Virat And Anushka: ಕೊಹ್ಲಿ ಅಭಿಮಾನಿಗಳಿಗೆ ಬೇಸರದ ಸುದ್ದಿ, ಭಾರತ ಬಿಟ್ಟು ಹೋಗಲಿದ್ದಾರೆ ಕೊಹ್ಲಿ ಮತ್ತು ಅನುಷ್ಕಾ.

ಭಾರತ ಬಿಟ್ಟು ಹೋಗಲಿದ್ದಾರೆ ಕೊಹ್ಲಿ ಮತ್ತು ಅನುಷ್ಕಾ, ಇನ್ನು ಸಿಕ್ಕಿಲ್ಲ ಸ್ಪಷ್ಟನೆ

Virat And Anushka Latest News: ಟೀಮ್ ಇಂಡಿಯಾದ ಮಾಜಿ ನಾಯಕ ಇದೀಗ IPL 2024 ರ ವಿಚಾರವಾಗಿ ಮತ್ತೆ ಸುದ್ದಿಯಾಗಿದ್ದಾರೆ. ಇನ್ನು ಇತ್ತೀಚೆಗಷ್ಟೇ Virat ಹಾಗೂ Anushka ತನ್ನ ಎರಡನೇ ಮಗುವಿಗೆ ಪೋಷಕರಾಗಿದ್ದರೆ. ಗಂಡು ಮಗುವಿಗೆ ಜನ್ಮ ನೀಡಿದ ಅನುಷ್ಕಾ ಶರ್ಮ ಮಗುವಿನ ಆರೈಕೆಯಲಿದ್ದಾರೆ. ಇನ್ನು ಅನುಷ್ಕಾ ಶರ್ಮ ಅವರು ತಮ್ಮ ಮಗ Akaay ಗೆ ಲಂಡನ್ ನಲ್ಲಿ ಜನ್ಮ ನೀಡಿದ್ದರು.

ಈ ವೇಳೆ ವಿರಾಟ್ ಅವರ ಫ್ಯಾಮಿಲಿ ಲಂಡನ್ ನಲ್ಲಿ ಇದ್ದರು. ಸದ್ಯ ವಿರಾಟ್ ಕೊಹ್ಲಿ IPL ಗಾಗಿ ಭಾರತಕ್ಕೆ ಮರಳಿದ್ದಾರೆ. ಆದರೆ ಅನುಷ್ಕಾ ಮತ್ತು ಅವರ ಮಕ್ಕಳು ಇನ್ನು ಲಂಡನ್ ನಲ್ಲಿಯೇ ಇದ್ದಾರೆ. ಇದರ ನಡುವೆ ವಿರಾಟ್ ಹಾಗೂ ಅನುಷ್ಕಾ ಭಾರತ ಬಿಟ್ಟು ಬೇರೆ ದೇಶದಲ್ಲಿ ನೆಲಸಲಿದ್ದಾರೆ ಎನ್ನುವ ಬಗ್ಗೆ ಮಾತುಗಳು ಕೇಳಿಬರುತ್ತದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ವಿರಾಟ್ ಅನುಷ್ಕಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Virat Kohli And Anushka Sharma
Image Credit: Times Of India

ಕೊಹ್ಲಿ ಅಭಿಮಾನಿಗಳಿಗೆ ಬೇಸರದ ಸುದ್ದಿ
ಇನ್ನು IPL ಆಡುವ ಸಲುವಾಗಿ ವಿರಾಟ್ ಕೊಹ್ಲಿ ಭಾರತಕ್ಕೆ ಬಂದಿದಾರೆ. IPL ನ ಬಳಿಕ ಮತ್ತೆ ಲಂಡನ್ ಗೆ ಮರಳಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ. ಇನ್ನು ವಿರಾಟ್ ಪತ್ನಿ ಅನುಷ್ಕಾ, ಮಗಳು ವಮಿಕ, ಮಗ ಅಕಾಯ್ ಕೂಡ ಲಂಡನ್ ನಲ್ಲಿಯೇ ಇದ್ದಾರೆ. ಹೀಗಾಗಿ ಆದಷ್ಟು ಬೇಗ ವಿರಾಟ್ ಲಂಡನ್ ಗೆ ಮರಳಲಿದ್ದಾರೆ. ಇನ್ನೊಂದು ಮೂಲದ ಪ್ರಕಾರ ಕೊಹ್ಲಿ ದಂಪತಿ ಕೆಲ ಕಾಲ ಮುಂಬೈ ಬಿಟ್ಟು ಲಂಡನ್ ನಲ್ಲಿ ನೆಲೆಸಲಿದ್ದಾರೆ ಎನ್ನಲಾಗುತ್ತಿದೆ.

ಭಾರತ ಬಿಟ್ಟು ಹೋಗಲಿದ್ದಾರೆ ಕೊಹ್ಲಿ ಮತ್ತು ಅನುಷ್ಕಾ
ವಿರಾಟ್ ಕೊಹ್ಲಿ ಜೊತೆ ಅನುಷ್ಕಾ ಮತ್ತು ಮಕ್ಕಳು ಇನ್ನೂ ಭಾರತಕ್ಕೆ ಬಂದಿಲ್ಲ. ಹಾಗಾಗಿಯೇ ಕೊಹ್ಲಿ ದಂಪತಿ ಲಂಡನ್ ಗೆ ಶಿಫ್ಟ್ ಆಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ. ಮಕ್ಕಳಾದ Vamika ಮತ್ತು Akaay ಗೆ ಪ್ರೈವಸಿ ನೀಡಲು ದಂಪತಿ ವಿದೇಶದಲ್ಲಿ ನೆಲೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ವಿರಾಟ್ ದಂಪತಿ ಲಂಡನ್‌ ನಲ್ಲಿ ಹೊಸ ಮನೆ ಖರೀದಿಸಲಿದ್ದಾರೆ ಎನ್ನುವ ಬಗ್ಗೆ ಕೂಡ ಸುದ್ದಿ ಕೇಳಿ ಬಂದಿದೆ. ಇನ್ನು ವಿರಾಟ್ ಹಾಗೂ ಅನುಷ್ಕಾ ವಿದೇಶದಲ್ಲಿ ನೆಲಸುವ ಬಗ್ಗೆ IPL ಮುಗಿದ ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ.

Virat And Anushka Latest News
Image Credit: Thodkyaat

Join Nadunudi News WhatsApp Group

Join Nadunudi News WhatsApp Group