virat kohli retirement: ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿ, ಕೊಹ್ಲಿ ನಿವೃತ್ತಿ ಬಗ್ಗೆ ಬಂತು ಬಿಗ್ ಅಪ್ಡೇಟ್.

ಕೊಹ್ಲಿ ನಿವೃತ್ತಿ ಬಗ್ಗೆ ಬಂತು ಬಿಗ್ ಅಪ್ಡೇಟ್

Virat Kohli Retirement Update: ಇನ್ನು ಕೆಲವೇ ದಿನಗಳಲ್ಲಿ ICC World Cup 2024 ನಡೆಯಲಿದೆ. ಈ ಬಾರಿ T20 ನಲ್ಲಿ Team India ಗೆಲುವಿಗಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. 2024 ರ T20 ರಲ್ಲಿ ಆಡಲು ಭಾರತ ತಂಡದಲ್ಲಿ ಬಲಿಷ್ಠ ಆಟಗಾರರ ಆಯ್ಕೆ ಕೂಡ ಆಗಿದೆ. Team India ಈ ಬಾರಿ ಕಪ್ ಗೆಲ್ಲುವ ಪಣ ತೊಟ್ಟಿದೆ. ಕಾರಣ ಈ ಪಂದ್ಯದ ನಂತರ ಟೀಮ್ ಇಂಡಿಯಾದ ಕೆಲ ಆಟಗಾರರು ನಿವೃತ್ತಿ ಹೊಂದಲಿದ್ದಾರೆ.

ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಬ್ಯಾಟ್ಸ್‌ ಮನ್‌ ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಟಿ-20ಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು 117 ಪಂದ್ಯಗಳಲ್ಲಿ 4037 ರನ್ ಗಳಿಸಿದ್ದಾರೆ. ಒಂದು ಇನ್ನಿಂಗ್ಸ್‌ ನಲ್ಲಿ ಅವರ ಗರಿಷ್ಠ ಸ್ಕೋರ್ ಔಟಾಗದೆ 122 ರನ್ ಆಗಿದೆ. ಅವರ ಹೆಸರಿನಲ್ಲಿ 37 ಅರ್ಧ ಶತಕ ಮತ್ತು ಒಂದು ಶತಕ ಕೂಡ ಇದೆ.

ಅಷ್ಟೇ ಅಲ್ಲ, ಟಿ-20ಯಲ್ಲಿ 361 ಬೌಂಡರಿ ಹಾಗೂ 117 ಸಿಕ್ಸರ್‌ ಗಳನ್ನು ಬಾರಿಸಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಇಷ್ಟೆಲ್ಲ ದಾಖಲೆ ಬರೆದಿರುವ ವಿರಾಟ್ ಕೊಹ್ಲಿ ಅವರ ನಿವೃತ್ತಿಯ ಬಗ್ಗೆ ಇದೀಗ ಚರ್ಚೆ ಆರಂಭವಾಗಿದೆ. ವಿರಾಟ್ ಶೀಘ್ರದಲ್ಲೇ ನಿವೃತ್ತಿ ಹೊಂದಳಿದ್ದಾರೆ ಎನ್ನಲಾಗುತ್ತಿದೆ.

Virat Kohli Retirement Update
Image Credit: Crictoday

ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿ
ಕ್ರಿಕೆಟ್ ನಿವೃತ್ತಿಯ ಬಗ್ಗೆ ಹೇಳುವುದಾದರೆ, ಭಾರತ ತಂಡದ ಶ್ರೇಷ್ಠ ಬ್ಯಾಟ್ಸ್‌ ಮನ್ ವಿರಾಟ್ ಕೊಹ್ಲಿ ಹೆಸರು ಅಗ್ರಸ್ಥಾನದಲ್ಲಿದೆ. ಈ ವಿಶ್ವಕಪ್ ಅವರಿಗೆ ಕೊನೆಯದಾಗಿರಬಹುದು ಎನ್ನಲಾಗುತ್ತಿದೆ. ಈ ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಟಿ20 ಗೆ ನಿವೃತ್ತಿ ಘೋಷಿಸಬಹುದು ಎಂದು ನಂಬಲಾಗಿದೆ. ಅದಾಗ್ಯೂ, ಈ ವಿಷಯದ ಬಗ್ಗೆ ಅವರು ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ, ಆದರೆ ಮಾಧ್ಯಮ ವರದಿಗಳಲ್ಲಿ ಅಂತಹ ದೊಡ್ಡ ವಿಚಾರದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ.

ಕೊಹ್ಲಿ ನಿವೃತ್ತಿ ಬಗ್ಗೆ ಬಂತು ಬಿಗ್ ಅಪ್ಡೇಟ್
ICC T-20 ವಿಶ್ವಕಪ್ ನಂತರ, ತಂಡದ ಮಾಜಿ ನಾಯಕ ಮತ್ತು ಲೆಜೆಂಡರಿ ಆಟಗಾರರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಬಹುದು. 35 ರ ಹರೆಯದ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದೊಂದಿಗೆ ಸುದೀರ್ಘ ಕಾಲದಿಂದಲೂ ಒಡನಾಟ ಹೊಂದಿದ್ದು, ಅವರು ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.

Join Nadunudi News WhatsApp Group

ಈ ಟೂರ್ನಿಯ ಬಳಿಕ ಅವರು ಅತಿ ಕಡಿಮೆ ಮಾದರಿಯಿಂದ ನಿವೃತ್ತಿ ಹೊಂದಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ವಿರಾಟ್ ಕೊಹ್ಲಿ ನಿವೃತ್ತಿ ಹೊಂದಿದರೆ ಭಾರತ ತಂಡಕ್ಕೆ ದೊಡ್ಡ ಆಘಾತವಾಗಲಿದೆ. ಅವರ ಸ್ಥಾನವನ್ನು ಯಾವ ಆಟಗಾರ ತುಂಬುತ್ತಾರೆ ಎಂದು ಹೇಳುವುದು ಕಷ್ಟ. ಅದಾಗ್ಯೂ, ಶುಭಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಆಟಗಾರರನ್ನು ಟಿ 20 ನಲ್ಲಿ ರನ್ ಮಷಿನ್ ಎಂದು ಪರಿಗಣಿಸಲಾಗುತ್ತದೆ. ಆದರೆ ಇದುವರೆಗೂ ವಿರಾಟ್ ಕೊಹ್ಲಿ ನಿವೃತ್ತಿಗೆ ಸಂಬಂಧಿಸಿದ ಪ್ರಶ್ನೆಗೆ ಏನನ್ನೂ ಹೇಳಿಲ್ಲ.

Virat kohli Latest News
Image Credit: NDTV

Join Nadunudi News WhatsApp Group