Virat Kohli: IPL ನಲ್ಲಿ ಇನ್ನೊಂದು ಇತಿಹಾಸ ಸೃಷ್ಟಿಸಿದ ಕಿಂಗ್ ಕೊಹ್ಲಿ, ಇದು ಕೊಹ್ಲಿಯಿಂದ ಮಾತ್ರ ಸಾಧ್ಯ.

IPL ನಲ್ಲಿ ಇನ್ನೊಂದು ಇತಿಹಾಸ ಸೃಷ್ಟಿಸಿದ ಕಿಂಗ್ ಕೊಹ್ಲಿ

Virat Kohli New Record In IPL 2024: ಪ್ರಸ್ತುತ ಈ ಬಾರಿಯ IPL ಜನರಿಗೆ ಹೆಚ್ಚು ಕುತೂಹಲ ತರಿಸಿದೆ. ಈವರೆಗೆ 41 ಪಂದ್ಯಗಳು ನಡೆದಿದೆ. ಇನ್ನು IPL 2024 ರ 41 ನೇ ಪಂದ್ಯದಲ್ಲಿ RCB v/s SRH ತಂಡ ಮುಖಾಮುಖಿಯಾಗಿದೆ. ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ RCB ತಂಡಕ್ಕೆ ಡು ಓರ್ ಡೈ ಪಂದ್ಯವಾಗಿತ್ತು. ಸತತ ಸೋಲು ಕಂಡಿರುವ RCB ಈ ಪಂದ್ಯದಲ್ಲಿ ಜಯ ಸಾಧಿಸುವ ಪಣತೊಟ್ಟಿತ್ತು.

ಅದರಂತೆ ನಿನ್ನೆ ನಡೆದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ RCB ಜಯ ಸಾಧಿಸಿದೆ. RCB ಗೆಲುವಿನ ಖುಷಿಯಲ್ಲಿ ಕನ್ನಡಿಗರು ತೇಲುತಿದ್ದಾರೆ. RCB ಈ ಜಯ ಫ್ಲೇ ಆಫ್ ಕನಸು ನನಸು ಮಾಡಿಕೊಳ್ಳೂ ದಾರಿ ಮಾಡಿಕೊಟ್ಟಿದೆ. ಇನ್ನು ಈ ಮ್ಯಾಚ್ ನಲ್ಲಿ ಸ್ಪೋಟಕ ಆಟಗಾರ Virat Kohli ಹೊಸ ಇತಿಹಾಸ ಬರೆದು ದಾಖಲೆ ಸೃಷ್ಟಿಸಿದ್ದಾರೆ.

Virat Kohli New Record In IPL 2024
Image Credit: Live Mint

IPL ನಲ್ಲಿ ಇನ್ನೊಂದು ಇತಿಹಾಸ ಸೃಷ್ಟಿಸಿದ ಕಿಂಗ್ ಕೊಹ್ಲಿ
ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಆರಂಭಿಕರಾಗಿ ಅಖಾಡಕ್ಕಿಳಿದ ಕೊಹ್ಲಿ 21 ರನ್ ಗಳಿಸಿದ ಕೂಡಲೇ ಐಪಿಎಲ್ ನಲ್ಲಿ ಇತಿಹಾಸ ಸೃಷ್ಟಿಸಿದರು. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 21 ರನ್ ಗಳಿಸಿದ ತಕ್ಷಣ ಕೊಹ್ಲಿ ಈ ಋತುವಿನಲ್ಲಿ 400 ರನ್ ಪೂರೈಸಿದ್ದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 10 ಸೀಸನ್‌ ಗಳಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಇದು ಕೊಹ್ಲಿಯಿಂದ ಮಾತ್ರ ಸಾಧ್ಯ
ಇದಕ್ಕೂ ಮುನ್ನ ಈ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಹೆಸರಿನಲ್ಲಿತ್ತು. ಮಿಸ್ಟರ್ ಐಪಿಎಲ್ ಖ್ಯಾತಿಯ ರೈನಾ 9 ಸೀಸನ್ ಗಳಲ್ಲಿ ಈ ಸಾಧನೆ ಮಾಡಿದ್ದರು. ಅಲ್ಲದೆ ವಿರಾಟ್ ಕೊಹ್ಲಿ ಐಪಿಎಲ್‌ ನಲ್ಲಿ ಆರಂಭಿಕ ಬ್ಯಾಟ್ಸ್‌ ಮನ್ ಆಗಿ 4000 ರನ್ ಪೂರೈಸಿದ್ದಾರೆ. ಇದರೊಂದಿಗೆ ಐಪಿಎಲ್‌ ನಲ್ಲಿ 4000 ರನ್ ಗಳಿಸಿದ ನಾಲ್ಕನೇ ಆರಂಭಿಕ ಬ್ಯಾಟ್ಸ್‌ ಮನ್ ಎನಿಸಿಕೊಂಡರು.

ಈ ಹಿಂದೆ ಶಿಖರ್ ಧವನ್, ಡೇವಿಡ್ ವಾರ್ನರ್ ಮತ್ತು ಕ್ರಿಸ್ ಗೇಲ್ ಈ ಸಾಧನೆ ಮಾಡಿದ್ದರು. ಈ ಪಂದ್ಯದಲ್ಲಿ ಕೊಹ್ಲಿ 43 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು. ಆದರೆ ಪವರ್‌ ಪ್ಲೇ ನಂತರ ಕೊಹ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡಿದರು. ಈ ಅವಧಿಯಲ್ಲಿ ಕೊಹ್ಲಿಗೆ 1 ಬೌಂಡರಿ ಕೂಡ ಹೊಡೆಯಲು ಸಾಧ್ಯವಾಗಲಿಲ್ಲ. ಪವರ್‌ ಪ್ಲೇಯಲ್ಲಿ ವಿರಾಟ್ 18 ಎಸೆತಗಳಲ್ಲಿ ಕೇವಲ 32 ರನ್ ಗಳಿಸಿದರು.

Join Nadunudi News WhatsApp Group

Virat kohli Latest News
Image Credit: NDTV

Join Nadunudi News WhatsApp Group