Waterproof Mobile: 30 ನಿಮಿಷ ನೀರಲ್ಲಿ ಇಟ್ಟರೂ ಏನು ಆಗಲ್ಲ,ಖರೀದಿಸಿ ಈ ಅಗ್ಗದ ವಾಟರ್ ಪ್ರೂಫ್ ಮೊಬೈಲ್.

ನೀರಿನಲ್ಲಿ ಇಟ್ಟರು ಏನು ಆಗದ ಮೊಬೈಲ್ ಫೋನ್ ಈಗ ಲಾಂಚ್ ಆಗಿದೆ.

Top 4 Best Waterproof Smartphones: ಭಾರತೀಯ ಮಾರುಕಟ್ಟೆಗಳಲ್ಲಿ ಸ್ಮಾರ್ಟ್ ಫೋನ್ ಗಳ ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಕಂಪನಿಗಳು ಹಲವು ಮಾದರಿಯ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತದೆ. ಸ್ಮಾರ್ಟ್ ಫೋನ್ ಬಳಕೆದಾರರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡುತ್ತಿದೆ.

ಇನ್ನು ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಫೋನ್ ಗಳು ಲಗ್ಗೆ ಇಡುತ್ತಿದಂತೆ ಗ್ರಾಹಕರು ಖರೀದಿಸಲು ಬಯಸುತ್ತಾರೆ. ಇನ್ನು ಯಾವ ಕಂಪನಿಯ ಸ್ಮಾರ್ಟ್ ಫೋನ್ ಕಡಿಮೆ ಬೆಲೆಗೆ ಲಭ್ಯವಾಗಲಿದೆ ಎನ್ನುವ ಬಗ್ಗೆ ಎಲ್ಲರು ಗಮನ ಹರಿಸುತ್ತಾರೆ.

 

Waterproof Phone ಗಳಿಗೆ ಹೆಚ್ಚುತ್ತಿದೆ ಬೇಡಿಕೆ
ಇನ್ನು ಗ್ರಾಹಕರು ಫೋನ್ ಖರೀದಿಯ ಸಮಯದಲ್ಲಿ ಬೆಲೆ ಹಾಗೂ ಸ್ಟೋರೇಜ್ ಬಗ್ಗೆ ಹೇಗೆ ಗಮನ ಹರಿಸುತ್ತಾರೋ ಫೋನ್ ನ ಸುರಕ್ಷತೆಯ ಬಗ್ಗೆ ಕೂಡ ಮೊದಲು ಆದ್ಯತೆ ನೀಡುತ್ತಾರೆ.ಫೋನ್ ನಲ್ಲಿ ನೀಡಲಾಗುವ ಸುರಕ್ಷತಾ ಫಿಚರ್ ನ ಆಧಾರದ ಮೇಲೆ ಫೋನ್ ಗಳು ಹೆಚ್ಚು ಮಾರಾಟವಾಗುತ್ತದೆ ಎಂದರೆ ತಪ್ಪಾಗಲಾರದು.

ಸಾಮಾನ್ಯವಾಗಿ ಜನರು Waterproof ಫೋನ್ ಗಳ ಖರೀದಿಗೆ ಹೆಚ್ಚು ಮನಸ್ಸು ಮಾಡುತ್ತಾರೆ. ನೀರಿನಿಂದ ಹಾಗೂ ಬೆಂಕಿಯಿಂದ ಆಗುವ ಅಪಾಯವನ್ನು ತಪ್ಪಿಸುವ ಫೋನ್ ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ Waterproof ಫೋನ್ ಗಳ ಬಗ್ಗೆ ವಿವರ ತಿಳಿಯೋಣ.

Join Nadunudi News WhatsApp Group

Image Source: India Today

*Apple iPhone
ದೇಶದ ದುಬಾರಿ ಬ್ರಾಂಡ್ ಆಗಿರುವ iPhone ಹೆಚ್ಚು ಸುರಕ್ಷತಾ ಫೀಚರ್ ಅನ್ನು ನೀಡುತ್ತದೆ. iPhone 11 ರಿಂದ ಲಭ್ಯವಿರುವ ಎಲ್ಲಾ ಮಾದರಿಗಳು IP68 ನ ಬೆಂಬಲದೊಂದಿಗೆ, ಧೂಳು ಮತ್ತು ನೀರಿನ ಪ್ರತಿರೋಧದ ವೈಶಿಷ್ಟ್ಯವನ್ನು ಹೊಂದಿದೆ.

*Samsung Galaxy S23 Ultra
Samsung ಕಂಪನಿ ಈಗಾಗಲೇ ಅನೇಕ ಪ್ರೀಮಿಯಂ ಫೋನ್ ಗಳನ್ನೂ ಪರಿಚಯಿಸಿದೆ. ಅದರಲ್ಲಿ IP68 ರೇಟಿಂಗ್ ನಲ್ಲಿ amsung Galaxy S23 Ultra, Samsung Galaxy S22 Ultra, Galaxy S23 ಮತ್ತು S23 ಫೋನ್ ಗಳು ಧೂಳು ಮತ್ತು ನೀರಿನ ಪ್ರತಿರೋಧದ ವೈಶಿಷ್ಟ್ಯವನ್ನು ಹೊಂದಿದೆ.

 

*Xiaomi 13 Pro 5G
ಭಾರತದಲ್ಲಿ Xiaomi ಯ ಹಲವು ಫೋನ್‌ಗಳಲ್ಲಿ IP68 ರೇಟಿಂಗ್ ನೀಡಲಾಗಿದೆ. ಅವುಗಳಲ್ಲಿ ಉತ್ತಮ ಆಯ್ಕೆ ಎಂದರೆ Xiaomi 13 Pro 5G . ಈ ಸ್ಮಾರ್ಟ್ ಫೋನ್ ದೂಳು ಮತ್ತು ಧೂಳಿನ ವಿರುದ್ಧ ರಕ್ಷಿಸುವ ಪ್ರೀಮಿಯಂ ಫೋನ್ ಆಗಿದೆ.

*Google Pixel 7, Pixel 7 Pro
Google ನ ಈ ಜನಪ್ರಿಯ ಫೋನ್ IP68 ರೇಟಿಂಗ್‌ನೊಂದಿಗೆ ಬರುತ್ತದೆ. ಇದು 1.5 ಮೀಟರ್ ನೀರಿನ ಅಡಿಯಲ್ಲಿ 30 ನಿಮಿಷಗಳ ಕಾಲ ಉಳಿಯುತ್ತದೆ. ಅರ್ಧ ಗಂಟೆಗಳು ನೀರಿನಲ್ಲಿ ಮುಳಿಗಿದ್ದರು ಕೂಡ ಈ ಎರಡು ಮಾದರಿಗಳಿಗೆ ಯಾವುದೇ ಹಾನಿ ಆಗುವುದಿಲ್ಲ.

Join Nadunudi News WhatsApp Group