Vinod Raj: ಮದುವೆಯ ಮೌನಮುರಿದ ವಿನೋದ್ ರಾಜ್, ನೆಮ್ಮದಿಯಿಂದ ಇರಲು ಬಿಡಿ.

ನನ್ನ ಅಮ್ಮನನ್ನು ನೆಮ್ಮದಿಯಿಂದ ಇರಲು ಬಿಡಿ ಎಂದು ಹೇಳಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ ವಿನೋದ್ ರಾಜ್

Vinod Raj About Marriage: ವಿನೋದ್ ರಾಜ್ (Vinod Raj) ಮದುವೆ ವಿಚಾರ ಸಾಕಷ್ಟು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದ್ದು, ವಿನೋದ್ ರಾಜ್ ಮನೆ ಕೆಲಸದ ಹುಡುಗಿಯನ್ನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಕೂಡ ಹರಡಿತ್ತು. ಈ ವಿಚಾರದ ಬಗ್ಗೆ ಪ್ರಕಾಶ್ ರಾಜ್ ಮೇಹು ಅವರು ಸಂದರ್ಶನ ಒಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಜನರು ವಿನೋದ್ ರಾಜ್ ಅವರ ಮದುವೆಯ ಬಗ್ಗೆ ಕೇವಲವಾಗಿ ಮಾಡುತ್ತಿರುವುದನ್ನು ತಿಳಿದು ಲೀಲಾವತಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಮದುವೆ ವಿಚಾರದ ಕುರಿತು ವಿನೋದ್ ರಾಜ್ ಅವರು ಮಾತನಾಡಿದ್ದಾರೆ.

Vinod Raj appeals to people to leave my mother in peace Vinod Raj appeals to people to leave my mother in peace
Image Credit: vistaranews

ಅಮ್ಮನನ್ನು ನೆಮ್ಮದಿಯಾಗಿರಲು ಬಿಡಿ ಎಂದು ಮಾನವಿ ಮಾಡಿಕೊಂಡ ನಟ ವಿನೋದ್ ರಾಜ್
ಪ್ರಕಾಶ್ ರಾಜ್ ಮೇಹು ಅವರು ಸಂದರ್ಶನ ಒಂದರಲ್ಲಿ ವಿನೋದ್ ರಾಜ್ ಮದುವೆಯ ಬಗ್ಗೆ ಬಹಿರಂಗಪಡಿಸಿದರು. ಇದರ ಕುರಿತಾದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಲೀಲಾವತಿ ಕುಟುಂಬದವರಿಗೆ ನೋವುಂಟಾಗಿದೆ.

ನಟ ವಿನೋದ್ ರಾಜ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಅಮ್ಮ ಈ ವಯಸ್ಸಿನಲ್ಲಿ ನೆಮ್ಮದಿಯಾಗಿ ಇದ್ದಾರೆ. ಅವರು ಕರ್ನಾಟಕದ ಆಸ್ತಿ. ದಯವಿಟ್ಟು ಅವರನ್ನು ನೆಮ್ಮದಿಯಾಗಿರಲು ಬಿಡಿ ಎಂದು ವಿನೋದ್ ರಾಜ್ ಮನವಿ ಮಾಡಿಕೊಂಡಿದ್ದಾರೆ.

Amma is very upset and hurt about marriage. Actor Vinod Raj has appealed to please let him rest in peace.
Image Credit: timesofindia.indiatimes

ಬೇಸರ ವ್ಯಕ್ತಪಡಿಸಿದ ನಟಿ ಲೀಲಾವತಿ
ಸದ್ಯ ವಯೋಸಹಜ ಅನಾರೋಗ್ಯದಿಂದ ಇರುವ ಲೀಲಾವತಿ ಅವರನ್ನು ಅವರ ಪುತ್ರ ವಿನೋದ್ ರಾಜ್ ನೋಡಿಕೊಳ್ಳುತ್ತಿದ್ದು, ಇದರ ಜೊತೆಗೆ ಕೃಷಿ ಕೆಲಸದಲ್ಲಿ ಸಹ ತೊಡಗಿಕೊಂಡು ನೆಲಮಂಗಲದ ಹತ್ತಿರ ನೆಲೆಸಿದ್ದಾರೆ. ಇನ್ನು ಲೀಲಾವತಿ ಅವರು ಸಹ ಮಗನ ಮದುವೆಯ ಕುರಿತು ಮಾತನಾಡಿದ್ದಾರೆ. ಪದೇ ಪದೇ ಈ ವಿಚಾರದ ಕುರಿತು ಮಾತನಾಡಬೇಡಿ ಎಂದು ಹೇಳಿದ್ದಾರೆ. ಜನರ ಕೇವಲವಾದ ಮಾತುಗಳನ್ನು ಕೇಳಿ ಬೇಸರವಾಗುತ್ತಿದೆ ಎಂದಿದ್ದಾರೆ.

Join Nadunudi News WhatsApp Group

Join Nadunudi News WhatsApp Group