Vinod Raj Angry: ಮದುವೆ ಬಗ್ಗೆ ಕೇಳಿದವರಿಗೆ ಚಳಿ ಬಿಡಿಸಿದ ವಿನೋದ್ ರಾಜ್, ಆಕ್ರೋಶ ಹೊರಹಾಕಿದ ನಟ.

ಮದುವೆಯ ಬಗ್ಗೆ ಹೇಳಿಕೊಂಡು ಆಕ್ರೋಶ ಹೊರಹಾಕಿದ್ದಾರೆ ನಟ ವಿನೋದ್ ರಾಜ್.

Vinod Raj Marriage Controversy: ಹಿರಿಯ ನಟಿ ಲೀಲಾವತಿ (Leelavathi) ಅವರ ಮಗ ವಿನೋದ್ ರಾಜ್ (Vinod Raj) ಮದುವೆಯ ವಿಚಾರ ಸಾಕಷ್ಟು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪ್ರಕಾಶ್ ರಾಜ್ ಮೇಹು ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ ವಿನೋದ್ ರಾಜ್ ಅವರ ಮದುವೆಯ ಬಗ್ಗೆ ಸಾಕಷ್ಟು ವಿಚಾರಗಳನ್ನು ಹೇಳಿದ್ದಾರೆ. ಇದಕ್ಕೆ ನಟ ವಿನೋದ್ ರಾಜ್ ಅವರು ಮತ್ತು ಹಿರಿಯ ನಟಿ ಸಹ ಪ್ರತಿಕ್ರಿಯೆ ನೀಡಿದ್ದಾರೆ.

Vinod Raj Marriage Controversy
Image Source: India Today

ಮದುವೆಯ ವಿಚಾರವಾಗಿ ಕಿಡಿಕಾರಿದ ವಿನೋದ್ ರಾಜ್
ಹಿರಿಯ ನಟಿ ಲೀಲಾವತಿ ಅವರು ಸುಮ್ಮನೆ ಅಂತರಂಗದ ವಿಚಾರ ಕೆದಕಬೇಡಿ ಎಂದಿದ್ದಾರೆ. ಇನ್ನು ನಟ ವಿನೋದ್ ರಾಜ್ ಅಮ್ಮ ಈ ವಯಸ್ಸಿನಲ್ಲಿ ನೆಮ್ಮದಿಯಾಗಿದ್ದಾರೆ. ಅವರಿಗೆ ಹೀಗೆ ಇರಲು ಬಿಡಿ ಎಂದು ಹೇಳಿದ್ದಾರೆ. ಅಲ್ಲದೆ ನಾನು ಮದುವೆಯಾಗಿರುವುದು ಸಹ ನಿಜ ಎಂದಿದ್ದಾರೆ. ಮಗನ ಮದುವೆಯ ವಿಚಾರ ಮುಚ್ಚಿಟ್ಟಿದ್ದಕ್ಕೆ ನಟಿ ಲೀಲಾವತಿ ಅವರು ಸ್ಪಷ್ಟನೆ ನೀಡಿದ್ದಾರೆ.

ವಿನೋದ್ ರಾಜ್ ಮದುವೆಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಎಲ್ಲರದ್ದೂ ನಡೆಯುತ್ತೆ ಇದರಿಂದ ಭಯೋತ್ಪಾದನೆ ಆಗಿದೆಯಾ, ನೋವಾಗಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಯಾವ ಕಲಾವಿದರಿಗೂ ತೊಂದರೆ ಕೊಡಬಾರದು ಎಂದು ಕಿಡಿಕಾರಿದ್ದಾರೆ.

Vinod Raj Marriage Controversy
Image Source: Filmibeat

ಹಿಂದೆ ಚಪ್ಪಲಿ ಏಟು ಹೊಡೆದಿದ್ದಾರೆ ಎಂದ ವಿನೋದ್ ರಾಜ್
ಹಿಂದೆ ಚಪ್ಪಲಿಯೇಟು ಹೊಡೆದು ಬಿಟ್ಟಿದ್ದಾರೆ. ಈಗ ಮದುವೆ ವಿಚಾರ ಶುರು ಮಾಡಿಕೊಂಡಿದ್ದಾರೆ. ಇದನ್ನು ಬಿಟ್ಟು ಜೀವನದಲ್ಲಿ ಬೇರೆ ಆವಿಷ್ಕಾರಗಳು ಬರುವುದು ಇಲ್ಲವಾ. ನೀವೆಲ್ಲ ಯಾರು ಅಲ್ಲ. ಕೆಲವು ತಪ್ಪಾದ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕೆ ನಮಗೆ ಇಷ್ಟವಿಲ್ಲ. ನನ್ನ ತಾಯಿಗೆ ನಾನು ಮಾತು ಕೊಟ್ಟಿದ್ದೇನೆ. ಅದರಂತೆಯೇ ನಡೆಯುತ್ತೇನೆ. ಈ ಮಣ್ಣಿನೊಳಗೆ ಹೋಗೋನು ಎಂದು ವಿನೋದ್ ರಾಜ್ ತಿರುಗೇಟು ನೀಡಿದ್ದಾರೆ.

Join Nadunudi News WhatsApp Group

Vinod Raj Marriage Controversy
Image Source: Youtube

Join Nadunudi News WhatsApp Group