Virat Kohli: ಯಾರಿಗೂ ಕಾಣಿಸದಂತೆ ಹೊರಟುಹೋಗಲು ನಿರ್ಧಾರ ಮಾಡಿದ ಕೊಹ್ಲಿ, ಬೇಸರದಲ್ಲಿ ಅಭಿಮಾನಿಗಳು.

ನಿವೃತ್ತಿಯ ಬಗ್ಗೆ ಮನದಾಳದ ಮಾತನ್ನಾಡಿದ ವಿರಾಟ್

Virat Kohli About His Retirement: ಸದ್ಯ IPL ಹಾಗೂ T20 ಬಗ್ಗೆ ಎಷ್ಟು ಚರ್ಚೆ ನಡೆಯುತ್ತಿದೆಯೋ ಅದೇ ರೀತಿ ಸ್ಟಾರ್ ಆಟಗಾರ Virat Kohli ಅವರ ನಿವೃತ್ತಿಯ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ. ಸದ್ಯ ವಿರಾಟ್ ನಿವೃತ್ತಿಯ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಸದ್ಯ ವಿರಾಟ್ IPL 2024 ರಲ್ಲಿ ಬ್ಯುಸಿ ಆಗಿದ್ದರೆ. 2024 ರ IPL ನಲ್ಲಿ ಪ್ಲೇ ಆಫ್ ಗೆ ಹೆಜ್ಜೆಯಿಡುವ ಸಿದ್ಧತೆಯಲ್ಲಿದ್ದಾರೆ.

ಇನ್ನು IPL ಮುಗಿದ ಬಳಿಕ ಜೂನ್ ನಿಂದ T20 ಆರಂಭವಾಗಲಿದೆ. ಈ T20 ರಲ್ಲಿ ವಿರಾಟ್ ಆಡುವುದು ಪಕ್ಕ. ಆದರೆ T20 2024 ರ ನಂತರ ವಿರಾಟ್ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಇದೀಗ ವಿರಾಟ್ ಕೊಹ್ಲಿ ಅವರು ಸ್ವತಃ ತಮ್ಮ ನಿವೃತ್ತಿಯ ಬಗ್ಗೆ ಮನದಾಳದ ಮಾತುಗಳನ್ನು ಆಡಿದ್ದಾರೆ.

Virat Kohli About His Retirement
Image Credit: India Today

ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ ವಿರಾಟ್
ಇನ್ನು ಕ್ರಿಕೆಟ್ ಆಟಗಾರರಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಎನ್ನಬಹುದು. ತಮ್ಮ ನೆಚ್ಚಿನ ನಾಯ್ಕ ನಿವೃತ್ತಿ ಹೊಂದಲಿದ್ದಾರೆ ಎನ್ನುವ ಬಗ್ಗೆ ಸುದ್ದಿ ಕೇಳಿ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ. ವಿರಾಟ್ ಕೊಹ್ಲಿ ಯಾವಾಗ ನಿವೃತ್ತಿ ಹೊಂದಲಿದ್ದಾರೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದರೂ, ವಿರಾಟ್ ನಿವೃತ್ತಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಈ ಹಿಂದೆ ಸಚಿನ್ ತೆಂಡೂಲ್ಕರ್ ಅವ್ರ ನಿವೃತ್ತಿಯ ಸಮಯದಲ್ಲಿ ಕೂಡ ಅಭಿಮಾನಿಗಳು ಸಾಕಷ್ಟು ಬೇಸರ ಹೊರಹಾಕಿದ್ದರು. ಇದೀಗ ವಿರಾಟ್ ಕೊಹ್ಲಿ ಸಮಯ ಬಂದಿದೆ. ಮುಂದಿನ ಪಂದ್ಯದಲ್ಲಿ ವಿರಾಟ್ ಇರುವುದಿಲ್ಲ ಎನ್ನುವ ನೋವನ್ನು ಅಭಿಮಾನಿಗಳು ಹೊರಹಾಕುತ್ತಿದ್ದಾರೆ.

Virat Kohli Retirement Update
Image Credit: Original Source

ಯಾರಿಗೂ ಕಾಣಿಸದಂತೆ ಹೊರಟುಹೋಗಲು ನಿರ್ಧಾರ ಮಾಡಿದ ಕೊಹ್ಲಿ
ಇದೀಗ ಕಾರ್ಯಕ್ರಮವೊಂದರಲ್ಲಿ ಕೊಹ್ಲಿ ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಕ್ರೀಡಾಳುಗಳೆಂದ ಮೇಲೆ ನಮ್ಮ ವೃತ್ತಿ ಜೀವನವು ಎಂದಾದರೂ ಕೊನೆಗೊಳ್ಳಬೇಕು. ನಾನು ಕೂಡ ಆಡುತ್ತಲೇ ಇರಲು ಸಾಧ್ಯವಿಲ್ಲ. ನನಗೆ ಗೊತ್ತು, ನನಗೆ ಯಾವುದೇ ಪಶ್ಚತ್ತಾಪವಿಲ್ಲ. ನಾನು ಆಡುತ್ತಿರುವಷ್ಟು ಸಮಯವೂ ನನ್ನಿಂದ ಸಾದ್ಯವಾದ ಎಲ್ಲ ಪ್ರಯತ್ನ ಮಾಡುತ್ತೇನೆ. ಆದರೆ ಒಮ್ಮೆ ನಿವೃತ್ತಿ ಹೇಳಿದರೆ ಅಲ್ಲಿಗೆ ಮುಗಿಯಿತು. ಬಹುಶ ನಾನು ಕೆಲವು ಸಮಯ ಯಾರ ಕಣ್ಣಿಗೂ ಕಾಣಿಸಲ್ಲ ಎಂದಿದ್ದಾರೆ.

Join Nadunudi News WhatsApp Group

ಹಾಗಂತ ನಾನು ತರಾತುರಿಯಲ್ಲಿ ನಿವೃತ್ತಿ ಹೇಳುವುದಿಲ್ಲ. ನಿವೃತ್ತಿ ಹೇಳಿದ ಮೇಲೂ ಛೆ ನಾನು ಇದನ್ನು ಮಾಡಬಹುದಿತ್ತು ಎಂದು ಪಶ್ಚತ್ತಾಪ ಪಡುವಂತಿರಬಾರದು. ಆಡುವಷ್ಟು ದಿನ ನಾನು ಸಕಲ ಪ್ರಯತ್ನ ನಡೆಸುತ್ತೇನೆ. ಆತ ಸಾಕು ಎನಿಸಿದಾಗ ಇಷ್ಟು ಸಮಯ ಆಡಿದ್ದಷ್ಟೇ ನನ್ನ ನೆನಪಿನಲ್ಲಿರಲಿದೆ ಎಂದು ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ತಮ್ಮ ನಿವೃತ್ತಿಯ ಬಗ್ಗೆ ಹೇಳಿರುವುದನ್ನು ಕೇಳಿ ಅಭಿಮಾನಿಗಳು ಭಾವುಕರಾಗಿದ್ದಾರೆ.

Virat kohli Latest News
Image Credit: Original Source

Join Nadunudi News WhatsApp Group