Varthur Santhosh: ವರ್ತೂರ್ ಸಂತೋಷ್ ಪತ್ನಿಯಿಂದ ದೂರವಾಗಿದ್ದು ಯಾಕೆ…? ಅಸಲಿ ಕಾರಣ ತಿಳಿಸಿದ ಬಿಗ್ ಬಾಸ್ ಸ್ಪರ್ಧಿ.

ಮದುವೆ ವಿಚಾರವಾಗಿ ಮನಬಿಚ್ಚಿ ಮಾತನಾಡಿದ ವರ್ತೂರ್ ಸಂತೋಷ್.

Varthur Santhosh Marriage Matter: ಈಗಾಗಲೇ ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ bigg boss season 10 ಆರಂಭವಾಗಿ 52 ದಿನ ಕಳೆದಿದೆ. Bigg Boss ಅತಿ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗಲ್ಲ.

ಪ್ರತಿನಿತ್ಯ 9.30 ಗೆ ಎಲ್ಲರು ಟಿವಿ ಮುಂದೆ Bigg Boss ನೋಡಲು ಕಾಯುತ್ತಿರುತ್ತಾರೆ. ಇದೀಗ ವರ್ತೂರ್ ಸಂತೋಷ್ (Varthur Santhosh)ಅವರ ಮದುವೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಕಳೆದ ಬಾರಿ ಹುಲಿ ಉಗುರು ಲಾಕೆಟ್ ಧರಿಸಿ ಅರೆಸ್ಟ್ ಆದ ವರ್ತೂರ್ ಸಂತೋಷ್ ಇದೀಗ ಮದುವೆ ವಿಚಾರವಾಗಿ ಸುದ್ದಿಯಾಗಿದ್ದಾರೆ.

Varthur Santosh Marriage
Image Credit: Vijay Karnataka

ಬಿಗ್ ಮನೆ ಅಂಗಳದಲ್ಲಿ ವರ್ತೂರ್ ಸಂತೋಷ್ ಮದುವೆ ಕಥೆ
ಬಿಗ್ ಬಾಸ್ ಮನೆಗೆ ಕಾಲಿಟ್ಟು ಒಂದೂವರೆ ತಿಂಗಳು ಕಳೆಯುತ್ತಾ ಬಂದರೂ Varthur Santhosh ತಮ್ಮ ಮದುವೆ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಆದರೆ ಈಗ ಅವರೇ ಸ್ವತಃ ತಮ್ಮ ಜೀವನದ ರಹಸ್ಯದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಇನ್ನು ವರ್ತೂರು ಸಂತೋಷ್‌ ಅವರ ಮದುವೆ ಬಗ್ಗೆ ಸಾಕಷ್ಟು ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಯಾವುದು ನಿಜ ಯಾವುದು ಸುಳ್ಳು ಎನ್ನುವುದು ಯಾರಿಗೂ ತಿಳಿದಿಲ್ಲ. ಆದರೆ ಇದೀಗ ವರ್ತೂರು ಸಂತೋಷ್‌ ತಮ್ಮ ಮದುವೆ, ತಾಯಿ-ಪತ್ನಿಯ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದಾರೆ.

ಜೀವನದ ರಹಸ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ ವರ್ತೂರ್ ಸಂತೋಷ್
ಇದೀಗ ವರ್ತೂರು ಸಂತೋಷ್‌ ತಮ್ಮ ಮದುವೆ, ತಾಯಿ-ಪತ್ನಿಯ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದಾರೆ. ” ನನ್ನ ತಾಯಿಯನ್ನು ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ನನ್ನ ಪತ್ನಿ ನನ್ನಿಂದ ದೂರ ಹೋಗಿದ್ದಾಳೆ. ನನ್ನ ಜನ ಸೇರಿದಂತೆ ನನ್ನ ತಾಯಿಯನ್ನು ಬಿಟ್ಟು ಕೊಡಲು ನನ್ನಿಂದ ಸಾಧ್ಯವಿಲ್ಲ, ಅದನ್ನು ನೀನು ಒಪ್ಪುವುದಾದರೇ ಬಾ, ಬಂದು ರಾಣಿಯಹಾಗಿರು ಅಂದೆ. ಆದರೆ ಆಕೆ ನನ್ನ ಗೇಟ್‌ನಿಂದ ಹೊರ ಹೋಗುವಂತೆ ಹೇಳಿದಳು” ಎಂದು ಪತ್ನಿಯ ಬಗ್ಗೆ ಮೊದಲ ಬಾರಿ ವರ್ತೂರು ಸಂತೋಷ ಮಾತಾನಾಡಿದ್ದಾರೆ.

Varthur Santosh Marriage Matter
Image Credit: Vistara News

ಎಲ್ಲರ ಗೊಂದಲಗಳಿಗೆ ಬ್ರೇಕ್ ಹಾಕಿದ ವರ್ತೂರ್ ಸಂತೋಷ್
ಇದೀಗ ಸೋಶಿಯಲ್ ಮೀಡಿಯಾದಲ್ಲಿ ವರ್ತೂರು ಸಂತೋಷ್‌ ಅವರ ಮದುವೆ ಸುದ್ದಿಗಳು ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ಈಗ ಸ್ವತಃ ಅವರೇ ತಮ್ಮ ಮದುವೆ ಬಗ್ಗೆ ಇದ್ದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಇದರಿಂದ ಎಲ್ಲರ ಗೊಂದಲಗಳಿಗೂ ಬ್ರೇಕ್ ಬಿದ್ದಿದೆ.

Join Nadunudi News WhatsApp Group

Join Nadunudi News WhatsApp Group