Vespa Mickey Mouse: ಓಲಾಗೆ ಪೈಪೋಟಿ ಕೊಡಲು ಬಂತು ವೆಸ್ಪಾ ಮಿಕ್ಕಿ ಮೌಸ್, ಬೆಲೆ ಕಡಿಮೆ ಮತ್ತು ಹೆಚ್ಚು ಮೈಲೇಜ್.

ವೆಸ್ಪಾ ಮಿಕ್ಕಿ ಮೌಸ್ ಆವೃತ್ತಿಯ ಹೊಸ ಸ್ಕೂಟರ್ ಬಗ್ಗೆ ಮಾಹಿತಿ ತಿಳಿಯಿರಿ.

Vespa Mickey Mouse Scooter: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಬೈಕ್ ಸ್ಕೂಟರ್ ಗಳಿಗೇನು ಕಡಿಮೆ ಇಲ್ಲ. ಹೊಸ ಹೊಸ ಕಂಪನಿಯ ಬೈಕ್ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ತಮ್ಮ ಛಾಪನ್ನು ಮೂಡಿಸುತ್ತಾ ಇರುತ್ತವೆ. ಇದೀಗ ಹೊಸ ಸ್ಕೂಟರ್ ಒಂದು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ರೆಡಿಯಾಗಿದೆ.

ವೆಸ್ಪಾ ಡ್ಯುಯಲ್ ಸ್ಕೂಟರ್
ಇಟಾಲಿಯನ್ ವಾಹನ ತಯಾರಕರಾದ ವೆಸ್ಪಾದವರು ಇತ್ತೀಚಿಗೆ ಭಾರತದಲ್ಲಿ ವೆಸ್ಪಾ ಡ್ಯುಯಲ್ ಸ್ಕೂಟರ್ ಪರಿಚಯಿಸಿದ್ದರು, ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಿಕ್ಕಿ ಮೌಸ್ ಡಿಸೈನ್ ಒಳಗೊಂಡ ವೆಸ್ಪಾವನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಈ ಹೊಸ ಮಿಕ್ಕಿ ಮೌಸ್ ಆವೃತ್ತಿಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ.

Vespa Mickey Mouse Scooter
Image Credit: Business World

ಈ ಮಿಕ್ಕಿ ಮೌಸ್ ಎಂಬ ಕಾರ್ಟೂನ್ ವಿಶ್ವಾದ್ಯಂತ ತುಂಬಾ ಜನಪ್ರಿಯತೆ ಪಡೆದಿದೆ. ಇಂತಹ ಕಾರ್ಟೂನ್ ಇಸೈನ್ ಒಳಗೊಂದು ಬರುವ ಸ್ಕೂಟರ್ ಗಳು ಉತ್ತಮ ಮಾರಾಟ ತಂದುಕೊಡುವ ನಿರೀಕ್ಷೆಯಲ್ಲಿ ಕಂಪೆನಿಯಿದೆ. ಮಿಕ್ಕಿ ಮೌಸ್ ಕಾರ್ಟೂನ್ ಒಡೆತನವು ಡಿಸ್ನಿ ಅವರದ್ದಾಗಿದ್ದು, ಈ ಹಿಂದಿನಿಂದಲೂ ವೆಸ್ಪಾ ಹಾಗು ಡಿಸ್ನಿ ಉತ್ತಮ ಭಾಂದವ್ಯ ಹೊಂದಿವೆ.

ಡಿಸ್ನಿಯಿಂದ ಹೊರಬಂದ ಇತ್ತೀಚಿನ ಕಾರ್ಟೂನ್ ಚಿತ್ರವಾದ ಲೂಕಾದಲ್ಲಿ, ಕೆಲವು ಸಾಹಸ ಸನ್ನಿವೇಶಗಳಿಗಾಗಿ ವೆಸ್ಪಾವನ್ನು ಬಳಸಲಾಗಿತ್ತು. ಇದೀಗ ಈ ಸಹಯೋಗವು ಮಿಕ್ಕಿ ಮೌಸ್ ಆವೃತ್ತಿಯನ್ನು ಪ್ರಾರಂಭಿಸಲು ಹೊರಟಿದ್ದು, ಇದಕ್ಕೂ ಪಮುಖ ಕಾರಣವಿದೆ. ಈ ಸಹಯೋಗವು ಡಿಸ್ನಿಯ 100 ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.

Vespa Mickey Mouse Scooter
Image Credit: Autox

ವೆಸ್ಪಾ ಮಿಕ್ಕಿ ಮೌಸ್ ಆವೃತ್ತಿ
ಡಿಸ್ನಿ ಮತ್ತು ವೆಸ್ಪಾ ಮಿಕ್ಕಿ ಮೌಸ್ ಆವೃತ್ತಿಯು ನಿಜವಾಗಿಯೂ ಸೂಕ್ಷ್ಮವಾಗಿದೆ. ಏಕೆಂದರೆ ಈ ಸ್ಕೂಟರ್‌ನಲ್ಲಿ ಕಾಣುವ ಹಳದಿ, ಕೆಂಪು, ಕಪ್ಪು ಮತ್ತು ಬಿಳಿ ಬಣ್ಣಗಳು ಸಾಂಪ್ರದಾಯಿಕ ಮಿಕ್ಕಿ ಮೌಸ್ ಪಾತ್ರಗಳನ್ನು ತೋರುತ್ತವೆ. ಹಳದಿ ಚಕ್ರಗಳು ಮತ್ತು ಮುಂಭಾಗದ ಫೆಂಡರ್‌ಗಳು ಮಿಕ್ಕಿ ಮೌಸ್‌ನ ಬೂಟುಗಳನ್ನು ಪ್ರತಿನಿಧಿಸುತ್ತವೆ.

Join Nadunudi News WhatsApp Group

ಇನ್ನು ವೆಸ್ಪಾ ಈ ಮಿಕ್ಕಿ ಮೌಸ್ ಆವೃತ್ತಿಯನ್ನು 50cc, 125cc ಮತ್ತು 150cc ಮಾದರಿಗಳನ್ನು ಒಳಗೊಂಡಂತೆ ತನ್ನ ಪ್ರೈಮಾವೆರಾ ಸ್ಕೂಟರ್‌ ನೊಂದಿಗೆ ಮಾತ್ರ ನೀಡುತ್ತಿದೆ. ಇದು ಕೇವಲ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯ, ಭಾರತದಲ್ಲಿ ಮಾರಾಟಕ್ಕಿಲ್ಲ. ವೆಸ್ಪಾ ಮಿಕ್ಕಿ ಮೌಸ್ ಹೆಲ್ಮೆಟ್ ಅನ್ನು ಪ್ರಮಾಣಿತ ಕೊಡುಗೆಯಾಗಿ ನೀಡುವ ನಿರೀಕ್ಷೆಯಿದೆ.

Join Nadunudi News WhatsApp Group