Kohli Batting: ಈ ಒಂದು ಕಾರಣಕ್ಕೆ ನಿಧಾನವಾಗಿ ಬ್ಯಾಟಿಂಗ್ ಮಾಡ್ತಾರಂತೆ ಕೊಹ್ಲಿ, ಸಿಕ್ತು ಅಸಲಿ ಕಾರಣ.

ವಿರಾಟ್ ಕೊಹ್ಲಿ ಈ ಒಂದು ಕಾರಣಕ್ಕೆ IPL ನಲ್ಲಿ ಬಹಳ ನಿಧಾನವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರಂತೆ

Reason For Virat Kohli Slow Batting: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಅವರ ಬಗ್ಗೆ ಹೆಚ್ಚು ಹೇಳಬೇಕೆಂದಿಲ್ಲ. ದೇಶ ವಿದೇಶದಲ್ಲಿಯೂ ಫ್ಯಾನ್ಸ್ ಗಳನ್ನೂ ಪಡೆದಿರುವ ವಿರಾಟ್ ಕೊಹ್ಲಿ ಅವರ ಆಟದ ಬಗ್ಗೆ ಪ್ರತಿಯೊಬ್ಬ ಅಭಿಮಾನಿಗಳು ತಿಳಿದಿದೆ.

ಪ್ರತಿ ಆಟದಲ್ಲಿ ವಿರಾಟ್ ಕೊಹ್ಲಿ ಹೊಸ ಹೊಸ ರೀತಿಯಲ್ಲಿ ರೆಕಾರ್ಡ್ ಮಾಡುತ್ತಾರೆ. ಇನ್ನು ವಿರಾಟ್ ಅವರ ಬ್ಯಾಟಿಂಗ್ ಬಗ್ಗೆ ನಿಮಗೆ ಗೊತ್ತೇ…? ಕೊಹ್ಲಿ ನಿಧಾನವಾಗಿ ಬ್ಯಾಟಿಂಗ್ ಅನ್ನು ಮಾಡುತ್ತಾರೆ. ಇದಕ್ಕೂ ಒಂದು ಕಾರಣವಿದೆ. ಇದೀಗ ನಾವು ಈ ಲೇಖನದಲ್ಲಿ ಕೊಹ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡುವ ಹಿಂದಿರುವ ಕಾರಣದ ಬಗ್ಗೆ ಮಾಹಿತಿ ನೀಡಲಿದ್ದೇವೆ.

about virat kohli slow batting
Image Credit: Original Source

ಈ ಒಂದು ಕಾರಣಕ್ಕೆ ನಿಧಾನದವಾಗಿ ಬ್ಯಾಟಿಂಗ್ ಮಾಡ್ತಾರಂತೆ ಕೊಹ್ಲಿ
ವಿರಾಟ್ ಕೊಹ್ಲಿ ಆರಂಭದಲ್ಲಿ ವೇಗವಾಗಿ ಆಡಿದ್ದರು. ಅವರು ಪವರ್‌ ಪ್ಲೇನಲ್ಲಿ ಅದ್ಭುತವಾಗಿದ್ದರು, ನಂತರ 25 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದರು. ಇದನ್ನು ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ. ಆದರೆ, ಫಿಂಚ್ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮಅವರ ನಿಧಾನಗತಿಯ ಆಟದ ಬಗ್ಗೆ ಎಲ್ಲರು ಅಸಮಾಧಾನ ಹೊರಹಾಕುತ್ತಿದ್ದಾರೆ. ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅವರು 43 ಎಸೆತಗಳಲ್ಲಿ 51 ರನ್ ಗಳಿಸಿದರು ಮತ್ತು ಅವರ ಸ್ಟ್ರೈಕ್ ರೇಟ್ ಕೇವಲ 118 ಆಗಿದೆ ಎಂದು ಹಲವರು ಟೀಕಿಸುತ್ತಿದ್ದಾರೆ.

secrets of virat kohli slow batting
Image Credit: Original Source

ಸಿಕ್ತು ಅಸಲಿ ಕಾರಣ
ವಿರಾಟ್ ಅವರ ನಿಧಾನಗತಿಯ ಹಿಂದೆ ಬಲವಾದ ಕಾರಣವಿದೆ ಎಂದು ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಐರನ್ ಫಿಂಚ್ ಹೇಳಿದ್ದಾರೆ. ಇದಕ್ಕೂ ಮೊದಲು ಫಿಂಚ್ ಅವರು ಆರ್‌ಸಿಬಿ ಪರ ಆಡಿದ್ದರು. ಅವರು ಓಪನಿಂಗ್‌ ನಲ್ಲಿ ಆಡುತ್ತಿದ್ದರು. ವಿರಾಟ್ ಕೊಹ್ಲಿ ಆರಂಭದಲ್ಲಿ ವೇಗವಾಗಿ ಆಡಿದರು. ಅವರು ಪವರ್‌ ಪ್ಲೇ ನಲ್ಲಿ ಅದ್ಭುತವಾಗಿದ್ದರು, ನಂತರ 25 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದರು. ಇದನ್ನು ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ. ಆದರೆ, ಫಿಂಚ್ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ. ಅವರ ನಿಧಾನಗತಿಯ ಆಟಕ್ಕೆ ಕಾರಣವೇನು ಎಂದು ವಿವರಿಸಿದರು.

Join Nadunudi News WhatsApp Group

ಆರಂಭದಲ್ಲಿ ಕೊಹ್ಲಿ ಉತ್ತಮವಾಗಿ ಆಡಿದರು. ಅದಾಗ್ಯೂ, ಪವರ್‌ ಪ್ಲೇ ನಂತರ ಅವರು 25 ಎಸೆತಗಳಲ್ಲಿ 19 ರನ್ ಗಳಿಸಿದರು. ರಜತ್ ಪಾಟಿದಾರ್ ಅದ್ಭುತ ಆಟವಾಡುತ್ತಿದ್ದರು ಎಂಬುದನ್ನು ಗಮನಿಸಬೇಕು. ಕೊಹ್ಲಿಯ ರನ್ ನೋಡಿ ಕಡಿಮೆ ಆಯಿತು ಎನ್ನಬಹುದು. ಆದರೆ, ಪಾಲುದಾರಿಕೆಯನ್ನು ನೋಡಿದರೆ ಅದು ನಿಜವಾಗಿಯೂ ಕೆಲಸ ಮಾಡಿದೆ ಎಂದು ತೋರುತ್ತದೆ.

ಪಾಟಿದಾರ್‌ ಗೆ ಸ್ಟ್ರೈಕ್ ನೀಡುವ ಮೂಲಕ ಕೊಹ್ಲಿ ಉತ್ತಮ ಕೆಲಸ ಮಾಡಿದರು’ ಎಂದು ಫಿಂಚ್ ಹೇಳಿದರು. ಹೈದರಾಬಾದ್ ತಂಡ ಈ ಹಿಂದೆ ಮೂರು ಬಾರಿ 250 ರನ್ ಬಾರಿಸಿತ್ತು. ಆದರೆ, ಆರ್‌ಸಿಬಿ ನೀಡಿದ 207 ರನ್‌ ಗಳನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಎಂಟು ಪಂದ್ಯಗಳಲ್ಲಿ ಆರ್‌ಸಿಬಿ 7 ಪಂದ್ಯಗಳಲ್ಲಿ ಸೋತಿದೆ. ಸದ್ಯ ಸನ್ ರೈಸರ್ಸ್ ವಿರುದ್ಧ ಗೆದ್ದಿದ್ದು, IPL 2024 ರಲ್ಲಿ ಎರಡನೇ ಗೆಲುವು ಸಾಧಿಸಿದೆ.

virat kohli about his slow batting
Image Credit: Original Source

Join Nadunudi News WhatsApp Group