Vijay Devarakonda: ಸಮಂತಾಗೆ ಹೊಸ ಹೆಸರಿಟ್ಟ ವಿಜಯ್ ದೇವರಕೊಂಡ, ನೀನೇ ನನ್ನ ರೋಜಾ.

ನಟಿ ಸಮಂತಾಗೆ ಹೊಸ ಹೆಸರನ್ನ ನಾಮಕರಣ ಮಾಡಿದ್ದಾರೆ ನಟ ವಿಜಯ್ ದೇವರಕೊಂಡ.

Actor Vijay Devarakonda: ಖ್ಯಾತ ನಟಿ ಸಮಂತಾ (Samantha) ಹಾಗು ನಟ ವಿಜಯ್ ದೇವರಕೊಂಡ (Vijay Devarakonda) ಜೊತೆಯಾಗಿ ಖುಷಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಜೋಡಿ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದು ಈ ಸಿನಿಮಾ ಮೂಲಕ ಪ್ರೇಕ್ಷರನ್ನು ರಂಜಿಸಲು ಬರುತ್ತಿದ್ದಾರೆ.

ಖುಷಿ ಸಿನಿಮಾದ ಮೊದಲ ಹಾಡು ಇಂದು ರಿಲೀಸ್ ಆಗಿದ್ದು ಈ ಹಾಡಿನಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

Kushi movie
Image Source: Mirchi9

ಖುಷಿ ಸಿನಿಮಾದ ಮೊದಲ ಹಾಡು ರಿಲೀಸ್
ಟಾಲಿವುಡ್ ನ ಖ್ಯಾತ ನಟ ವಿಜಯ್ ದೇವರಕೊಂಡ ಇದೀಗ ಸುದ್ದಿಯಲ್ಲಿದ್ದಾರೆ. ನಟ ವಿಜಯ್ ದೇವರಕೊಂಡ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿಜಯ್ ದೇವರಕೊಂಡ ಜನುಮ ದಿನದ ಸ್ಪೆಷಲ್ ಆಗಿ ಖುಷಿ ಸಿನಿಮಾದ ಮೊದಲ ಹಾಡು ರಿಲೀಸ್ ಮಾಡಲಾಗಿದೆ. ನನ್ನ ರೋಜಾ ನೈನ್ ಎಂಬ ಮೆಲೋಡಿ ಟ್ರ್ಯಾಕ್ ಬಿಡುಗಡೆಯಾಗಿದ್ದು ಸಾಕಷ್ಟು ಸದ್ದು ಮಾಡುತ್ತಿದೆ.

Kushi movie
Image Source: Telegraph India

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಲು ರೆಡಿಯಾದ ಖುಷಿ ಸಿನಿಮಾ
ಖುಷಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಲು ರೆಡಿಯಾಗುತ್ತಿದೆ. ಈ ಸಿನಿಮಾ ತೆಲುಗು, ಕನ್ನಡ, ಹಿಂದಿ ಮಲಯಾಳಂ ಹಾಗು ತಮಿಳು ಭಾಷೆಯಲ್ಲಿಯೂ ತೆರೆಗೆ ಬರಲಿದೆ. ಮೈತ್ರಿ ಮೂವಿ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಮಜಿಲೀ ಹಿಟ್ ನಿರ್ದೇಶಕ ಶಿವ ನಿರ್ವಣ ನಿರ್ದೇಶಿಸುತ್ತಿದ್ದಾರೆ.

ರೊಮ್ಯಾಂಟಿಕ್ ಲವ್ ಎಂಟರ್‌ಟೈನರ್ ಕಥೆಯನ್ನು ಹೊಂದಿರುವ ಖುಷಿ ಸಿನಿಮಾ ಸೆಪ್ಟೆಂಬರ್ 1 ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವಿನ್ನಿಲ್ಲಾ ಕಿಶೋರ್, ರೋಹಿನಿ ಸೇರಿದಂತೆ ಹಲವರು ಚಿತ್ರದ ಭಾಗವಾಗಿದ್ದಾರೆ. ಹೇಷಂ ವಾಹೆಬ್ ಸಂಗೀತ, ಜಿ ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ.

Join Nadunudi News WhatsApp Group

Kushi movie
Image Source; Hindusthan Times

Join Nadunudi News WhatsApp Group