Virat Kohli: ವೃತ್ತಿ ಬದುಕಿನಲ್ಲಿ ಕೊಹ್ಲಿ ಕಠಿಣ ನಿರ್ಧಾರ, ಅಭಿಮಾನಿಗಳಿಗೆ ಬೇಸರ.

ಕ್ರಿಕೆಟ್ ನಲ್ಲಿ ಹೊಸ ನಿರ್ಧಾರ ತೆಗೆದುಕೊಂಡ ಕೊಹ್ಲಿ.

Virat Kohli Retirement: Team India ಖ್ಯಾತ ಆಟಗಾರ Virat Kohli ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. ದೇಶದ ವಿದೇಶಗಳಿಂದು ಅಭಿಮಾನಿಗಳನ್ನು ಹೊಂದಿರುವ ಶ್ರೇಷ್ಟ್ರ ಕ್ರಿಕೆಟ್ ಆಟಗಾರ ವಿರಾಟ್ ಎನ್ನಬಹುದು. ವಿರಾಟ್ ಕೊಹ್ಲಿ ತಮ್ಮ ಅತ್ಯದ್ಭುತ ಆಟದ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.

ಯಾವುದೇ ಕ್ರಿಕೆಟ್ ಪಂದ್ಯ ನಡೆದರೂ ಕೂಡ ವಿರಾಟ್ ಆ ಪಂದ್ಯದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸುತ್ತಾರೆ. ಇನ್ನು ICC World cup 2023 ಇತ್ತೀಚೆಗಷ್ಟೇ ಕೊನೆಗೊಂಡಿತ್ತು. ಈ ಬಾರಿ ಕೂಡ India ಕಪ್ ಅನ್ನು ಪಡೆಯಲು ಸಾಧ್ಯವಾಗಲಿಲ್ಲ ಎನ್ನುವುದೇ ಭಾರತೀಯ ಬೇಸರಕ್ಕೆ ಸದ್ಯದ ಕಾರಣವಾಗಿದೆ.

Virat Kohli Latest News
Image Credit: Times Now

ಕೊಹ್ಲಿ ಅಭಿಮಾನಿಗಳಿಗೆ ಬೇಸರದ ಸುದ್ದಿ
ಇನ್ನು ಟೀಮ್ ಇಂಡಿಯಾ ಆಸ್ಟೇಲಿಯಾ ತಂಡದ ವಿರುದ್ಧ ಸೋಲನ್ನು ಅನುಭವಿಸಿದೆ. ಈ ಮೂಲಕ World cup 2023 ರಲ್ಲಿ ರನ್ನರ್ ಪಟ್ಟವನ್ನು ಟೀಮ್ ಇಂಡಿಯಾ ಪಡೆದುಕೊಂಡಿದೆ. ಇನ್ನು ಈ ಬಾರಿ ಕೂಡ ಟ್ರೋಫಿ ಕೈ ತಪ್ಪಿದ್ದಕ್ಕಾಗಿ ಭಾರತೀಯ ತಂಡದ ಆಟಗಾರು ಬಾರಿ ಬೇಸರದಲ್ಲಿದ್ದಾರೆ. ಇನ್ನು ಟೀಮ್ ಇಂಡಿಯಾ ಸೋಲಿನ ಬಳಿಕ ಕ್ರಿಕೆಟ್ ಆಟಗಾರರ ಕುರಿತು ಸಾಕಷ್ಟು ಸುದ್ದಿಗಳು ಹೊರಬೀಳುತ್ತಲೇ ಇದೆ. ಸದ್ಯ ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಒಂದಿಷ್ಟು ಚರ್ಚೆ ಉಂಟಾಗಿದೆ. ವೃತ್ತಿ ಬದುಕಿನಲ್ಲಿ ಕೊಹ್ಲಿ ಕಠಿಣ ನಿರ್ಧಾರ ಕೈಗೊಳ್ಳುವ ಮೂಲಕ ಅಭಿಮಾನಿಗಳಿಗೆ ಬೇಸರ ನೀಡಿದ್ದಾರೆ.

Virat Kohli retirement gossips
Image Credit: ABP News

ಕ್ರಿಕೆಟ್ ನಲ್ಲಿ ಹೊಸ ನಿರ್ಧಾರ ತೆಗೆದುಕೊಂಡ ಕೊಹ್ಲಿ
ವಿರಾಟ್ ಕೊಹ್ಲಿ ಸೀಮಿತ ಓವರ್‌ ಗಳ ಕ್ರಿಕೆಟ್‌ ನಿಂದ ದೂರವಿರಬಹುದು ಎಂಬ ವದಂತಿ ಹೆಚ್ಚುತ್ತಿದೆ. ಈ ವೇಳೆ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟಿ 20 ಕ್ರಿಕೆಟ್ ಸರಣಿಯಲ್ಲಿ ಆಡುವುದಿಲ್ಲ ಎಂದು ವರದಿಗಳು ತಿಳಿಸಿವೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ವಿರಾಟ್ ಕೊಹ್ಲಿ ವೈಟ್ ಬಾಲ್ ಕ್ರಿಕೆಟ್ ನಿಂದ ಹೊರಗುಳಿಯಲಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸವು ಡಿಸೆಂಬರ್ 10 ರಿಂದ ಮೂರು ಪಂದ್ಯಗಳ T20I ಸರಣಿಯೊಂದಿಗೆ ಪ್ರಾರಂಭವಾಗಲಿದೆ. ನಂತರ ಮೂರು ಪಂದ್ಯಗಳ ಏಕದಿನ ಸರಣಿ ನಿಗದಿಯಾಗಿದೆ. ಪ್ರವಾಸವು ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಕೊನೆಗೊಳ್ಳುತ್ತದೆ, ಇದು WTC ಋತುವಿನ ಭಾಗವಾಗಿದೆ. ಈ ಎರಡು ಪಂದ್ಯಗಳಲ್ಲಿ ಕೊಹ್ಲಿ ಆಡಬಹುದು ಎಂದು ವರದಿ ಹೇಳಿದೆ.

Join Nadunudi News WhatsApp Group

Join Nadunudi News WhatsApp Group