Kohli SSLC Marks: ವಿರಾಟ್ ಕೊಹ್ಲಿ SSLC ಮಾರ್ಕ್ಸ್ ಎಷ್ಟಿದೆ ಗೊತ್ತಾ..?, ಕೊಹ್ಲಿ ಮಾರ್ಕ್ಸ್ ಕಾರ್ಡ್ ಹಂಚಿಕೊಂಡ IAS ಅಧಿಕಾರಿ.

ಇದೀಗ Virat ಕೊಹ್ಲಿ ಅವರ ಕ್ರೀಡಾ ಸಾಧನೆಯ ಜೊತೆಗೆ ಶೈಕ್ಷಣಿಕ ಸಾಧನೆಯ ಬಗ್ಗೆ ಮಾಹಿತಿ ಲಭಿಸಿದೆ.

Virat Kohli SSLC Marks Card Viral: ಟೀಮ್ ಇಂಡಿಯಾದ ಮಾಜಿ ನಾಯಕ Virat Kohli ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಕ್ರಿಕೆಟ್ ಆಟಗಾರರಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿರುವ ಏಕೈಕ ವ್ಯಕ್ತಿ ವಿರಾಟ್ ಕೊಹ್ಲಿ ಎನ್ನಬಹುದು. ವಿರಾಟ್ ಕೊಹ್ಲಿ ಪ್ರತಿ ಪಂದ್ಯದಲ್ಲಿ ಕೂಡ ವಿಶೇಷ ಸಾಧನೆ ಮಾಡುತ್ತಾ ಕ್ರಿಕೆಟ್ ಪ್ರಿಯರ ಮನ ಗೆಲ್ಲುತ್ತ ಇರುತ್ತಾರೆ.

ವಿರಾಟ್ ಕೊಹ್ಲಿ ಅವರು ಅಧ್ಯಯನದಲ್ಲಿ ವೇಗವಿಲ್ಲ ಎಂದು ಹಲವು ಸಂದರ್ಭಗಳಲ್ಲಿ ಒಪ್ಪಿಕೊಂಡಿದ್ದಾರೆ. ಮೊದಲಿನಿಂದಲೂ ಶಿಕ್ಷಣಕ್ಕಿಂತ ಕ್ರಿಕೆಟ್ ಬಗ್ಗೆ ವಿರಾಟ್ ಹೆಚ್ಚು ಆಸಕ್ತಿ ತೋರಿಸುತ್ತಿದ್ದರು. ಇದೀಗ Virat ಕೊಹ್ಲಿ ಅವರ ಕ್ರೀಡಾ ಸಾಧನೆಯ ಜೊತೆಗೆ ಶೈಕ್ಷಣಿಕ ಸಾಧನೆಯ ಬಗ್ಗೆ ಮಾಹಿತಿ ಲಭಿಸಿದೆ.

Virat Kohli SSLC Marks Card Viral
Image Credit: India

Virat Kohli SSLC ಮಾರ್ಕ್ಸ್ ಕಾರ್ಡ್ ರಿವೀಲ್
ಇದೀಗ ಭಾರತ ತಂಡದ ಶ್ರೇಷ್ಠ ಆಟಗಾರನ 10ನೇ ತರಗತಿ ಅಂಕಪಟ್ಟಿ ವೈರಲ್ ಆಗಿದೆ. ವಿರಾಟ್ ಹತ್ತನೇ ತರಗತಿಯಲ್ಲಿ ತೆಗೆದ ಮಾರ್ಕ್ಸ್ ಎಷ್ಟಿದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದಿದೆ. ಇನ್ನು ವಿರಾಟ್ ಅವರ ಸಿಬಿಎಸ್‌ಇ 10ನೇ ತರಗತಿಯ ಅಂಕಪಟ್ಟಿಯನ್ನು ಐಎಎಸ್ ಅಧಿಕಾರಿ ಜಿತಿನ್ ಯಾದವ್ ಹಂಚಿಕೊಂಡಿದ್ದಾರೆ. ಮಾರ್ಕ್ಸ್ ಕಾರ್ಡ್ ಜೊತೆಗೆ ಉತ್ತಮ ಶೀರ್ಷಿಕೆಯನ್ನು ಕೂಡ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರ ಮಾರ್ಕ್ಸ್ ಕಾರ್ಡ್ ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿರಾಟ್ ಕೊಹ್ಲಿ ಮಾರ್ಕ್ಸ್ ಕಾರ್ಡ್ ಹಂಚಿಕೊಂಡ IAS ಅಧಿಕಾರಿ
ಐಎಎಸ್ ಅಧಿಕಾರಿ ಜಿತಿನ್ ಯಾದವ್ X ನಲ್ಲಿ ವಿರಾಟ್ ಕೊಹ್ಲಿ ಮಾರ್ಕ್ಸ್ ಕಾರ್ಡ್ ಶೇರ್ ಮಾಡಿಕ್ಕೊಂಡಿದ್ದಾರೆ. ಮಾರ್ಕ್ಸ್ ಕಾರ್ಡ್ ಫೋಟೋ ಜೊತೆಗೆ ಕ್ಯಾಪ್ಶನ್ ಕೂಡ ನೀಡಿದ್ದಾರೆ. “ಅಂಕಗಳು ಒಂದೇ ಅಂಶವಾಗಿದ್ದರೆ, ಈಗ ಇಡೀ ದೇಶವು ಅವರ ಹಿಂದೆ ನಿಲ್ಲುತ್ತಿರಲಿಲ್ಲ. ಯಶಸ್ಸಿಗೆ ಉತ್ಸಾಹ ಮತ್ತು ಸಮರ್ಪಣೆ ಅಗತ್ಯವಿರುತ್ತದೆ. ಉತ್ಸಾಹ ಮತ್ತು ಸಮರ್ಪಣೆ ಮುಖ್ಯ” ಎಂದು ಬರೆದುಕೊಂಡಿದ್ದಾರೆ.

Join Nadunudi News WhatsApp Group

ವಿರಾಟ್ ಕೊಹ್ಲಿ SSLC ಮಾರ್ಕ್ಸ್ ಎಷ್ಟಿದೆ ಗೊತ್ತಾ..?
ವಿರಾಟ್ ಕೊಹ್ಲಿ ಗಣಿತ ಮತ್ತು ವಿಜ್ಞಾನದಲ್ಲಿ 60ಕ್ಕಿಂತ ಕಡಿಮೆ ಅಂಕ ಪಡೆದಿದ್ದಾರೆ. 10ನೇ ತರಗತಿ ಅಂಕಪಟ್ಟಿ ಪ್ರಕಾರ ವಿರಾಟ್ ಇಂಗ್ಲಿಷ್ ಮತ್ತು ಸಮಾಜ ವಿಜ್ಞಾನದಲ್ಲಿ 80ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. ಹಾಗೆಯೆ ವಿರಾಟ್ ಗಣಿತ ಮತ್ತು ವಿಜ್ಞಾನದಲ್ಲಿ 51 ಮತ್ತು 55 ಅಂಕಗಳನ್ನು ಗಳಿಸಿದ್ದಾರೆ.

ಓದಿನಲ್ಲಿ ಹಿಂದಿರುವ ವಿರಾಟ್ ಕ್ರಿಕೆಟ್ ಜಗತ್ತಿನಲ್ಲಿ ಸಾಧನೆ ಮಾಡಿರುವುದು ನಿಜಕ್ಕೂ ಖುಷಿಯ ಸಂಗತಿಯಾಗಿದೆ. ಯಾವ ವಿಷಯದಲ್ಲಿ ಆಸಕ್ತಿ ಇರುತ್ತದೆಯೋ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆನ್ನುವುದಕ್ಕೆ ವಿರಾಟ್ ಕೊಹ್ಲಿ ಉದಾಹರಣೆಯಾಗಿದ್ದಾರೆ.

Join Nadunudi News WhatsApp Group