Vinfast VF3: ಒಮ್ಮೆ ಚಾರ್ಜ್ ಮಾಡಿದರೆ 201 Km ಮೈಲೇಜ್, ಚಿಕ್ಕ ಕುಟುಂಬಕ್ಕಾಗಿ ಬಂತು ಇನ್ನೊಂದು ಚಿಕ್ಕ ಕಾರ್

2025 ರ ವೇಳೆ ವಿನ್ ಫಾಸ್ಟ್ ಕಂಪನಿಯು ಮೊದಲ ಎಲೆಕ್ಟ್ರಿಕ್ ಕಾರ್ ಲಾಂಚ್

Vinfast VF3 Electric Car: ವಿಯೆಟ್ನಾಮ್ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ Vinfast ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. Vinfast ಮಾರುಕಟ್ಟೆಯಲ್ಲಿ ಟೆಸ್ಲಾ ಮಾದರಿ ಲಾಂಚ್ ಆಗುವ ಮೊದಲೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ.

ಕೆಲವೇ ದಿನಗಳ ಹಿಂದೆ, Vinfast ಭಾರತದಲ್ಲಿ ಕ್ಲಾರಾ ಎಸ್ ಎಂಬ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವದಂತಿಗಳಿವೆ. ಆದರೆ ಈಗ ಆ ನಂತರ Vinfast ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿಯ ಭಾರತದಲ್ಲಿ Vinfast VF3 ಹೆಸರಿನ ಪೇಟೆಂಟ್ ಲಾಂಚ್ ಮಾಡುವುದರ ಕುರಿತು ಸುದ್ದಿಯಾಗಿದೆ. ಇದೀಗ ನಾವು ಈ ಲೇಖನದಲ್ಲಿ Vinfast ನ ನೂತನ ಮಾದರಿಯ ಬಗ್ಗೆ ಒಂದಿಷ್ಟು details ತಿಳಿಯೋಣ.

Vinfast VF3 Electric Car
Image Credit: Cartoq

ಮಾರುಕಟ್ಟೆಗೆ ಲಾಂಚ್ ಆಗಲಿದೆ 201km ಮೈಲೇಜ್ ನೀಡುವ EV
ಕಂಪನಿಯು ಇದೀಗ ಮಾರುಕಟ್ಟೆಯಲ್ಲಿ Vinfast VF3 ಹೆಸರಿನ ಸಣ್ಣ ಎಲೆಕ್ಟ್ರಿಕ್ ಮಾದರಿಯನ್ನು ಲಾಂಚ್ ಮಾಡಲಿದೆ. ಮಾರುಕಟ್ಟೆಯಲ್ಲಿ ಈ ಕಾರ್ ಲಾಂಚ್ ಆದರೆ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಎಲೆಕ್ಟ್ರಿಕ್ ಮಾದರಿಗಳಿಗೆ ಬಾರಿ ಪೈಪೋಟಿ ನೀಡಲಿದೆ.

ಈ ನೂತನ ಮಾದರಿ ಅತಿ ಹೆಚ್ಚು ಮೈಲೇಜ್ ನೀಡಲಿದೆ ಎನ್ನುವ ಬಗ್ಗೆ ವರದಿಯಾಗಿದೆ. ಇನ್ನು ನೀವು Vinfast VF3 EV ಯನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಸರಿಸುಮಾರು 201km ಮೈಲೇಜ್ ನೀಡಲಿದೆ ಎನ್ನಬಹುದು. ಇನ್ನು ಈ ಕಾರನ್ನು ಚಾರ್ಜ್ ಮಾಡಲು ಹೆಚ್ಚು ಸಮಯ ಬೇಕಾಗಿರುವುದಿಲ್ಲ. ಕೇವಲ 3 ರಿಂದ 4 ಗಂಟೆಗಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

Vinfast VF3 Electric Car Mileage
Image Credit: Original Source

2025 ರ ವೇಳೆ ವಿನ್ ಫಾಸ್ಟ್ ಕಂಪನಿಯು ಮೊದಲ ಎಲೆಕ್ಟ್ರಿಕ್ ಕಾರ್ ಲಾಂಚ್
ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗಂತೂ Electric ವಾಹನಗಳು ಪಾರುಪತ್ಯ ಸಾಧಿಸಿವೆ ಎನ್ನಬಹುದು. ಈ ಕಾರಣಕ್ಕೆ ವಿವಿಧ ಕಂಪನಿಗಳು ಹೊಸದಾಗಿ Electric ಮಾದರಿಯನ್ನು ಹೆಚ್ಚಾಗಿ ಪರಿಚಯಿಸುತ್ತುದೆ. ಸದ್ಯ Vinfast ಕಂಪನಿಯು ಇದೆ ದಾರಿಯನ್ನು ಹಿಡಿದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ VF3 EV ಯನ್ನು ಲಾಂಚ್ ಮಾಡುವ ಮೂಲಕ ಎಲೆಕ್ಟ್ರಿಕ್ ವಿಭಾಗದಲ್ಲಿ ಸಂಚಲನ ಮೂಡಿಸಲು ರೆಡಿಯಾಗಿದೆ ಎನ್ನಬಹುದು. ಇನ್ನು 2025 ರ ವೇಳೆ Vinfast ಕಂಪನಿಯು ತನ್ನ ಮೊದಲ Electric Car ಅನ್ನು ಹೊರಟಿರುವ ಯೋಜನೆಯನ್ನು ಹಾಕಿಕೊಂಡಿದೆ. 2025 ರಲ್ಲಿ ಲಾಂಚ್ ಆಗುವ ಟಾಪ್ ವೇರಿಯೆಂಟ್ ಗಳಲ್ಲಿ Vinfast VF3 Electric Car ಕೂಡ ಸೇರಿಕೊಳ್ಳಲಿದೆ.

Join Nadunudi News WhatsApp Group

Join Nadunudi News WhatsApp Group