Vivo T2: ಅತೀ ಕಡಿಮೆ ಬೆಲೆಯ ವಿವೊ T52 5G ಮೊಬೈಲ್ ಬಿಡುಗಡೆ, ಕೈಗೆಟುಕುವ ಬೆಲೆಗೆ ಸಿಗಲಿದೆ.

ಅತೀ ಹೆಚ್ಚು ಫೀಚರ್ ಇರುವ ವಿವೊ T52 5G ಮೊಬೈಲ್ ಬಿಡುಗಡೆ ಆಗಿದೆ ಮತ್ತು ಈ ಮೊಬೈಲ್ ಜನರಿಗೆ ಬಹಳ ಇಷ್ಟವಾಗುತ್ತದೆ.

Vivo T2 5G Smartphone Price: ಭಾರತದಲ್ಲಿ 5 ಜಿ ಸ್ಮಾರ್ಟ್ ಫೋನುಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬಿಡುಗಡೆ ಆಗುತ್ತಿದೆ. ಜಿಯೋ, ಏರ್ ಟೆಲ್ 5 ಜಿ ಸೇವೆ ದೇಶದಲ್ಲಿ ಎಲ್ಲಾ ಕಡೆ ವಿಸ್ತರಣೆ ಆಗಿದೆ.

ಪ್ರಸಿದ್ಧ ಸ್ಮಾರ್ಟ್ ಫೋನ್ ಬ್ರಾಂಡ್ ಗಳು ಒಂದರ ಹಿಂದೆ ಒಂದರಂತೆ 5 ಜಿ ಬೆಂಬಲ ನೀಡುವ ಮೊಬೈಲ್ ಅನ್ನು ರಿಲೀಸ್ ಮಾಡುತ್ತಿದೆ. ಅದು ಕೂಡ ಅಗ್ಗದ ಬೆಲೆಯಲ್ಲಿ ಲಭ್ಯವಾಗುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ವಿವೊ (Vivo) ಸಂಸ್ಥೆ ವಿವೊ ಟಿ2 5 ಜಿ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ.

Vivo T2 5G Smartphone Price
Image Source: Business Today

ವಿವೋ T2 5G ಸ್ಮಾರ್ಟ್​ಫೋನ್‌ ನ ಬೆಲೆ
ವಿವೋ T2 5G (Vivo T52 5G) ಸ್ಮಾರ್ಟ್​ಫೋನ್‌ ಭಾರತದಲ್ಲಿ ಒಟ್ಟು ಮೂರೂ ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 14 gb RAM+128 gb ವೆರಿಯಂಟ್ ಗೆ ಕೇವಲ 12999 ರೂಪಾಯಿ ಇದೆ. ಅಂತೆಯೇ 6GB RAM+128 gb ಸ್ಟೋರೇಜ್ ಮಾದರಿಗೆ 13999 ರೂಪಾಯಿ ನಿಗದಿ ಮಾಡಲಾಗಿದೆ. ಇ ಕಾಮರ್ಸ್ ತಾಣವಾದ ಫ್ಲಿಪ್ ಕಾರ್ಟ್ ಸೇರಿದಂತೆ ವಿವೊ ಅಧಿಕೃತ ವೆಬ್ ಸೈಟ್ ನಲ್ಲಿ ಏಪ್ರಿಲ್ 31 ರಿಂದ ಖರೀದಿಗೆ ಸಿಗುತ್ತದೆ.

Vivo T2 5G Smartphone Price
Image Source: Business Today

ವಿವೋ T2 5G ಸ್ಮಾರ್ಟ್​ಫೋನ್‌ ನ ವೈಶಿಷ್ಟ್ಯತೆ
ವಿವೋ T2 5G ಸ್ಮಾರ್ಟ್​ಫೋನ್‌ ಅಧಿಕ ಪಿಕ್ಸೆಲ್ ರೆಸಲ್ಯೂಷನ್ ಸಾಮರ್ಥ್ಯದ 6 .38 ಇಂಚಿನ ಫುಲ್ ಹೆಚ್ ಡಿ + ಡಿಸ್ ಪ್ಲೇ ಹೊಂದಿದೆ. ಸೂರ್ಯನ ಕಿರಣ ಮೊಬೈಲ್ ಮೇಲೆ ಬಿದ್ದರು ಡಿಸ್ ಪ್ಲೇ ಬ್ರೈಟ್ ಆಗಿ ಕಾಣಲಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 695 soC ಪ್ರೊಸೆಸರ್ ಅಳವಡಿಸಲಾಗಿದ್ದು, ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸಲಿದೆ.

ಮೈಕ್ರೋ ಯಸ್ ಡಿ ಕಾರ್ಡ್ ಮೂಲಕ ಸಂಗ್ರಹಣೆ ವಿಸ್ತರಣೆ ಮಾಡಬಹುದು. ಇನ್ ಡಿಸ್ ಪ್ಲೇ ಫಂಗರ್ ಪ್ರಿಂಟ್ ಆಯ್ಕೆ ನೀಡಲಾಗಿದೆ. ವಿವೋ T2 5G ಸ್ಮಾರ್ಟ್​ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಒಳಗೊಂಡಿದೆ. ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸಲ್‌ ಸಾಮರ್ಥ್ಯದಿಂದ ಕೂಡಿದೆ. 12 ಮೆಗಾ ಪಿಕ್ಸಲ್​ನ ಡೆಪ್ತ್ ಸೆನ್ಸಾರ್ ನೀಡಲಾಗಿದೆ. ಹಾಗೆಯೇ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾ ಪಿಕ್ಸಲ್‌ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ.

Join Nadunudi News WhatsApp Group

Vivo T2 5G Smartphone Price
Image Source: Gudgets

Join Nadunudi News WhatsApp Group