UPI 2024: UPI ನಿಯಮ ಬದಲಿಸಿದ ಕೇಂದ್ರ, ಫೋನ್ ಪೆ, ಗೂಗಲ್ ಪೆ ಮತ್ತು ಪೆಟಿಎಂ ಬಳಸುವವರಿಗೆ ಹೊಸ ರೂಲ್ಸ್

UPI ನಿಯಮದಲ್ಲಿ ಮತ್ತೆ ಬದಲಾವಣೆ, ಗೂಗಲ್ ಪೆ ಮತ್ತು ಫೋನ್ ಫೆ ಬಳಕೆದಾರರಿಗೆ ಹೊಸ ರೂಲ್ಸ್

UPI Rules Changes 2024: ದೇಶದಲ್ಲಿ ಈಗ ಕ್ಯಾಶ್ ಲೆಸ್ ವ್ಯವಹಾರಗಳು ಪ್ರಾರಂಭ ಆಗಿ ಹಲವು ವರ್ಷಗಳು ಕಳೆದಿದೆ. ಎಲ್ಲಾ ವ್ಯವಹಾರಗಳಿಗೂ UPI ಪೇಮೆಂಟ್ ಮೂಲಕ ಪಾವತಿ ಮಾಡಲಾಗುತ್ತಿದೆ. ಆರಂಭದಲ್ಲಿ ಈ ಅಪ್ಲಿಕೇಶನ್ ಬಳಕೆ ಬಗ್ಗೆ ಜನರಿಗೆ ಅಷ್ಟೊಂದು ತಿಳಿದಿರಲಿಲ್ಲ ಆದ್ರೆ ಈಗ ಪ್ರತಿಯೊಂದು ವ್ಯವಹಾರಕ್ಕೂ UPI ಪೇಮೆಂಟ್ ಮಾಡಲಾಗುತ್ತಿದೆ.

ನಗದು ಹಣ ಕಾಣಸಿಗುವುದೇ ಕಷ್ಟಕರವಾಗುವ ಪರಿಸ್ಥಿತಿ ಬಂದಿದೆ ಎಂದರು ತಪ್ಪಾಗಲಾರದು. UPI ಪೇಮೆಂಟ್ ಇದು ಸುರಕ್ಷಿತ ಹಾಗು ಸುಲಭ ವಿಧಾನವಾಗಿದೆ. ಹಾಗೆಯೆ ನಾವು ಪೇಮೆಂಟ್ ಮಾಡಲು ಗೂಗಲ್ ಪೆ, ಫೋನ್ ಫೆ, ಪೆಟಿಎಂ ಮೊದಲಾದ ಅಪ್ಲಿಕೇಶನ್ ಅನ್ನು ಬಳಕೆ ಮಾಡುತ್ತೇವೆ ಈ ರೀತಿಯ ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸುವಾಗ ಬಹಳ ಜಾಗುರೂಕರಾಗಿರುವುದು ಮುಖ್ಯ ಆಗಿರುತ್ತದೆ.

UPI Transaction Limit Hike Update
Image Credit: Times Of India

ಪೇಮೆಂಟ್ ಅಪ್ಲಿಕೇಶನ್ ಬಳಸುವವರು ಈ ವಿಚಾರದ ಬಗ್ಗೆ ಗಮನಹರಿಸಿ

ಪ್ರತಿಯೊಬ್ಬರಿಗೂ ಈಗ ಫೋನ್ ಮೂಲಕ ಪೇಮೆಂಟ್ ಮಾಡುವ ಬಗ್ಗೆ ತಿಳಿದಿರುತ್ತದೆ. ನಮ್ಮ ಸ್ಮಾರ್ಟ್ ಫೋನ್ ನಲ್ಲಿಯೇ ನಮ್ಮ ಬ್ಯಾಂಕ್ ಮಾಹಿತಿ ಹಾಗು ಇನ್ನಿತರ ಎಲ್ಲಾ ಪೇಮೆಂಟ್ ಅಪ್ಲಿಕೇಶನ್ ಗಳನ್ನೂ ಹೊಂದಿರುತ್ತೇವೆ . ಒಂದೊಮ್ಮೆ ನಮ್ಮ ಫೋನ್ ಕಳುವಾದರೆ ಏನು ಮಾಡಬೇಕು ಎನ್ನುವ ಕುರಿತು ನಾವು ತಿಳಿದಿರುವುದು ಬಹಳ ಮುಖ್ಯ ಆಗಿರುತ್ತದೆ.

ನಿಮ್ಮ ಸ್ಮಾರ್ಟ್ ಫೋನ್ ಕಳವಾದಾಗ ಹಣ ಲಪಟಾಯಿಸುವ ಮುಂಚೆ ನೀವು ಮೊದಲನೇದಾಗಿ ಪೊಲೀಸ್ ದೂರು ನೀಡಬೇಕಾಗಿದೆ. ಪೋಲಿಸ್ ರಿಗೆ ಮಾಹಿತಿ ನೀಡಿದ ನಂತರ ನಿಮ್ಮ ಫೋನ್ ಅನ್ನು ಬ್ಲಾಕ್ ಮಾಡಬೇಕು. ನೀವು ಪೆಟಿಎಮ್ ಗ್ರಾಹಕರಾಗಿದ್ದರೆ ತಕ್ಷಣ ಸಹಾಯವಾಣಿ 01204456456 ಗೆ ಕರೆ ಮಾಡಿ ಅಗತ್ಯ ಇರುವ ಎಲ್ಲಾ ಮಾಹಿತಿ ಪಡೆದು, ನಿಮ್ಮ ಆಪ್ಷನ್ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಫೋನ್ ಬಗ್ಗೆ ಹಾಗು ಕಳೆದುಹೋದ ಬಗ್ಗೆ ಮಾಹಿತಿ ನೀಡಿ. ತದನಂತರ ನೀವು ನಿಮ್ಮ ಪೆಟಿಎಮ್ ಅನ್ನು ಲಾಗ್ ಔಟ್ ಮಾಡಿಸಿಕೊಳ್ಳಬಹುದಾಗಿದೆ.

Join Nadunudi News WhatsApp Group

UPI Tap And Payment Facility 2024
Image Credit: Hellobanker

Phone Pay ಗ್ರಾಹಕರಾಗಿದ್ದರೆ ಹೀಗೆ ಮಾಡಿ

ಕೋಟ್ಯಂತರ ಗ್ರಾಹಕರನ್ನು ಫೋನ್ ಪೆ ಹೊಂದಿದೆ. ನಿಮ್ಮ ಫೋನ್ ಅನ್ನು ಕಳೆದುಕೊಂಡಾಗ ನೀವು ಮೊದಲು 08068727374 /02268727374 ಈ ಎರಡು ನಂಬರ್ ನಲ್ಲಿ ಒಂದಕ್ಕೆ ಕರೆ ಮಾಡಿ ಮಾಹಿತಿ ನೀಡಿ ನಿಮ್ಮ ಅಕೌಂಟ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಮಾಡಿ. ನಿಮ್ಮ ಫೋನ್ ಸಿಕ್ಕ ನಂತರ ಅಥವಾ ನೀವು ಬೆಲೆ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಿದ ನಂತರ ಮತ್ತೆ ನಿಮ್ಮ ಫೋನ್ ಪೆ ಅಪ್ಲಿಕೇಶನ್ ಅನ್ನು ಲಾಗ್ ಇನ್ ಆಗಬಹುದಾಗಿದೆ.

Google Pay ಗ್ರಾಹಕರು ಈ ರೀತಿ ಮಾಡಿ

ನೀವು Gpay ಅಥವಾ ಗೂಗಲ್ ಪೆ ಗ್ರಾಹಕರಾಗಿದ್ದರೆ 18004190157 ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಮೊಬೈಲ್ ಕಳುವಾಗಿರುವ ಕುರಿತು ಮಾಹಿತಿ ನೀಡಿ ನಿಮ್ಮ ಅಪ್ಲಿಕೇಶನ್ ಅನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿಸಿ ಹಾಗು ಗೂಗಲ್ ಪೆ ವೆಬ್ಸೈಟ್ ಭೇಟಿ ನೀಡಿಯೂ ನೀವು ಈ ಕೆಲಸ ಮಾಡಿಕೊಳ್ಳಬಹುದಾಗಿದೆ. ಹಾಗಾಗಿ ಯಾರೇ ಆಗಿರಲಿ ತಮ್ಮ ಮೊಬೈಲ್ ಕಳುವಾದಾಗ ಸಹಾಯವಾಣಿ ಅಥವಾ ವೆಬ್ಸೈಟ್ ಮೂಲಕ ಮೊದಲು ನಿಮ್ಮ ಅಪ್ಲಿಕೇಶನ್ ಅನ್ನು ಲಾಗ್ ಔಟ್ ಮಾಡಿಸಿಕೊಳ್ಳಲು ಮರೆಯದಿರಿ.

Join Nadunudi News WhatsApp Group