Virat Kohli Jersey: ವಿರಾಟ್ ಕೊಹ್ಲಿ 18 ನಂಬರ್ ಜೆರ್ಸಿಯನ್ನು ಯಾಕೆ ತಗೆದುಕೊಂಡರು…? 18 ನಂಬರ್ ಹಿಂದಿದೆ ರೋಚಕ ಕತೆ

ವಿರಾಟ್ ಕೊಹ್ಲಿ ಯಾಕೆ 18 ನಂಬರ್ ಜೆರ್ಸಿ ಆಯ್ಕೆ ಮಾಡಿಕೊಂಡರು, 18 ನಂಬರ್ ಹಿಂದಿನ ಸತ್ಯ ಏನು...?

Virat Kohli Jersey Number Secret: ಭಾರತ ಕ್ರಿಕೆಟ್ ತಂಡದ ಕಿಂಗ್ ಎಂದು ಪ್ರಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್ ಲೋಕದಲ್ಲಿ ಮಾಡದ ಸಾಧನೆಗಳಿಲ್ಲ. ಕೋಟ್ಯಂತರ ಅಭಿಮಾನಿಗಳನ್ನು ಒಳಗೊಂಡಿರುವ ವಿರಾಟ್ ಕೊಹ್ಲಿ ಪೀಲ್ಡ್ ಗೆ ಇಳಿದರೆ ಸಾಕು ರನ್ ಗಳ ಸುರಿಮಳೆಯೇ ಹರಿಯುತ್ತದೆ.

ಇಂತಹ ಒಬ್ಬ ಉತ್ತಮ ಆಟಗಾರನನ್ನು ನಮ್ಮ ಭಾರತ ತಂಡ ಪಡೆದಿರುವುದು ದೇಶಕ್ಕೆ ಹೆಮ್ಮೆ ಎನ್ನಬಹುದು. ವಿರಾಟ್ ಕೊಹ್ಲಿ ಒಬ್ಬ ಬಹುಬೇಡಿಕೆಯ ಆಟಗಾರ ಆದರೆ ಅವರ ಕೆಲವು ಕಹಿ ನೆನಪುಗಳು ಅವರ ಕ್ರಿಕೆಟ್ ಜೀವನಕ್ಕೆ ಬಹಳ ಹತ್ತಿರವಾಗಿದೆ. ವಿರಾಟ್ ಕೊಹ್ಲಿ ಅವರ ಜರ್ಸಿ ನಂಬರ್ ಗು ಅವರ ಕಹಿ ನೆನಪಿಗೂ ಸಂಬಂಧವಿದೆ.

Virat Kohli Jersey Number Secret
Image Credit: Ehatv

ವಿರಾಟ್ ಕೊಹ್ಲಿ ಅವರ ಜರ್ಸಿ ನಂಬರ್ 18
ವಿರಾಟ್ ಕೊಹ್ಲಿ ಅವರ ಜರ್ಸಿ ನಂಬರ್ 18 ಅವರ ಲಕ್ಕಿ ನಂಬರ್ ಇರಬಹುದು ಎಂದು ಕೆಲವರು ಅಂದುಕೊಂಡಿರುತ್ತಾರೆ. ಆದ್ರೆ 18 ಅವರ ಜೀವನದ ಬಹಳ ಪ್ರಮುಖ ನಂಬರ್ ಆಗಿದೆ. ಅದೆಷ್ಟೋ ಜೆರ್ಸಿ ನಂಬರ್‌ಗಳು ಬ್ರ್ಯಾಂಡ್‌ ಆಗಿವೆ ಅದೇ ಸಾಲಿನಲ್ಲಿ ವಿರಾಟ್ ಅವರ ಜೆರ್ಸಿ ನಂಬರ್ ಕೂಡ ಸೇರಿದೆ. ಜೆರ್ಸಿ ನಂಬರ್‌ 18 ಅಂದ್ರೆ ವಿರಾಟ್‌ ಫ್ಯಾನ್ಸ್‌ಗೆ ಅದೇನೋ ಒಂತರ ಕ್ರೇಜ್, ಕೇವಲ ಜೆರ್ಸಿ ನಂಬರ್‌ ನೋಡಿ ಇದು ವಿರಾಟ್ ಎಂದು ಫ್ಯಾನ್ಸ್‌ ಗುರುತಿಸುತ್ತಾರೆ.

ವಿರಾಟ್ ಜೀವನದ ಕಹಿ ಘಟನೆ

18 ವರ್ಷದ ವಿರಾಟ್ ಕೊಹ್ಲಿ ಅವರು 2006 ರಲ್ಲಿ ದೆಹಲಿ ತಂಡದ ಪರ ರಣಜಿ ಆಡಲು ಆಯ್ಕೆಯಾಗಿದ್ದರು, ಡಿಸೆಂಬರ್‌ 17 ರಂದು ಕರ್ನಾಟಕ ತಂಡ ಮತ್ತು ದೆಹಲಿ ತಂಡಗಳ ನುಡುವೆ 6 ದಿನಗಳ ಟೆಸ್ಟ್‌ ಪಂದ್ಯವನ್ನು ಏರ್ಪಡಿಸಲಾಗಿತ್ತು. ಆದರೆ ಡಿಸೆಂಬರ್ 18ರಂದು ವಿರಾಟ್ ಕೊಹ್ಲಿ ತಂದೆ ಪ್ರೇಮ್ ಕೊಹ್ಲಿ ಹೃದಯಘಾತದಿಂದ ನಿಧನರಾದರು. ವಿರಾಟ್‌ ತನ್ನ ತಂದೆಯ ಸಾವಿನ ಸುದ್ದಿ ತಿಳಿದಿದ್ದರು, ತಮ್ಮ ತಂಡದ ಪರವಾಗಿ ಆಡಲು ಮುಂದಾಗಿದ್ದರು.

Join Nadunudi News WhatsApp Group

ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ವಿರಾಟ್‌ 238 ಬಾಲ್‌ಗಳನ್ನು ಎದುರಿಸಿ 90 ರನ್‌ಗಳಿಸಿ ಪಂದ್ಯವನ್ನು ಡ್ರಾ ಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಂದ್ಯ ಮುಗಿದ ನಂತರ ಮನೆಗೆ ಮರಳಿ ತಮ್ಮ ತಂದೆಯ ಅಂತ್ಯಕ್ರಿಯೆ ಕಾರ್ಯವನ್ನು ಪಾಲ್ಗೊಂಡರು. ಮರುದಿನ ಮತ್ತೆ ಪಂದ್ಯವನ್ನು ಮುನ್ನಡೆಸಲು ಮುಂದಾದರು. ಆ ಒಂದು ನಿರ್ಧಾರ ವಿರಾಟ್‌ ಅವರನ್ನು ಇಂದು ವಿಶ್ವದ ಶ್ರೇಷ್ಠ ಆಟಗಾರನನ್ನಾಗಿ ಮಾಡಿದೆ.

 Virat Kohli Latest News Update
Image Credit: 7criccricket

ತಂದೆಯ ಕನಸನ್ನು ನನಸು ಮಾಡಿದ ಕೊಹ್ಲಿ

ವಿರಾಟ್‌ ಭಾರತ ತಂಡದಲ್ಲಿ ಆಯ್ಕೆಯಾಗ ಬೇಕು ಅನ್ನುವುದು ಅವರ ತಂದೆ ಪ್ರೇಮ್‌ ಕೊಹ್ಲಿ ಯವರ ದೊಡ್ಡ ಕನಸಾಗಿತ್ತು. ಅದರಂತೆಯೇ ವಿರಾಟ್‌ ವಿಶ್ವ ಕ್ರಿಕೇಟ್‌ನಲ್ಲಿ ತಮ್ಮ ಹೆಸರನ್ನು ಶಾಶ್ವತವಾಗಿ ಬೇರುಬಿಟ್ಟಿದ್ಧಾರೆ. ಅಷ್ಟೇ ಅಲ್ಲದೇ ಶ್ರೇಷ್ಠ ಆಟಗಾರರಾಗಿ ದಿಗ್ಗಜರ ಸಾಲಿನಲ್ಲಿ ಉಳಿದಿದ್ದಾರೆ. ವಿರಾಟ್‌ ತಮ್ಮ ತಂದೆಯ ನೆನಪಿಗಾಗಿ 18 ಸಂಖ್ಯೆಯ ಜೆರ್ಸಿಯನ್ನು ತೊಡಲು ಆರಂಭಿಸಿದ್ದರು.

ಆದರೆ ಈ ಬಗ್ಗೆ ವಿರಾಟ್‌ ಎಲ್ಲಿಯೂ ಬಾಯಿ ಬಿಟ್ಟಿಲ್ಲ.ಅಷ್ಟೇ ಅಲ್ಲದೇ ವಿರಾಟ್‌ ಟೀಂ ಇಂಡಿಯಾದ ಪರ ಮೊದಲ ಪಂದ್ಯನ್ನು 2008 ರ ಆಗಸ್ಟ್‌ 18 ರಂದು ಆಡಿರುತ್ತಾರೆ. ವಿರಾಟ್‌ ತಂದೆ ಮರಣ ಹೊಂದಿ ಇಂದಿಗೆ ಸುಮಾರು 17 ವರ್ಷಗಳು ಕಳೆದಿವೆ. ಜೆರ್ಸಿ ನಂಬರ್‌ 18 ಈಗ ವಿಶ್ವ ಕ್ರಿಕೇಟ್‌ನಲ್ಲಿ ಒಂದು ಬ್ರ್ಯಾಂಡ್‌ ಆಗಿ ಮಾರ್ಪಟ್ಟಿದೆ.

Join Nadunudi News WhatsApp Group