Voter ID: ಇನ್ನುಮುಂದೆ Voter ID ಮಾಡಿಸಲು ಕಷ್ಟಪಡಬೇಕಿಲ್ಲ, Online ನಲ್ಲಿ Voter ID ಗಾಗಿ ಈ ರೀತಿ ಅರ್ಜಿ ಸಲ್ಲಿಸಿ.

ಇನ್ನೂ ಕೂಡ ವೋಟರ್ ID ಮಾಡಿಸಿಲ್ಲ ಅಂದರೆ ಈ ರೀತಿಯಲ್ಲಿ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಿ

Voter ID Online Apply Process: ಸದ್ಯ ದೇಶದಲ್ಲಿ ಯಾವುದೇ ವ್ಯಕ್ತಿಯನ್ನು ಭಾರತೀಯ ಪ್ರಜೆ ಎಂದು ಗುರಿಸಲು ಆ ವ್ಯಕ್ತಿಯ ಸಾಕಷ್ಟು ಮುಖ್ಯ ದಾಖಲೆಗಳನ್ನು ಹೊಂದುವುದು ಕಡ್ಡಾಯವಾಗಿದೆ. Aadhaar Card, PAN Card, ಸೇರಿದಂತೆ ವೈಯಕ್ತಿಕ ದಾಖಲೆಗಳಲ್ಲಿ Voter Id ಕೂಡ ಒಂದಾಗಿದೆ. ಇನ್ನು ಭಾರತೀಯ ಪ್ರಜೆಗಳು ತಮ್ಮ ಮತದಾನದ ಹಕ್ಕನ್ನು ಪಡೆಯಲು Voter ID ಹೊಂದುವುದು ಮುಖ್ಯವಾಗಿದೆ.

ಇನ್ನು Election Commission of India ಈ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮವನ್ನು ರೂಪಿಸಿದೆ. ಯಾವುದೇ ವ್ಯಕ್ತಿ Voter ID ಮಾಡಿಸಿದರು ಭಾರತೀಯ ಚುನಾವಣಾ ಆಯೋಗದ ನಿಯಮದ ಪ್ರಕಾರವೇ ಮಾಡಿಸಬೇಕಾಗುತ್ತದೆ. ದೇಶದಲ್ಲಿ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷದವರು Voter ID ಪಡೆಯಲು ಅರ್ಹರಾಗಿರುತ್ತಾರೆ.

voter id online application process
Image Credit: Original Source

ಇನ್ನುಮುಂದೆ Voter ID ಮಾಡಿಸಲು ಕಷ್ಟಪಡಬೇಕಿಲ್ಲ
ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಯ ದಿನಾಂಕ ನಿಗದಿಯಾಗಲಿದೆ. ಈ ವೇಳೆ Voter ID ಮಾಡಿಸುವವರ ಸಂಖ್ಯೆ ಹೆಚ್ಚಾಗುತ್ತದೆ. ಇದೀಗ ನಾವು ವೋಟರ್ ಐಡಿ ಪಡೆಯಲು ಸುಲಭ ಮಾರ್ಗವಿದೆಯಾ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ನೀವು Voter ID ಪಡೆಯಲು ಹೆಚ್ಚು ಕಷ್ಟಪಡಬೇಕಿಲ್ಲ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ನೀವು ಸುಲಭವಾಗಿ ವೋಟರ್ ID ಗೆ ಅರ್ಜಿಯನ್ನು ಸಲ್ಲಿಸಬಹುದು. Voter ID Online Apply ಬಗ್ಗೆ ಈ ಲೇಖನದಲ್ಲಿ ನಾವೀಗ ಸಂಪೂರ್ಣ ವಿಧಾನ ಹೇಳಲಿದ್ದೇವೆ. ನೀವು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ Voter ID ಗೆ ಅರ್ಜಿಯನ್ನು ಸಲ್ಲಿಸಬಹುದು.

process of voter id application
Image Credit: Original Source

Online ನಲ್ಲಿ Voter ID ಗಾಗಿ ಈ ರೀತಿ ಅರ್ಜಿ ಸಲ್ಲಿಸಿ
*ನೀವು ಚುನಾವಣಾ ಆಯೋಗದ ವೆಬ್ ಸೈಟ್ https://voters.eci.gov.in/ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ನ ಮೂಲಕ Voter ID ಗೆ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

*ವೆಬ್ ಸೈಟ್ ನಲ್ಲಿ ‘ರಾಷ್ಟ್ರೀಯ ಮತದಾರರ ಸೇವೆಗಳು’ ಪೋರ್ಟಲ್ ಮೇಲೆ Click ಮಾಡಿ.

*ನಂತರ Online Apply ಸೆಕ್ಷನ್ ನಲ್ಲಿ ಹೊಸ ಮತದಾರರ ನೋಂದಣಿ ಮೇಲೆ click ಮಾಡಿ.

*ಫಾರ್ಮ್ 6 ಅನ್ನು ಡೌನ್ಲೋಡ್ ಮಾಡಿ ಇದರಲ್ಲಿ ನಿಮ್ಮ ಎಲ್ಲ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ ಮತ್ತು Submit ಮಾಡಿ.

*ಇದಾದ ಬಳಿಕ ನಿಮ್ಮ ಮೈಲ್ ಗೆ ಲಿಂಕ್ ಅನ್ನು ಕಳುಹಿಸಲಾಗುತ್ತದೆ. ಈ ಲಿಂಕ್ ನ ಮೂಲಕ ನೀವು Application Status ಅನ್ನು ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು.

*ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ 10 ದಿನಗಳ ಬಳಿಕ ನಿಮ್ಮ ಮತದಾನದ ಗುರುತಿನ ಚೀಟಿ ನಿಮ್ಮ ಮನೆಗೆ ಬಂದು ತಲುಪುತ್ತದೆ.

Join Nadunudi News WhatsApp Group