ತದ ರಿಚಾರ್ಜ್, ಯಾವ ಕಂಪನಿಯ ಸಿಮ್ ಕಾರ್ಡ್ ಹಾಗು ಯಾವ ಆಪ್ ನಿಂದ ರಿಚಾರ್ಜ್ ಮಾಡಿದ್ದೀರಿ ಎನ್ನುವ ಎಲ್ಲಾ ವಿವರಗಳನ್ನು ನೀಡಬೇಕು.

Join Nadunudi News WhatsApp Group

*ಟೆಲಿಕಾಂ ಆಪರೇಟರ್ ಗಳಿಗೆ ನೀವು ಇಮೇಲ್ ನ ಮೂಲಕ ಸೂಕ್ತ ವಿವರಗಳನ್ನು ನೀಡಬೇಕಾಗುತ್ತದೆ.
*ಇನ್ನು ಟೆಲಿಕಾಂ ನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ವಾಟ್ಸಾಪ್, ಕಸ್ಟಮರ್ ಕೇರ್ ಪೋರ್ಟಲ್ ಅಥವಾ ಪ್ಲೇ ಸ್ಟೋರ್ ನಿಂದ ಗ್ರಾಹಕ ಸೇವಾ ಪೋರ್ಟಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಮೂಲಕ ದೂರನ್ನು ಸಲ್ಲಿಸಬಹುದು.

Join Nadunudi News WhatsApp Group