Vande Bharat: ಒಂದು ಒಂದೇ ಭಾರತ್ ರೈಲು ನಿರ್ಮಾಣ ಮಾಡಲು ಎಷ್ಟು ಹಣ ಖರ್ಚಾಗುತ್ತದೆ, ದುಬಾರಿ ರೈಲು.

ಒಂದು ಒಂದೇ ಭಾರತ್ ರೈಲು ನಿರ್ಮಾಣ ಮಾಡಲು ಎಷ್ಟು ಹಣ ಖರ್ಚಾಗುತ್ತದೆ ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯಿರಿ.

Vande Bharat Making Express: ಪ್ರತಿನಿತ್ಯ ರೈಲಿನಲ್ಲಿ ಲಕ್ಷಾಂತರ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಸಾಕಷ್ಟು ಸೌಲಭ್ಯವನ್ನು ನೀಡುತ್ತದೆ. ಭಾರತೀಯ ರೈಲ್ವೆನಲ್ಲಿ ಸಾಕಷ್ಟು ಬಾರಿ ಪ್ರಯಾಣಿಕರು ಪ್ರಯಾಣಿಸಿದರು ಕೂಡ ರೈಲುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡಿರುವುದಿಲ್ಲ.

ಇದೀಗ ಒಂದು ಒಂದೇ ಭಾರತ್ ರೈಲು (Vande Bharat Express) ನಿರ್ಮಾಣ ಮಾಡಲು ಎಷ್ಟು ಹಣ ಖರ್ಚಾಗುತ್ತದೆ ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

vande bharat express latest news
Image Credit: Wikipedia

ಒಂದು ಒಂದೇ ಭಾರತ್ ರೈಲು ನಿರ್ಮಾಣ ಮಾಡಲು ಎಷ್ಟು ಹಣ ಖರ್ಚಾಗುತ್ತದೆ
ವಂದೇ ಭಾರತ್ ರೈಲನ್ನು ತಯಾರಿಸಲು ಜಿಎಸ್ ಟಿ ಇಲ್ಲದೆ 108 ಕೋಟಿ ರೂ. ವೆಚ್ಚವಾಗುತ್ತದೆ. VB ನಲ್ಲಿ ವೇಗ, ವೇಗವರ್ಧನೆ ಮತ್ತು ಸುರಕ್ಷತೆ ಉತ್ತಮವಾಗಿರುವುದರಿಂದ ಸಾಂಪ್ರದಾಯಿಕ ರೈಲನ್ನು ಹೋಲಿಸಲಾಗುವುದಿಲ್ಲ. ಜರ್ಮನ್ ವಿನ್ಯಾಸದ ಲಿಂಕ್ ಹಾಫ್ ಮನ್ ಬುಶ್ (ಎಲ್ಎಚ್ ಬಿ) ಪ್ರತಿ ಕೋಚ್ ಗೆ ರೂ. 2 .5 ಕೋಟಿ ವೆಚ್ಚವಾಗುತ್ತದೆ.

ಒಂದೇ ಭಾರತ್ ರೈಲಿನ ಒಂದು ಕೋಚ್ ನ ಬೆಲೆ ಎಷ್ಟು
ಪ್ರತಿ ಇಂಜಿನ್ ತಯಾರಿಕೆಗೆ ಸುಮಾರು 12 ರಿಂದ 15 ಕೋಟಿ ವೆಚ್ಚವಾಗುತ್ತದೆ. ಇನ್ನು ಒಂದೇ ಭಾರತ್ ರೈಲಿನ ಟಿಕೆಟ್ ಪ್ರಯಾಣದ ಬೆಲೆ ಸುಮಾರು 1085 ರಿಂದ 2270 ರೂ. ವರೆಗೆ ಇರುತ್ತದೆ. ಒಂದೇ ಭಾರತ್ ರೈಲಿನ ಒಂದು ಕೋಚ್ ನ ಬೆಲೆ 9 ಕೋಟಿ ರೂ. ಆಗಿದೆ. ಚಾಲಕ ಕ್ಯಾಬಿನ್ ಹೊಂದಿರುವ ಕೋಚ್ ಸುಮಾರು 315 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ.

vande bharat express latest news
Image Credit: Technology

ಸಾಮಾನ್ಯ ರೈಲು ತಯಾರಿಕೆಗೆ ಎಷ್ಟು ಖರ್ಚಾಗುತ್ತದೆ
ಸುಮಾರು 24 ಭೋಗಿಗಳಿರುವ ದೇಶದ ಸಾಮಾನ್ಯ ರೈಲು ತಯಾರಿಸಲು 66 ಕೋಟಿ ವೆಚ್ಚವಾಗುತ್ತದೆ ಎಂದು ವರದಿ ಹೇಳಿದೆ. ಸಾಮಾನ್ಯ ರೈಲಿಗೆ ಇಂಜಿನ್ ತಯಾರಿಸಲು ಸರಾಸರಿ 18 ಕೋಟಿ ವೆಚ್ಚವಾಗುತ್ತದೆ. ಒಂದು ಭೋಗಿಯ ವೆಚ್ಚ ಸುಮಾರು ಎರಡು ಕೋಟಿ. ಹಾಗಾಗಿ 24 ಭೋಗಿಗಳ ಸಾಮಾನ್ಯ ರೈಲು ತಯಾರಿಸಲು 66 ಕೋಟಿ ರೂಪಾಯಿ ಖರ್ಚಾಗುತ್ತದೆ.

Join Nadunudi News WhatsApp Group

Join Nadunudi News WhatsApp Group