UPI Tap Payment: ಸ್ಕ್ಯಾನ್ ಮಾಡದೆ UPI ಪೇಮೆಂಟ್ ಮಾಡುವುದು ಹೇಗೆ…? UPI ಬಳಸುವವರಿಗೆ ಹೊಸ ಸೇವೆ ಆರಂಭ

UPI ಹೊಸ ಫೀಚರ್ ಮೂಲಕ ಟಪ್ ಮಾಡದೆ UPI ಪೇಮೆಂಟ್ ಮಾಡಬಹುದು

UPI Tap And Payment Facility 2024: ದೇಶದಲ್ಲಿ UPI ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, UPI ದೇಶದಲ್ಲಿನ ಉತ್ತಮ ಹಾಗು ಸುರಕ್ಷಿತ ಪಾವತಿ ಅಪ್ಲಿಕೇಶನ್ ಆಗಿದೆ. ಚಿಕ್ಕ ವ್ಯವಹಾರದಿಂದ ಹಿಡಿದು, ದೊಡ್ಡ ವ್ಯವಹಾರಗಳಿಗೂ UPI ತುಂಬ ಉಪಯುಕ್ತಕರ ಆಗಿದೆ.

ಶೀಘ್ರದ ವ್ಯವಹಾರರಕ್ಕೆ UPI ಸಹಾಯಕ ಆಗಿದ್ದು, ಇನ್ನುಮುಂದೆ UPI ಇನ್ನು ಸುಲಭ ಆಗಲಿದೆ. ಹೌದು UPI ಬಳಕೆದಾರರಿಗೆ ಇನ್ನುಮುಂದೆ UPI ಟ್ಯಾಪ್ ಮತ್ತು ಪೇ ಸೌಲಭ್ಯ ಲಭ್ಯವಿದೆ. UPI ನಲ್ಲಿ ಹೊಸ ಅಪ್ಡೇಟ್ ಜಾರಿಗೆ ಬಂದಿದ್ದು UPI ಬಳಸುವವರಿಗೆ ಟಪ್ ಮಾಡದೆ UPI ಪೇಮೆಂಟ್ ಮಾಡಬಹುದಾಗಿದೆ.

UPI Tap And Payment Facility
Image Credit: Online38media

UPI ಟ್ಯಾಪ್ ಮತ್ತು ಪೇ ಸೌಲಭ್ಯ ಆರಂಭ

ಬಿಸಿನೆಸ್ ಸ್ಟ್ಯಾಂಡರ್ಡ್‌ ನ ವರದಿಯ ಪ್ರಕಾರ, UPI ಬಳಕೆದಾರರು ಶೀಘ್ರದಲ್ಲೇ ಟ್ಯಾಪ್ ಮತ್ತು ಪೇ ವೈಶಿಷ್ಟ್ಯದ ಪ್ರಯೋಜನವನ್ನು ಪಡೆಯಬಹುದು. ಈ ಸೌಲಭ್ಯದ ಅಡಿಯಲ್ಲಿ ಜನರು ಪಾವತಿ ಮಾಡಲು ಸ್ಕ್ಯಾನ್ ಮಾಡುವ ಅಗತ್ಯವಿಲ್ಲ. ಇದರೊಂದಿಗೆ ಯುಪಿಐ ಐಡಿ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಮತ್ತು ಕ್ಯೂಆರ್ ಕೋಡ್ ಅಗತ್ಯವಿರುವುದಿಲ್ಲ. ಈ ಸೌಲಭ್ಯವು UPI ಬಳಕೆದಾರರಿಗೆ ಶೀಘ್ರದಲ್ಲಿ ಪ್ರಾರಂಭವಾಗಬಹುದು. ಇದನ್ನು ಸೆಪ್ಟೆಂಬರ್ 2023 ರಲ್ಲಿ ಪ್ರಾರಂಭಿಸಲಾಯಿತು. ಈ ಸೌಲಭ್ಯವನ್ನು ಪಾವತಿಯ ವಿಭಿನ್ನ ವಿಧಾನವಾಗಿ ಪರಿಚಯಿಸಲಾಗುತ್ತಿದೆ.

UPI Tap And Payment Facility 2024
Image Credit: Hellobanker

ಸ್ಕ್ಯಾನ್ ಮಾಡದೆ UPI ಪೇಮೆಂಟ್ ಮಾಡುವ ವಿಧಾನ

Join Nadunudi News WhatsApp Group

UPI ಟ್ಯಾಪ್ ಮತ್ತು ಪೇ ಸೌಲಭ್ಯವು ಎಲ್ಲರಿಗೂ ಲಭ್ಯವಿರುತ್ತದೆ, ಆದರೆ NFC ಸಕ್ರಿಯಗೊಳಿಸಿದ ಸಾಧನಗಳನ್ನು ಮಾತ್ರ ಬೆಂಬಲಿಸುತ್ತದೆ. ಈ ಪ್ರಯೋಜನವನ್ನು ಪಡೆಯಲು ನೀವು ಸರಳ ಪ್ರಕ್ರಿಯೆಯ ಮೂಲಕ ಹೋಗಬೇಕಾಗುತ್ತದೆ. ಮೊದಲಿಗೆ UPI ಅಪ್ಲಿಕೇಶನ್ ತೆರೆಯಿರಿ, ನಂತರ UPI ಟ್ಯಾಬ್ ಮತ್ತು ಪಾವತಿ ಸೇವೆಯ ಮೇಲೆ ಕ್ಲಿಕ್ ಮಾಡಿ. ಇದರ ನಂತರ ರಿಸೀವರ್ ಸಾಧನದಲ್ಲಿ ನಿಮ್ಮ ಸಾಧನವನ್ನು ಟ್ಯಾಬ್ ಮಾಡಿ ಮತ್ತು ಪಾವತಿಗಾಗಿ ಪಿನ್ ಅನ್ನು ನಮೂದಿಸಿ.

Join Nadunudi News WhatsApp Group