Varthur Santhosh: ಬಿಗ್ ಬಾಸ್ ನಲ್ಲಿ 4 ನೇ ಸ್ಥಾನ ಪಡೆದುಕೊಂಡ ವರ್ತುರ್ ಸಂತೋಷ್ ಗೆ ಸಿಕ್ಕ ಒಟ್ಟು ಬಹುಮಾನ ಎಷ್ಟು ಗೊತ್ತಾ…?

ಬಿಗ್ ಬಾಸ್ ಮನೆಯಲ್ಲಿ ಹಳ್ಳಿಕಾರ್ ವರ್ತುರ್ ಸಂತೋಷ್ ಪಡೆದ ಹಣವೆಷ್ಟು..?

Varthur Santhosh Prize Money: ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ Bigg Boss Kannada Season 10 ಅಕ್ಟೋಬರ್ 8 ರಂದು 2023 ರಂದು ಆರಂಭವಾಗಿದ್ದು, 2024 ಜನವರಿ 28 ರಂದು ಅಂತ್ಯಗೊಂಡಿದೆ. ಬಿಗ್ ಬಾಸ್ ಮನೆಗೆ ಆರಂಭದಲ್ಲಿ 19 ಕಂಟೆಸ್ಟೆಂಟ್ ಗಳು ಎಂಟ್ರಿ ಕೊಟ್ಟಿದ್ದು, 112 ದಿನಗಳ ಹಣಾಹಣಿಯಲ್ಲಿ 6 ಜನ ಸ್ಪರ್ಧಿಗಳು ಫೈನಲ್ ಹಂತವನ್ನು ತಲುಪಿದ್ದರು. ಇನ್ನು ಆರು ಜನ ಫೈನಲಿಸ್ಟ್ ನಲ್ಲಿ ಒಬ್ಬರು ಮಾತ್ರ ಬಿಗ್ ಬಾಸ್ ವಿನ್ನರ್ ಟೈಟಲ್ ಅನ್ನು ಪಡೆದುಕೊಂಡಿದ್ದಾರೆ.

Varthur Santhosh Prize Money
Image Credit: Original Source

ಬಿಗ್ ಬಾಸ್ ಸೀಸನ್ ಪಟ್ಟ ಪಡೆದ ಕಾರ್ತಿಕ್ ಮಹೇಶ್
BBK10 ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿರುವುದು ಈಗಾಗಲೇ ಎಲ್ಲರಿಗು ತಿಳಿದೇ ಇದೆ. ಬಿಗ್ ಬಾಸ್ ವಿನ್ನರ್ ಗೆ ಭರ್ಜರಿ ಬಹುಮಾನ ಸಿಕ್ಕಿದಂತೂ ನಿಜ. ವಿನ್ನರ್ ನ ಜೊತೆಗೆ ಬಿಗ್ ಬಾಸ್ ಮನೆಯಲ್ಲಿರುವ ಪ್ರತಿ ಸ್ಪರ್ಧಿಗಳಿಗೂ ಕೂಡ ಪೇಮೆಂಟ್ ಇದ್ದೆ ಇರುತ್ತದೆ. ಅದರಲ್ಲೂ ಟಾಪ್ 6 ಸ್ಪರ್ದಿಗಳಿಗೆ ಭರ್ಜರಿ ಮೊತ್ತವನ್ನೇ ನೀಡಲಾಗುತ್ತದೆ.

ಇನ್ನು ಬಿಗ್ ಬಾಸ್ ಸೀಸನ್ ಪಟ್ಟ ಪಡೆದ ಕಾರ್ತಿಕ್ ಮಹೇಶ್ ಬರೋಬ್ಬರಿ 50 ಲಕ್ಷ ಹಣವನ್ನು ಪಡೆದಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಸೆಲೆಬ್ರೆಟಿ ಅಲ್ಲದಿದ್ದರೂ ಕೂಡ ಅತಿ ಹೆಚ್ಚು ಫೇಮಸ್ ಆಗಿದ್ದೆಂದರೆ ಅದು ಹಳ್ಳಿಕಾರ್ ವರ್ತುರ್ ಸಂತೋಷ್. ಇದೀಗ ನಾವು ಹಳ್ಳಿಕಾರ್ Varthur Santhosh ಬಿಗ್ ಬಾಸ್ ಮನೆಯಿಂದ ಎಷ್ಟು ಹಣ ಗಳಿಸಿದ್ದಾರೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಫ್ಯಾನ್ಸ್ ಪಡೆದಿದ್ದ ವರ್ತೂರ್
ಇನ್ನು ಬಿಗ್ ಬಾಸ್ ಮನೆಯಲ್ಲಿ ಸೆಲೆಬ್ರೆಟಿಗಳ ಜೊತೆಗೆ ಸಾಮಾನ್ಯ ಜನರು ಕೂಡ ಸ್ಪರ್ದಿಗಳಾಗಿ ಎಂಟ್ರಿ ಕೊಟ್ಟಿದ್ದರು. ಅದರಲ್ಲಿ ಹಳ್ಳಿಕಾರ್ ವರ್ತೂರ್ ಸಂತೋಷ್ ಕೂಡ ಒಬ್ಬರು. ಬಿಗ್ ಬಾಸ್ ಮನೆಯಲ್ಲಿರುವಾಗಲೇ ಒಂದು ವಿವಾದಲ್ಲಿ ಸಿಲುಕಿಕೊಂಡು ನಂತರ ಮತ್ತೆ ಬಿಗ್ ಬಾಸ್ ರೀ ಎಂಟ್ರಿ ಕೊಟ್ಟಿದ್ದರು. ವರ್ತುರ್ ವಿವಾದದಲ್ಲಿ ಸಿಲಿಕಿಕೊಂಡ ಸಮಯದಲ್ಲಿ ಅವರಿಗೆ ಫ್ಯಾನ್ಸ್ ಬೇಸ್ ಎಷ್ಟಿದೆ ಎನ್ನುವುದು ತಿಳಿದುಬಂದಿತ್ತು. ಇನ್ನು ವರ್ತುರ್ ಎಷ್ಟೇ ಬಾರಿ ನಾಮಿನೇಟ್ ಆದರೂ ಕೂಡ ಜನರು ಅವರನ್ನು ಸೇವ್ ಮಾಡುತ್ತಾ ಅವರನ್ನು ಟಾಪ್ 6 ಗೆ ಕರೆದುಕೊಂಡು ಬಂದಿದ್ದರು.

Bigg Boss Varthur Santhosh
Image Credit: Filmibeat

ಹಳ್ಳಿಕಾರ್ ವರ್ತುರ್ ಸಂತೋಷ್ ಪಡೆದ ಹಣವೆಷ್ಟು..?
ಇನ್ನು ಫೈನಲ್ ಟಾಪ್ 2 ನಲ್ಲಿ ವರ್ತುರ್ ಇರುತ್ತಾರೆ ಎಂದು ಜನರು ಹೆಚ್ಚು ನಂಬಿದ್ದರು. ಆದರೆ ವರ್ತುರ್ ಸಂತೋಷ್ ಬಿಗ್ ಬಾಸ್ ಮನೆಯಿಂದ 5 ನೇ ಕಂಟೆಸ್ಟೆಂಟ್ ಆಗಿ ಹೊರಬಂದಿದ್ದು, 4th ರನ್ನರ್ ಅಪ್ ಆಗಿ ಹೊರಹೊಮ್ಮದಿದ್ದಾರೆ. ಇನ್ನು ನಾಲ್ಕನೇ ಸ್ಥಾನವನ್ನ ಪಡೆದ ಹಳ್ಳಿಕಾರ್ ವರ್ತೂರ್ ಸಂತೋಷ್ ಅವರಿಗೆ 2 ಲಕ್ಷ ಬಹುಮಾನ ಮೊತ್ತವನ್ನು ನೀಡಲಾಗಿದೆ.

Join Nadunudi News WhatsApp Group

5 ನೇ ಸ್ಥಾನ ಪಡೆದ ತುಕಾಲಿ ಸಂತೋಷ್ ಕೂಡ 2 ಲಕ್ಷ ಬಹುಮಾನ ಮೊತ್ತವನ್ನ ಪಡೆದಿದ್ದಾರೆ. ಮೂರನೇ ರನ್ನರ್ ಅಪ್ ಆಗಿ ವಿನಯ್ ಹೊರಹೊಮ್ಮಿದ್ದು, 5 ಲಕ್ಷ ಬಹುಮಾನ ಪಡೆದುಕೊಂಡಿದ್ದಾರೆ. ಇನ್ನು ಸೆಕೆಂಡ್ ರನ್ನರ್ ಅಪ್ ಆದ ಸಂಗೀತ ಅವರಿಗೆ 7 ಲಕ್ಷ ಬಹುಮಾನ ನೀಡಲಾಗಿದ್ದು, ಫಸ್ಟ್ ರನ್ನರ್ ಅಪ್ ಡ್ರೋನ್ ಪ್ರತಾಪ್ ಗೆ 10 ಲಕ್ಷ ಹಣ ನೀಡಲಾಗಿದೆ.

Join Nadunudi News WhatsApp Group