Virat Kohli: ರಾಮನ ಹಾಡು ಕೇಳುತ್ತಿದ್ದಂತೆ ಮೈದಾನದಲ್ಲಿ ಸಕತ್ ಸ್ಟೆಪ್ ಹಾಕಿದ ಕೊಹ್ಲಿ, ವಿಡಿಯೋ ವೈರಲ್

ಶ್ರೀರಾಮನ ಹಾಡಿಗೆ ಕುಣಿತ ಹಾಕಿದ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ, ಇವರ ಭಕ್ತಿಗೆ ಅಭಿಮಾನಿಗಳು ಫಿದಾ

Virat Kohli Pose After Ram Siya Ram Song: ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳ ನಡುವೆ 2ನೇ ಟೆಸ್ಟ್ ನಡೆಯುತ್ತಿದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯವರ (Virat Kohli) ಒಂದು ದ್ರಶ್ಯ ಅಭಿಮಾನಿಗಳಲ್ಲಿ ಬಹಳ ಸಂತೋಷ ತಂದಿದೆ. ಹೌದು ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ದಿನದ ಆಟ ಕೇಪ್​ಟೌನ್​ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು,

ಈ ಪಂದ್ಯದಲ್ಲಿ ಟಾಸ್ ಗೆದ್ದ ಡೀನ್ ಎಲ್ಗರ್ ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡಕ್ಕೆ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದರು. ಭಾರತ ಎರಡನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯವನ್ನ ಸಾಧಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ.

Virat Kohli Latest News
Image Credit: Ainlivenews

ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳ ನಡುವೆ 2ನೇ ಟೆಸ್ಟ್ ಪಂದ್ಯ

ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ 4ನೇ ಓವರ್​ನಲ್ಲಿ ಐಡೆನ್ ಮಾರ್ಕ್ರಾಮ್ ವಿಕೆಟ್ ಕಬಳಿಸಿದ ಸಿರಾಜ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಅಷ್ಟೇ ಅಲ್ಲದೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುವ ಮೂಲಕ ಸಿರಾಜ್ 5 ವಿಕೆಟ್​ಗಳ ಸಾಧನೆ ಮಾಡಿದರು. ಪರಿಣಾಮ ತಂಡದ ಮೊತ್ತ 34 ಆಗುವಷ್ಟರಲ್ಲಿ ಸೌತ್ ಆಫ್ರಿಕಾ ತಂಡ 6 ವಿಕೆಟ್ ಕಳೆದುಕೊಂಡಿತು.

Virat Kohli Latest News Update
Image Credit: Outlookindia

ರಾಮ್ ಸಿಯಾ ರಾಮ್ ಹಾಡಿಗೆ ಕೈ ಮುಗಿದು ನಿಂತ ವಿರಾಟ್ ಕೊಹ್ಲಿ

Join Nadunudi News WhatsApp Group

ಪಂದ್ಯದಲ್ಲಿ ಕೇಶವ್ ಮಹರಾಜ್ ಬ್ಯಾಟಿಂಗ್​ಗೆ ಆಗಮಿಸಿದ್ದರು. ಭಾರತೀಯ ಮೂಲದ ಸೌತ್ ಆಫ್ರಿಕಾ ಕ್ರಿಕೆಟಿಗ ಮೈದಾನಕ್ಕೆ ಬರುತ್ತಿದ್ದಂತೆ ಡಿಜೆ, ರಾಮ್ ಸಿಯಾ ರಾಮ್ ಹಾಡನ್ನು ಹಾಕಿದರು. ಈ ಹಾಡು ಕೇಳುತ್ತಿದ್ದಂತೆ ಸ್ಲಿಪ್​ನಲ್ಲಿ ಫೀಲ್ಡಿಂಗ್ ​ನಲ್ಲಿದ್ದ ವಿರಾಟ್ ಕೊಹ್ಲಿ ರಾಮಬಾಣದ ಸನ್ನೆ ಮಾಡಿದರು. ಅಷ್ಟೇ ಅಲ್ಲದೆ ಕೈ ಮುಗಿಯುವ ಮೂಲಕ ದೈವಭಕ್ತಿಯನ್ನು ಸೂಚಿಸಿದರು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಜಾಗತಿಕ ವೇದಿಕೆಯಲ್ಲಿ ಶ್ರೀರಾಮನ ಹಾಡಿಗೆ ಗೌರವ ಸೂಚಿಸಿರುವ ವಿರಾಟ್ ಕೊಹ್ಲಿಯ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group