Kohli New Record: ಜಗತ್ತಿನ ಕ್ರಿಕೆಟ್ ಇತಿಹಾಸದಲ್ಲಿ ಯಾರು ಬರೆಯದ ದಾಖಲೆ ಬರೆದ ವಿರಾಟ್ ಕೊಹ್ಲಿ, ಈತನೊಬ್ಬನಿಂದ ಮಾತ್ರ ಸಾಧ್ಯ

ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ವಯಕ್ತಿಕ ದಾಖಲೆ ನಿರ್ಮಾಣ ಮಾಡಿದ ವಿರಾಟ್

Virat Kohli New Record 2023: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಉತ್ತಮ ಬ್ಯಾಟ್ಸಮನ್ ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಮಾಡುವುದರಲ್ಲಿ ಎತ್ತಿದ ಕೈ. ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಜರ್ನಿಯಲ್ಲಿ ಈಗಾಗಲೇ ಹಲವು ಸಾಧನೆ ಮಾಡಿದ್ದೂ, ಈಗ ಇನ್ನೊಂದು ದಾಖಲೆಗೆ ಪಾತ್ರರಾಗಿದ್ದಾರೆ.

ವಿರಾಟ್ ಕೊಹ್ಲಿ ಅವರನ್ನು ರನ್​ ಮೆಷಿನ್​ ಎಂದೇ ಕರೆಯಲಾಗುತ್ತಿದೆ. ವಿರಾಟ್ ಕೊಹ್ಲಿ ಅವರಿಗೆ 2023 ಸಾಧನೆಯ ವರ್ಷ ಆಗಿದೆ ಎನ್ನಬಹುದು ಈಗಾಗಲೇ ಏಕದಿನ ವಿಶ್ವಕಪ್​ ಸೇರಿದಂತೆ ಹಲವು ಪಂದ್ಯಗಳಲ್ಲಿ ದಾಖಲೆ ಬರೆದಿರುವ ಕಿಂಗ್​ ಕೊಹ್ಲಿ ಈಗ ಮತ್ತೊಂದು ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.

Virat Kohli New Record 2023
Image Credit: Varthabharati

ಕ್ರಿಕೆಟ್​ ಇತಿಹಾಸದಲ್ಲೇ ಹೊಸ ದಾಖಲೆ ಸ್ರಷ್ಟಿ ಮಾಡಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಉತ್ತಮ ಆಟಗಾರನಾಗಿದ್ದು, ನಾಯಕನಾಗಿದ್ದ ಸಮಯದಲ್ಲಿ ಎಲ್ಲಾ ಟೂರ್ನಿಯಲ್ಲೂ ತಂಡವನ್ನು ಮುನ್ನೆಡಿಸಿದ್ದಾರೆ. ಹಾಗೆಯೆ ಈಗ ಸೆಂಚುರಿಯನ್​ ನ ಸೂಪರ್​ಸ್ಪೋರ್ಟ್​ ಪಾರ್ಕ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಅತಿಥೇಯರ ವಿರುದ್ಧ ಭಾರತ ತಂಡ ಇನ್ನಿಂಗ್ಸ್‌ ಹಾಗೂ 32 ರನ್‌ಗಳಿಂದ ಸೋಲುಂಡಿದೆ.

ಸೋಲಿನ ನಡುವೆಯು ವಿರಾಟ್​ ಕೊಹ್ಲಿ ಅವರ ಈ ವಿಶಿಷ್ಟ ಸಾಧನೆ ಟೀಂ ಇಂಡಿಯಾಗೆ ಟಾನಿಕ್​ ಆಗಿ ಪರಿಣಮಿಸಬಹುದು . ಡಿಸೆಂಬರ್​ 26 ರಂದು ಆರಂಭವಾದ ಎರಡು ಪಂದ್ಯಗಳ ಟೆಸ್ಸ್​ ಸರಣಿಯಲ್ಲಿ ವಿರಾಟ್​ ಕೊಹ್ಲಿ 66 ರನ್ ​ಗಳನ್ನು ಬಾರಿಸಿದರೆ ಕ್ರಿಕೆಟ್​ ಇತಿಹಾಸದಲ್ಲೇ ಹೊಸ ದಾಖಲೆ ಒಂದನ್ನು ಬರೆಯಲಿದ್ದಾರೆ ಎಂದು ಹೇಳಲಾಗಿತ್ತು.

Join Nadunudi News WhatsApp Group

Virat Kohli Creates Unique Record In World Cricket History
Image Credit: India Today

ಕ್ರಿಕೆಟ್ ಕ್ಷೇತ್ರದಲ್ಲಿ ವಿರಾಟ್ ಸಾಧನೆ

ವಿರಾಟ್​ ಕೊಹ್ಲಿ ಎರಡು ಇನ್ನಿಂಗ್ಸ್​ನಲ್ಲಿ ಒಟ್ಟಾರೆಯಾಗಿ 114 ರನ್​ ಗಳಿಸಿದ್ದಾರೆ. ಈ ಮೂಲಕ ವರ್ಷವೊಂದರಲ್ಲಿ ಅತಿ ಹೆಚ್ಚು ಬಾರಿ 2 ಸಾವಿರ ರನ್​ ಕಲೆಹಾಕಿದ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ವಿರಾಟ್​ ಕೊಹ್ಲಿ ಪಾತ್ರರಾಗಿದ್ದಾರೆ. ಶ್ರೀಲಂಕಾ ಕ್ರಿಕೆಟ್​ ತಂಡದ ಮಾಜಿ ನಾಯಕ ಕುಮಾರ್​ ಸಂಗಕಾರ ವರ್ಷ ಒಂದರಲ್ಲಿ 6 ಬಾರಿ 2 ಸಾವಿರ ರನ್​ ಕಲೆಹಾಕಿದ್ದರು. ಇತ್ತ ವಿರಾಟ್​ ಕೊಹ್ಲಿ 7 ಬಾರಿ ಈ ಸಾಧನೆ ಮಾಡಿದ್ದು, ಕ್ರಿಕೆಟ್​ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದ್ದಾರೆ. ವಿರಾಟ್​ 2012 (2,186), 2014 (2,286), 2016 (2,595), 2017 (2,818), 2018 (2,735), 2019 (2,455), 2023 (2,048) 7 ಬಾರಿ ಈ ಸಾಧನೆ ಮಾಡಿದ್ದಾರೆ. ಹೀಗೆ ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಸಾಧನೆಗಳಲ್ಲಿ ವಿರಾಟ್ ಹೆಸರು ಮೊದಲು ಕಾಣಬಹುದಾಗಿದೆ.

Join Nadunudi News WhatsApp Group