Virat Kohli Fear: ಈ ಒಂದು ಕಾರಣಕ್ಕೆ ಗಡಗಡ ನಡುಗಿದ ವಿರಾಟ್ ಕೊಹ್ಲಿ, ಭಯದ ಬಗ್ಗೆ ಹೇಳಿಕೊಂಡ ವಿರಾಟ್

ಈ ಕಾರಣಕ್ಕೆ ಹೆದರಿದ ವಿರಾಟ್ ಕೊಹ್ಲಿ, ಅಷ್ಟಕ್ಕೂ ವಿರಾಟ್ ಕೊಹ್ಲಿ ಹೆದರಲು ಕಾರಣ ಏನು ನೋಡಿ

Virat Kohli Fear: ಟೀಮ್ ಇಂಡಿಯಾದ ಮಾಜಿ ನಾಯಕ Virat Kohli ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಕ್ರಿಕೆಟ್ ಕ್ಷೇತ್ರದಲ್ಲಿ ವಿರಾಟ್ ಅಳಿಸಲಾಗದಷ್ಟು ಹೆಸರು ಮಾಡಿದ್ದಾರೆ. ಪ್ರತಿ ಪಂದ್ಯದ್ಲಲೂ ಕೂಡ ವಿರಾಟ್ ತಮ್ಮ ಅತ್ಯದ್ಭುತ ಆಟದ ಮೂಲಕ ಹೊಸ ಹೊಸ ದಾಖಲೆ ಬರೆಯುತ್ತಾರೆ. RCB ಈ ವರ್ಷದ IPL ನಲ್ಲಿ ಕೆಟ್ಟ ಆರಂಭವನ್ನು ಪಡೆದಿದೆ. ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದೆ.

ಸದ್ಯ ನಡೆಯುತ್ತಿರುವ ಐಪಿಎಲ್ 17ನೇ ಸೀಸನ್ ನಲ್ಲಿ ಕೊಹ್ಲಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಆದರೆ ನಿನ್ನೆ ಮುಂಬೈ ವಿರುದ್ಧ ಕೇವಲ 3 ರನ್ ಗಳಿಸಿ ಔಟಾಗಿದ್ದಾರೆ. ಇನ್ನು ನಿನ್ನೆ ನೆಡೆದ MI ವಿರುದ್ಧ RCB ತಂಡ ಸೋಲನ್ನು ಅನುಭವಿಸಿದೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ (Virat Kohli) ತಮ್ಮ ಬಗ್ಗೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

Virat Kohli Fear
Image Credit: Cricket

ಈ ಒಂದು ಕಾರಣಕ್ಕೆ ಗಡಗಡ ನಡುಗಿದ ವಿರಾಟ್ ಕೊಹ್ಲಿ
ನಿನ್ನೆ ನೆಡೆದ ಪಂದ್ಯಕ್ಕೂ ಮುನ್ನ RCB ಪಾಡ್ ಕಾಸ್ಟ್ ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ “ನನಗೆ ವಿಮಾನದಲ್ಲಿ ಹೋಗುವಾಗ ತುಂಬಾ ಭಯವಾಗುತ್ತದೆ. ವಿಮಾನ ಕೊಂಚ ಅಲುಗಾಡಿದರು ಸೀಟ್ ನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತೇನೆ. ಇದನ್ನು ನೋಡಿದ್ರೆ ನನಗೆ ನಾನು ತುಂಬಾ ಮೂರ್ಖನಾಗಿ ಕಾಣುತ್ತೇನೆ. ಆಗ ನನಗೆ ಪ್ರಾಣ ಭಯ ಕಾಡುತ್ತದೆ” ಎಂದು ಹೇಳಿಕೊಂಡಿದ್ದಾರೆ.

Virat Kohli speaks about his biggest fear
Image Credit: Sportstiger

Join Nadunudi News WhatsApp Group

Join Nadunudi News WhatsApp Group