Watermelon Benefit: ಗರ್ಭಿಣಿಯರು ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ಏನೇನು ಲಾಭ ಇದೆ ಗೊತ್ತಾ…? ಹಲವರಿಗೆ ತಿಳಿದಿಲ್ಲ

ಗರ್ಭಿಣಿ ಮಹಿಳೆಯರು ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಬಹಳ ಪ್ರಯೋಜನಗಳಿವೆ, ಕಲ್ಲಂಗಡಿ ಹಣ್ಣಿನ ವಿಶೇಶತೆ ಬಗ್ಗೆ ತಿಳಿದುಕೊಳ್ಳಿ

Watermelon Benefits For Pregnant Women: ಉತ್ತಮ ಆರೋಗ್ಯಕ್ಕೆ ಹಣ್ಣುಗಳನ್ನು ಸೇವಿಸುವುದು ಬಹಳ ಮುಖ್ಯ ಆಗಿದೆ. ಅದರಲ್ಲೂ ಗರ್ಭಿಣಿ ಮಹಿಳೆಯರು ಯಾವ ಹಣ್ಣನ್ನು ಎಷ್ಟು ಪ್ರಮಾಣದಲ್ಲಿ ತಿಂದರೆ ಒಳ್ಳೆಯದು ಎಂಬ ಮಾಹಿತಿ ತಿಳಿದುಕೊಳ್ಳಬೇಕಾಗಿದೆ. ಅದರಲ್ಲೂ ಕಲ್ಲಂಗಡಿ ಹಣ್ಣನ್ನು ಗರ್ಭಿಣಿ ಮಹಿಳೆಯರು ತಿನ್ನುವುದರಿಂದ ಏನೆಲ್ಲ ಲಾಭಗಳಿವೆ ಎಂದು ತಿಳಿಯುವುದು ಸೂಕ್ತ. ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಎನ್ನೆಲ್ಲ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳೋಣ.

Watermelon Benefits For Pregnant Women
Image Credit: Healthshots

ಕಲ್ಲಂಗಡಿ ಹಣ್ಣಿನಲ್ಲಿ ಕ್ಯಾಲ್ಸಿಯಂ, ಪೋಟ್ಯಾಷಿಯಂ ಹೇರಳವಾಗಿದೆ

ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿಗೆ ಪ್ರಮಾಣದ ಕ್ಯಾಲ್ಸಿಯಂ, ಪೋಟ್ಯಾಷಿಯಂ ಇದೆ. ಈ ಹಣ್ಣು ಗರ್ಭಿಣಿ ಮಹಿಳೆಯರಿಗೆ ಹಾಗು ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಗೆ ಸಹಕಾರಿ ಆಗಲಿದೆ. ಅಷ್ಟೇ ಅಲ್ಲದೆ ಈ ಹಣ್ಣು ಬಹಳ ತಂಪಾಗಿದ್ದು, ದೇಹವನ್ನು ಹಲವು ಸಮಸ್ಯೆಗಳಿಂದ ಪಾರು ಮಾಡುತ್ತದೆ. ಬಿಸಿಲಿನ ಸಮಯದಲ್ಲಿ ಈ ಹಣ್ಣು ತಿಂದರೆ ದೇಹವನ್ನು ತಂಪಾಗಿ ಇರಿಸುತ್ತದೆ. ಅಷ್ಟೇ ಅಲ್ಲದೆ ಕಲ್ಲಂಗಡಿ ಹಣ್ಣನ್ನು ಪ್ರತಿನಿತ್ಯ ಸೇವಿಸುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

Watermelon Benefit
Image Credit: Scoopernews

ಕಲ್ಲಂಗಡಿ ಹಣ್ಣಿನಲ್ಲಿ ಶೇಕಡಾ 92% ರಷ್ಟು ನೀರಿನ ಅಂಶವಿದೆ

ಕಲ್ಲಂಗಡಿ ಹಣ್ಣಿನಲ್ಲಿ ಶೇಕಡಾ 92% ರಷ್ಟು ನೀರಿನಾಂಶವಿದೆ. ಇದು ದೇಹವನ್ನು ಹೈಡ್ರೆಟೆಡ್ ಆಗಿ ಇಡುವುದಕ್ಕೆ ಸಹಾಯ ಮಾಡುತ್ತದೆ. ಹಾಗೇ ನಾರಿನಾಂಶ, ವಿಟಮಿನ್ಸ್, ಮಿನರಲ್ಸ್ ಜಾಸ್ತಿ ಇದೆ . ಇದನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತದೆ.

Join Nadunudi News WhatsApp Group

ತೂಕ ಇಳಿಕೆಗೆ ಕೂಡ ಈ ಹಣ್ಣು ಸಹಾಯಕಾರಿಯಾಗಿದೆ. ಹಾಗೇ ಇದನ್ನು ತಿನ್ನುವುದರಿಂದ ಕಾಲು ಊದಿಕೊಳ್ಳುವಿಕೆ ಕೂಡ ಕಡಿಮೆಯಾಗುತ್ತದೆ.ಇನ್ನು ಗರ್ಭಿಣಿಯರಿಗೆ ಜೀರ್ಣಕ್ರಿಯೆಯ ಸಮಸ್ಯೆ ಇರುತ್ತದೆ. ಇನ್ನು ಕೆಲವರಿಗೆ ಅಸಿಡಿಟಿ ಸಮಸ್ಯೆ ಇರುತ್ತದೆ. ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಇದು ಕಡಿಮೆಯಾಗುತ್ತದೆ. ಒಟ್ಟಾರೆಯಾಗಿ ಕಲ್ಲಂಗಡಿ ಹಣ್ಣು ಹುಟ್ಟಲಿರುವ ಮಗುವಿನ ದೇಹದ ಬೆಳವಣಿಗೆಗೆ ಇದು ಸಹಾಯಕಾರಿಯಾಗಿದೆ.

Join Nadunudi News WhatsApp Group