Urbn Power Bank: ಮೊಬೈಲ್ ಚಾರ್ಜ್ ಖಾಲಿಯಾಗುತ್ತೆ ಅನ್ನುವ ಭಯ ಬೇಡ, 10000 mAh ಪವರ್ ಬ್ಯಾಂಕ್ ಅಗ್ಗದ ಬೆಲೆಗೆ

10000mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಪವರ್ ಬ್ಯಾಂಕ್ ಲಾಂಚ್ ಮಾಡಿದ Urbn ಕಂಪನಿ

Urbn MagTag Power Bank Launch In India: ಸಾಮಾನ್ಯವಾಗಿ ಎಲ್ಲರು ಕೂಡ ಸ್ಮಾರ್ಟ್ ಫೋನ್(Smartphone) ಗಳನ್ನೂ ಬಳಸುತ್ತಾರೆ. ಸ್ಮಾರ್ಟ್ ಫೋನ್ ಬಳಸದೆ ಇರುವವರು ಸಂಖ್ಯೆ ಅತಿ ಕಡಿಮೆ ಎನ್ನಬಹುದು. ಇನ್ನು ಸ್ಮಾರ್ಟ್ ಫೋನ್ ಯಾವಾಗಲು ಆನ್ ಆಗಿರಲು ಮುಖ್ಯವಾಗಿ ಮೊಬೈಲ್ ನಲ್ಲಿ ಚಾರ್ಜ್ ಇರಬೇಕಾಗುತ್ತದೆ. ಹೆಚ್ಚು ಮೊಬೈಲ್ ಬಳಸಿದರೆ ಚಾರ್ಜ್ ಬೇಗ ಖಾಲಿ ಆಗುತ್ತದೆ. ಇನ್ನು ಮನೆಯಲ್ಲಿಯೇ ಇದ್ದಾರೆ ಮೊಬೈಲ್ ಗೆ ಚಾರ್ಜ್ ಮಾಡಿಕೊಳ್ಳೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಆದರೆ ಪ್ರಯಾಣ ಮಾಡುತ್ತಿರುವಾಗ ಮೊಬೈಲ್ ಗೆ ಚಾರ್ಜ್ ಹಾಕುವುದು ಕಷ್ಟವಾಗುತ್ತದೆ. ಇದ್ದಕಾಗಿ ಜನರು ಹೆಚ್ಚಾಗಿ ಪವರ್ ಬ್ಯಾಂಕ್ ಅನ್ನು ಬಳಸುತ್ತಾರೆ. ಸದ್ಯ ಗ್ರಾಹಕರಿಗಾಗಿ ಇದೀಗ Urbn ಕಂಪನಿಯು ನೂತನವಾಗಿ ಹೆಚ್ಚಿನ ಬ್ಯಾಟರಿ ಸಾಮರ್ಥ್ಯವಿರುವ ಪವರ್ ಬ್ಯಾಂಕ್ ಅನ್ನು ಪರಿಚಯಿಸಿದೆ. ಭಾರತದಲ್ಲಿ ಬಿಡುಗಡೆಗೊಂಡಿರುವ ಈ ನೂತನ ಪವರ್ ಬ್ಯಾಂಕ್ ನ ಬಗ್ಗೆ ಒಂದಿಷ್ಟು ವಿವರ ತಿಳಿಯೋಣ.

Urbn MagTag Power Bank Launch In India
Image Credit: Croma

Urbn MagTag Power Bank
ಸದ್ಯ ಮಾರುಕಟ್ಟೆಯಲ್ಲಿ ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವ Urbn MagTag Power Bank ಲಾಂಚ್ ಆಗಿದೆ. ಪವರ್ ಡೆಲಿವರಿ ಹೊಂದಾಣಿಕೆಯೊಂದಿಗೆ ಕೇವಲ 30 ನಿಮಿಷಗಳಲ್ಲಿ 50% ಚಾರ್ಜ್ ಆಗಲಿದೆ. ಈ ಮ್ಯಾಗ್‌ ಟ್ಯಾಗ್ ಐಫೋನ್‌ ಗಳು ಮತ್ತು ಆಂಡ್ರಾಯ್ಡ್ ಸಾಧನಗಳಿಗೆ ವೈರ್‌ ಲೆಸ್ ಚಾರ್ಜಿಂಗ್ ಅನ್ನು ಸುಲಭಗೊಳಿಸಲು ವಿಶಿಷ್ಟವಾದ ರಿಂಗ್ ಅನ್ನು ಸಹ ಹೊಂದಿದೆ.

10000mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಪವರ್ ಬ್ಯಾಂಕ್ ಲಾಂಚ್
Urbn MagTag ಪವರ್ ಬ್ಯಾಂಕ್ 10000mAh ಮತ್ತು 5000mAh ಸಾಮರ್ಥ್ಯದ ಕಾಂಪ್ಯಾಕ್ಟ್‌ ಮ್ಯಾಗ್ನೆಟಿಕ್‌ ವಾಯರ್‌ ಲೆಸ್‌ ಪವರ್‌ ಬ್ಯಾಂಕ್‌ ಆಗಿದೆ. ಇದು ತ್ವರಿತ ಮತ್ತು ಪರಿಣಾಮಕಾರಿ ಪವರ್ ಅಪ್‌ ಗಳಿಗಾಗಿ 15W ವೈರ್ ಲೆಸ್ ಮತ್ತು 20W ವೈರ್ಡ್ ಚಾರ್ಜಿಂಗ್ ಅನ್ನು ನೀಡಲಿದೆ. ಇದು ಸಂಪೂರ್ಣ ಚಾರ್ಜಿಂಗ್‌ ಗಾಗಿ 3 ರಿಂದ 4 ಗಂಟೆಗಳ ಚಾರ್ಜಿಂಗ್ ತೆಗೆದುಕೊಳ್ಳುತ್ತದೆ. ಅಲ್ಲದೆ 5000mAh ಮ್ಯಾಗ್‌ ಟ್ಯಾಗ್ ಪ್ರೀಮಿಯಂ ಫೀಚರ್ಸ್‌ ಗಳನ್ನು 10000mAh ಆವೃತ್ತಿಯಲ್ಲಿಯೂ ಸಹ ಕಾಣಬಹುದು. ಇನ್ನು ಈ ಪವರ್ ಬ್ಯಾಂಕ್ ಉತ್ತಮ ಗುಣಮಟ್ಟಕ್ಕಾಗಿ BIS ಪ್ರಮಾಣೀಕರಣವನ್ನು ಕೂಡ ಹೊಂದಿದೆ.

Urbn MagTag Power Bank Price
Image Credit: Pune News

ಬಲಿಷ್ಠ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಪವರ್ ಬ್ಯಾಂಕ್ ನ ಬೆಲೆ ಎಷ್ಟಿದೆ..?
Urbn MagTag ಪವರ್ ಬ್ಯಾಂಕ್ 10000mAh ಸಾಮರ್ಥ್ಯದ ಬೆಲೆ 3,499 ರೂ. ಆಗಿದೆ. ಇದನ್ನು ಸೀಮಿತ ಅವಧಿಗೆ Amazon.in ಮೂಲಕ ರೂ. 2,999 ಬೆಲೆಯಲ್ಲಿ ಲಭ್ಯವಿರುತ್ತದೆ. ಇನ್ನು Urbn MagTag ಪವರ್ ಬ್ಯಾಂಕ್ 5000mAh ಸಾಮರ್ಥ್ಯದ ಆಯ್ಕೆಯು 2,499 ರೂ. ಗಳಲ್ಲಿ ಲಭ್ಯವಿರುತ್ತದೆ.ನೀವು Urbn MagTag ಪವರ್ ಬ್ಯಾಂಕ್ ಅನ್ನು Amazon.in, Flipkart, Croma, Vijay Sales and Urbn’s D2C platform, Urbnworld.com ನಲ್ಲಿ ಖರೀದಿಸಬಹುದು.

Join Nadunudi News WhatsApp Group

Join Nadunudi News WhatsApp Group