Virat Kohli: ವಿರಾಟ್ ಕೊಹ್ಲಿ ಫೀಲ್ಡಿಂಗ್ ಕಂಡು ಶಾಕ್ ಆದ ಅಫ್ಘಾನ್ ಆಟಗಾರರು, ವಿಡಿಯೋ ಸಕತ್ ವೈರಲ್

ಟೀಮ್ ಇಂಡಿಯಾದ ಸೂಪರ್ ಪ್ಲೇಯರ್ ವಿರಾಟ್ ಕೊಹ್ಲಿಯವರ ಫೀಲ್ಡಿಂಗ್ ಗೆ ಮನ ಸೋತ ಅಭಿಮಾನಿಗಳು

Virat Kohli Best Fielding: ಮೂರನೇ ಟಿ20 ಪಂದ್ಯ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆದಿದ್ದು ಬಹಳ ರೋಚಕತೆಯಿಂದ ಕೂಡಿದ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಭಾರತದ ಉತ್ತಮ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ತಮ್ಮ ಉತ್ತಮ ಫೀಲ್ಡಿಂಗ್ ಪ್ರದರ್ಶನ ಮಾಡಿ ಅಭಿಮಾನಿಗಳ ಸಂತೋಷಕ್ಕೆ ಕಾರಣರಾದರು.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ರಿಂಕು ಭಾರತಕ್ಕೆ ಬಲಿಷ್ಠ ಬ್ಯಾಟಿಂಗ್ ಮಾಡಿದ್ದರು. ವಿರಾಟ್ ಕೊಹ್ಲಿಯಂತಹ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್‌ನಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗದಿದ್ದರೂ, ಫೀಲ್ಡಿಂಗ್‌ನಲ್ಲಿ ಅಬ್ಬರಿಸಿ ಟೀಂ ಇಂಡಿಯಾವನ್ನು ಸೋಲಿನಿಂದ ಪಾರು ಮಾಡಿದರು.

Virat Kohli Best Fielding
Image Credit: TV9kannada

ಉತ್ತಮವಾಗಿ ಫೀಲ್ಡಿಂಗ್ ಮಾಡಿದ ವಿರಾಟ್ ಕೊಹ್ಲಿ

ಮೊದಲು ನಿಗದಿತ ಓವರ್‌ನಲ್ಲಿ ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್‌ ಕಡೆ ಮುಖ ಮಾಡಲಾಯಿತು. ರೋಚಕ ಅಂದರೆ ಮೊದಲ ಸೂಪರ್ ಓವರ್ ಸಹ ಟೈ ಆಗಿತ್ತು. ಇದಾದ ಬಳಿಕ ಎರಡನೇ ಸೂಪರ್ ಓವರ್ ನಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 212 ರನ್ ಗಳಿಸಿತ್ತು.

ಅಫ್ಘಾನಿಸ್ತಾನದ ಇನ್ನಿಂಗ್ಸ್‌ನ 17 ನೇ ಓವರ್‌ನ ಐದನೇ ಎಸೆತದಲ್ಲಿ, ವಿರಾಟ್ ಕೊಹ್ಲಿ ಬೌಂಡರಿ ಬಳಿ ಗಾಳಿಯಲ್ಲಿ ಜಿಗಿದ ಸಿಕ್ಸರ್‌ ಹೋಗುತ್ತಿದ್ದ ಚೆಂಡನ್ನು ತಡೆದರು. ಇದನ್ನು ನೋಡುತ್ತಿದ್ದವರಿಗೆ ಇದು ಸಿಕ್ಸರ್‌ ಎಂಬುದು ತಿಳಿದಿತ್ತು. ಆದರೆ ವಿರಾಟ್ ಸೂಪರ್ ಮ್ಯಾನ್‌ ರೀತಿ ಫೀಲ್ಡಿಂಗ್ ಮಾಡಿ ಅಫ್ಘಾನಿಸ್ತಾನ ಕೇವಲ 1 ರನ್ ನೀಡಿದರು. ಈ ಮೂಲಕ ವಿರಾಟ್ ಟೀಂ ಇಂಡಿಯಾದ ಪ್ರಮುಖ 5 ರನ್‌ಗಳನ್ನು ಉಳಿಸಿದರು.

Join Nadunudi News WhatsApp Group

ಪಂದ್ಯದ ಕ್ಷಣಗಳು ಹೀಗಿದೆ

ವಾಶಿಂಗ್ಟನ್ ಸುಂದರ್ ಪಂದ್ಯದ 17ನೇ ಓವರ್ ಬೌಲ್ ಮಾಡುತ್ತಿದ್ದರು. ಈ ವೇಳೆ ಅಫ್ಘಾನಿಸ್ತಾನದ ಕರೀಂ ಜನತ್‌ ಲಾಂಗ್‌ ಆನ್‌ ಮೇಲೆ ಸಿಕ್ಸರ್ ಬಾರಿಸಲು ಮುಂದಾದರು. ಇದೇ ಏರಿಯಾದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಫೀಲ್ಡರ್ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡುತ್ತಾ ಇದ್ದರು. ಚೆಂಡು ತಮ್ಮ ಬಳಿ ಬರುತ್ತಿರುವುದನ್ನು ಮನಗೊಂಡು ಗಾಳಿಯಲ್ಲಿ ನೆಗೆದು ತಮ್ಮ ಬಲಗೈಯನ್ನು ಚಾಚಿದರು. ಸಿಕ್ಸರ್‌ ಹೋಗುತ್ತಿದ್ದ ಚೆಂಡನ್ನು ತಡೆದು ತಂಡಕ್ಕಾಗಿ ಐದು ರನ್‌ ಸೇವ್ ಮಾಡಿದರು.

ಅಫ್ಘಾನಿಸ್ತಾನ ವಿರುದ್ಧದ ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ರಿಂಕು ಭರ್ಜರಿ ಫೀಲ್ಡಿಂಗ್ ಮೂಲಕ ಸಂಚಲನ ಮೂಡಿಸಿದ್ದರು. ರೋಹಿತ್ ಶರ್ಮಾ ಅಜೇಯ 121 ರನ್‌ ಹಾಗೂ ರಿಂಕು 39 ಎಸೆತಗಳಲ್ಲಿ 69 ರನ್‌ಗಳ ಇನಿಂಗ್ಸ್‌ ಬಲದಿಂದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 212 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ಸಹ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 212 ರನ್ ಗಳಿಸಿತು. ಪಂದ್ಯ ಟೈ ಆಗಿದ್ದರಿಂದ ಫಲಿತಾಂಶ ಅರಿಯಲು ಸೂಪರ್ ಓವರ್‌ನತ್ತ ಮುಖ ಮಾಡಲಾಯಿತು. ಎರಡನೇ ಸೂಪರ್ ಓವರ್‌ನಲ್ಲಿ ಟೀಮ್ ಇಂಡಿಯಾ ಗೆಲುವನ್ನು ಸಾಧಿಸಿತು.

Join Nadunudi News WhatsApp Group