Kohli Records: ಕ್ರಿಕೆಟ್ ದಿಗ್ಗಜ ಸುರೇಶ್ ರೈನಾ ದಾಖಲೆ ಧೂಳಿಪಟ ಮಾಡಿದ ಕೊಹ್ಲಿ, ಹೊಸ ದಾಖಲೆ ನಿರ್ಮಾಣ.

ಕ್ರಿಕೆಟ್ ದಿಗ್ಗಜ ಸುರೇಶ್ ರೈನಾ ದಾಖಲೆ ಧೂಳಿಪಟ ಮಾಡಿದ ಕೊಹ್ಲಿ

Virat Kohli Break Suresh Raina Record: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಉತ್ತಮ ಬ್ಯಾಟ್ಸಮನ್ ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್ ಇತಿಹಾಸದಲ್ಲಿ ಸಾಕಷ್ಟು ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಉತ್ತಮ ಆಟಗಾರರಾಗಿದ್ದು, ಕೋಟ್ಯಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಆಗಾಗ ತಮ್ಮ ಕ್ರಿಕೆಟ್ ಸಾಧನೆಯ ವಿಚ್ಛ್ರಾವಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಈಗಾಗಲೇ ಕ್ರಿಕೆಟ್ ಅತಿಹಾಸದಲಿ ವಿರಾಟ್ ಅವರ ಸಾಧನೆ ಸಾಕಷ್ಟಿದೆ. ಸದ್ಯ ವಿರಾಟ್ ಕೊಹ್ಲಿ ಕೇವಲ ಬ್ಯಾಟ್ಸ್ ಮನ್ ಮಾತ್ರವಲ್ಲದೆ ಟಿ20 ಕ್ರಿಕೆಟ್ ನಲ್ಲಿ ಭಾರತೀಯ ಫೀಲ್ಡರ್ ಆಗಿಯೂ ವಿಶೇಷ ದಾಖಲೆ ಬರೆದಿದ್ದಾರೆ.

virat kohli new record
Image Credit: Live Mint

ಕ್ರಿಕೆಟ್ ದಿಗ್ಗಜ ಸುರೇಶ್ ರೈನಾ ದಾಖಲೆ ಧೂಳಿಪಟ ಮಾಡಿದ ಕೊಹ್ಲಿ
ಇನ್ನು ಕ್ರಿಕೆಟ್ ಪಂದ್ಯ ನಡೆಯುತ್ತಿದ್ದರೇ ಅದರಲ್ಲಿ ವಿರಾಟ್ ಆಡುತ್ತಿದ್ದರೆ ಕ್ರಿಕೆಟ್ ಪ್ರಿಯರು ಹೆಚ್ಚಿನ ಆಸಕ್ತಿಯೊಂದಿಗೆ ಪಂದ್ಯವನ್ನು ವೀಕ್ಷಿಸುತ್ತಾರೆ. ವಿರಾಟ್ ಕೊಹ್ಲಿ ಅವರ ಆಟವನ್ನು ನೋಡುವುದನ್ನು ತಪ್ಪಿಸಿಕೊಳ್ಳಲು ವೈರು ಇಷ್ಟಪಡುವುದಿಲ್ಲ. ಒಂದೊಂದು ಪಂದ್ಯದಲ್ಲೂ ಕೂಡ ವಿರಾಟ್ ಹೊಸ ಹೊಸ ದಾಖಲೆಯನ್ನು ಬರೆಯುತ್ತ ಈ ಹಿಂದೆ ಮಾಡಿರುವ ದಾಖಲೆಯನ್ನು ಬ್ರೇಕ್ ಮಾಡುತ್ತಾರೆ. ಇದೀಗ ವಿರಾಟ್ ಮತ್ತೆ ಹೊಸ ರೆಕೊರ್ಡ್ ಬ್ರೇಕ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ವಿಶೇಷ ಸಾಧನೆ ಮಾಡುವ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಕೊಹ್ಲಿ ಟಿ20 ಪಂದ್ಯಗಳಲ್ಲಿ 173ನೇ ಕ್ಯಾಚ್ ಪಡೆದಿದ್ದು, ಸುರೇಶ್ ರೈನಾ ಅವರ 172 ಕ್ಯಾಚ್‌ ಗಳ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ ನಲ್ಲಿ ಭಾರತದ ಫೀಲ್ಡರ್ ಆಗಿ ಹೆಚ್ಚು ಕ್ಯಾಚ್ ಪಡೆದ ಆಟಗಾರ ಎಂದು ಪರಿಗಣಿಸಲಾಗಿದೆ. ಭಾರತದ ತಂಡದ ನಾಯಕ ರೋಹಿತ್ ಶರ್ಮಾ 167 ಕ್ಯಾಚ್‌ ಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಮನೀಶ್ ಪಾಂಡೆ (146) ಮತ್ತು ಸೂರ್ಯಕುಮಾರ್ ಯಾದವ್ (136) ಇದ್ದಾರೆ.

virat kohli latest news
Image Credit: Livemint

Join Nadunudi News WhatsApp Group

Join Nadunudi News WhatsApp Group