Wagon R Modification: ರೇಂಜ್ ರೋವರ್ ರೀತಿಯಲ್ಲಿ ಬಂತು ವಾಗನರ್ ಕಾರ್, ಹೊಸ ವಾಗನರ್ ಕಾರ್ ಕಂಡು ಜನರು ಫಿದಾ.

Wagon R Modified To Range Rover: ಸಧ್ಯ ದೇಶಿಯ ಮಾರುಕಟ್ಟೆಯಲ್ಲಿ Range Rover Car ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ Range Rover ದುಬಾರಿ ಕಾರ್ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಅದೆಷ್ಟೋ ಜನರು ಈ ದುಬಾರಿ ಬೆಲೆಯ Range Rover ಕಾರ್ ಖರೀದಿಸುವ ಆಸೆಯನ್ನು ಹೊಂದಿರುತ್ತಾರೆ.

ಇದೀಗ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ Range Rover ಕಾರ್ ಬಿಡುಗಡೆಯಾಗಿದೆ. ರೀ ಡಿಸೈನ್ ನಲ್ಲಿ ಸಣ್ಣ ಹ್ಯಾಚ್ ಬ್ಯಾಕ್ ಕಾರ್ ಪಕ್ಕ Range Rover ನ ಲುಕ್ ಅನ್ನು ನೀಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ರೀ ಡಿಸೈನ್ Range Rover ಲುಕ್ ಬಾರಿ ವೈರಲ್ ಆಗುತ್ತಿದೆ.

Wagon R Modified To Range Rover
Image Credit: Original Source

ರೇಂಜ್ ರೋವರ್ ರೀತಿಯಲ್ಲಿ ಬಂತು ವ್ಯಾಗನರ್ ಕಾರ್
Range Rover ಲುಕ್ ನೀಡಲು ವ್ಯಾಗನರ್ ಆರ್ ಕಾರಿನಂತಹ ಹ್ಯಾಚ್ ಬ್ಯಾಕ್ ಅನ್ನು ಬಳಸಲಾಗಿದೆ. ಈ ಕಾರನ್ನು ಬಾಂಗ್ಲಾದೇಶದ ಪಾಲ್ಕಿ ಮೋಟಾರ್ಸ್ ತಯಾರಿಸಿದೆ. ಪಾಲ್ಕಿ ಮೋಟಾರ್ಸ್ ಬಾಂಗ್ಲಾದೇಶದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟಪ್ ಕಂಪನಿಯಾಗಿದೆ. ಪಾಲ್ಕಿ ಮೋಟಾರ್ಸ್ ಬಾಂಗ್ಲಾದೇಶದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟಪ್ ಕಂಪನಿಯಾಗಿದೆ. ಬಾಂಗ್ಲಾದೇಶವು ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ವಲಯದಲ್ಲಿ ಕ್ರಾಂತಿಯನ್ನುಂಟು ಮಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಪಾಲ್ಕಿ ಮೋಟಾರ್ಸ್ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಕಾರುಗಳು ಮತ್ತು ಇತರ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಬದ್ಧವಾಗಿದೆ ಮತ್ತು ಸಾಧ್ಯವಾದಷ್ಟು ಬೇಗ ತನ್ನ ಗುರಿಯನ್ನು ತಲುಪುವ ವಿಶ್ವಾಸದಲ್ಲಿದೆ. ಚಿತ್ರದಲ್ಲಿ ಕಾಣುವ ರೇಂಜ್ ರೋವರ್ ಮಾದರಿಯ ಕಾರಿನ ಬಹುತೇಕ ಬಿಡಿ ಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಇದ್ದು, ಉತ್ಪನ್ನಗಳನ್ನು ಬಾಂಗ್ಲಾದೇಶದಲ್ಲಿ ಜೋಡಿಸಲಾಗಿದೆ ಎಂದು ತಿಳಿದು ಬಂದಿದೆ.

Maruti Suzuki Wagon R
Image Credit: Carwale

ಹೊಸ ವಾಗನರ್ ಕಾರ್ ಕಂಡು ಜನರು ಫಿದಾ
ರೀ ಡಿಸೈನ್ ಮಾಡಿರುವ ವ್ಯಾಗನಾರ್ ಕಾರ್ ನಲ್ಲಿ ನಾಲ್ಕು ಡೋರ್ ಗಳನ್ನೂ ಕಾಣಬಹುದು. ಈ ವ್ಯಾಗನಾರ್ ರೇಂಜ್ ರೋವರ್ ನ ಮುಂಭಾಗದ ವಿನ್ಯಾಸವನ್ನು ನೋಡಬಹುದು. ಆದರೆ ಗಾತ್ರಕ್ಕೆ ಹೋಲಿಸಿದರೆ, ರೇಂಜ್ ರೋವರ್ ಗಿಂತ ಚಿಕ್ಕದಾಗಿದೆ. ಈ ಕಾರನ್ನು ಆಟೋ ರಿಕ್ಷಾಗಳಿಗೆ ಬದಲಾಗಿ ಹೊರತರಾಗಿದೆ. ಈ ಕಾರ್ ಬಜಾಜ್‌ ಕ್ಯೂಟ್‌ ಎಂಬ ವಾಹನದ ಸೆಗ್ಮೆಂಟ್‌ ಅನ್ನು ಹೋಲುತ್ತದೆ. ಇನ್ನು ರೇಂಜ್ ರೋವರ್ ರೀತಿಯಲ್ಲಿ ಬಂತು ವ್ಯಾಗನರ್ ಕಾರ್ ನ ಬೆಲೆಯ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

Join Nadunudi News WhatsApp Group

Join Nadunudi News WhatsApp Group