Voter ID: ನಿಮ್ಮ ವೋಟರ್ ಐಡಿ ಅಪ್ಡೇಟ್ ಮಾಡಿಕೊಳ್ಳಬೇಕೆ..? ನಿಮ್ಮ ವೋಟರ್ ಐಡಿಯನ್ನು ಈ ರೀತಿಯಾಗಿ ಅಪ್ಡೇಟ್ ಮಾಡಿಕೊಳ್ಳಿ

ನಿಮ್ಮ ವೋಟರ್ ಐಡಿಯನ್ನು ಮನೆಯಲ್ಲಿಯೇ ಕುಳಿತುಕೊಂಡು ಈ ರೀತಿಯಾಗಿ ಅಪ್ಡೇಟ್ ಮಾಡಿಕೊಳ್ಳಿ.

Voter ID online Update: ದೇಶದಲ್ಲಿ ಜನವರಿ 25 ರಂದು 14 ನೇ ರಾಷ್ಟ್ರೀಯ ಮತದಾನ ದಿನವನ್ನು ಆಚರಿಸಿಕೊಳ್ಳಲಾಗಿದೆ. ಈ ಹಿನ್ನಲೆ ಸಾರ್ವಜನಿಕರಿಗೆ Voter ID ಕುರಿತಾಗಿ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ನೀವು ನಿಮ್ಮ ವೋಟರ್ ಐಡಿಯನ್ನು ಮನೆಯಲ್ಲಿಯೇ ಕುಳಿತುಕೊಂಡು ಅಪ್ಡೇಟ್ ಮಾಡಿಕೊಳ್ಳಬಹುದು.

Voter ID online Update
Image Credit: Hindustantimes

ನಿಮ್ಮ ವೋಟರ್ ಐಡಿ ಅಪ್ಡೇಟ್ ಮಾಡಿಕೊಳ್ಳಬೇಕೆ..?
ಇನ್ನು 2024 ರಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ವೋಟರ್ ಐಡಿ ಮುಖ್ಯ ದಾಖಲೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ವೋಟರ್ ಐಡಿ ಅಪ್ಡೇಟ್ ಗೆ ಅವಕಾಶವನ್ನು ಮಾಡಿಕೊಟ್ಟಿದೆ. ಇದಕ್ಕಾಗಿ ನೀವು ಯಾವುದೇ ಕಚೇರಿ ಅಥವಾ ಸೈಬರ್ ಗೆ ಭೇಟಿ ನೀಡುವ ಅಗತ್ಯ ಇರುವುದಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಸ್ಮಾರ್ಟ್‌ ಫೋನ್ ಅಥವಾ ಲ್ಯಾಪ್‌ ಟಾಪ್‌ ನಲ್ಲಿ ಅಪ್ಡೇಟ್ ಮಾಡಿಕೊಳ್ಳಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಮನೆಯಲ್ಲಿಯೇ ಕುಳಿತು ನಿಮ್ಮ ವೋಟರ್ ಐಡಿಯನ್ನು ಈ ರೀತಿಯಾಗಿ ಅಪ್ಡೇಟ್ ಮಾಡಿಕೊಳ್ಳಿ
•ಮೊದಲು ಚುನಾವಣಾ ಆಯೋಗದ ವೆಬ್‌ ಸೈಟ್ ಅಥವಾ ಮತದಾರರ ಸಹಾಯವಾಣಿ ಅಪ್ಲಿಕೇಶನ್‌ ಗೆ ಭೇಟಿ ನೀಡಿ.

•ಇದರ ನಂತರ ಮುಂದುವರಿಯಲು ನಿಮ್ಮ ರಾಜ್ಯವನ್ನು ಆಯ್ಕೆಮಾಡಿ.

•ನಂತರ ಅಲ್ಲಿ ಕಾಣಿಸುವ ಫಾರ್ಮ್ 8A ಆಯ್ಕೆ ಮಾಡಿ. ವೋಟರ್ ಐಡಿ ವಿವರಗಳನ್ನು ನವೀಕರಿಸಲು ಇದು ಆನ್‌ ಲೈನ್ ಫಾರ್ಮ್ ಆಗಿದೆ.

Join Nadunudi News WhatsApp Group

•ಇದರ ನಂತರ ಆನ್‌ ಲೈನ್ ಫಾರ್ಮ್ ಅನ್ನು ಭರ್ತಿ ಮಾಡಿ. ನಿಮ್ಮ ಹೆಸರು, ವಿಳಾಸ, ರಾಜ್ಯ ಮತ್ತು ಕ್ಷೇತ್ರ ಬದಲಾವಣೆಗಳಂತಹ ಅಗತ್ಯವಿರುವ ವಿವರಗಳನ್ನು ನೀವು ಭರ್ತಿ ಮಾಡಬೇಕಾಗುತ್ತದೆ.

Voter ID Latest News Update
Image Credit: The Economic Times

•ನಂತರ ಆಧಾರ್ ಕಾರ್ಡ್ ಅಥವಾ ಪಾಸ್‌ ಪೋರ್ಟ್ ಅನ್ನು ಪುರಾವೆಯಾಗಿ ಅಪ್‌ ಲೋಡ್ ಮಾಡಬಹುದು.

•ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ ನೀವು ಅರ್ಜಿಯನ್ನು ಆನ್‌ ಲೈನ್‌ ನಲ್ಲಿ ಸಲ್ಲಿಸಬೇಕಾಗುತ್ತದೆ.

•ಈ ಸಂದರ್ಭದಲ್ಲಿ ನೀವು ಅಪ್ಲಿಕೇಶನ್ ಅನ್ನು ಟ್ರ್ಯಾಕ್ ಮಾಡಲು ಉಲ್ಲೇಖ ಸಂಖ್ಯೆಯನ್ನು ಪಡೆಯುತ್ತೀರಿ.

•ಇದಾದ ಬಳಿಕ ಆಯೋಗವು ದಾಖಲೆಯನ್ನು ಪರಿಶೀಲಿಸುತ್ತದೆ, ಬದಲಾವಣೆಗಳನ್ನು ನವೀಕರಿಸುತ್ತದೆ ಮತ್ತು ಅದನ್ನು ಮತದಾರರ ಗುರುತಿನ ಚೀಟಿಗೆ ಸೇರಿಸುತ್ತದೆ.

Join Nadunudi News WhatsApp Group