Bule Aadhar Card: ನೀಲಿ ಆಧಾರ್ ಕಾರ್ಡ್ ಯಾರಿಗೆ ಸಿಗುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ?

ನೀಲಿ ಆಧಾರ್ ಕಾರ್ಡ್ ಯಾರು ಯಾರಿಗೆ ಸಿಗುತ್ತದೆ...? ಅರ್ಜಿ ಸಲ್ಲಿಸುವುದು ಹೇಗೆ

Bule Aadhar Card: ಜನರಿಗೆ ಆಧಾರ್ ಕಾರ್ಡ್ (Aadhar Card) ಎನ್ನುವುದು ಪ್ರಮುಖವಾದ ದಾಖಲೆಯಾಗಿದೆ. ದೇಶದ ಎಲ್ಲ ನಾಗರಿಕರಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಜನರಲ್ಲಿ ಬೇರೆ ಬೇರೆ ದಾಖಲೆಗಳಿಂತ ಆಧಾರ್ ಕಾರ್ಡ್ ಹೆಚ್ಚು ಕೆಲಸ ಮಾಡುತ್ತದೆ.

ವಿಶಿಷ್ಟವಾದ 12 ಅಂಕಿಯ ಸಂಖ್ಯೆಯನ್ನು ಹೊಂದಿರುವ ಈ ಕಾರ್ಡ್ ಅನ್ನು ಆಧಾರ್ ಅಥವಾ ಯುಐಡಿ ಸಂಖ್ಯೆ ಎಂದು ಕರೆಯಲಾಗುತ್ತದೆ. ಸರ್ಕಾರ ಜಾರಿಗೊಳಿಸಿದಂತಹ ಯೋಜನೆಯನ್ನು ಪಡೆದುಕೊಳ್ಳಲು ಸಹ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.

Blue Aadhar Card for Children's
Image Credit: Paytm

ನೀಲಿ ಆಧಾರ್ ಕಾರ್ಡ್ ಬಗ್ಗೆ ನಿಮಗೆಷ್ಟು ಗೊತ್ತು…?
ಆಧಾರ್ ಕಾರ್ಡ್ ಗಳು ಸಾಮಾನ್ಯವಾಗಿ ಬಿಳಿ ಬಣ್ಣದಲ್ಲಿರುತ್ತದೆ. ಈ ಬಿಳಿ ಬಣ್ಣದ ಆಧಾರ್ ಕಾರ್ಡ್ ಅನ್ನು ವಯಸ್ಕರಿಗೆ ನೀಡಲಾಗುತ್ತದೆ. ಬಿಳಿ ಆಧಾರ್ ಕಾರ್ಡ್ ಬಗ್ಗೆ ಎಲ್ಲರಿಗೂ ತಿಳಿದಿದೆ ಆದರೆ ಈ ನೀಲಿ ಆಧಾರ್ ಕಾರ್ಡ್ ಬಗ್ಗೆ ಮಾಹಿತಿ ತಿಳಿದಿದ್ದೀರಾ…? ಇದೀಗ ಈ ಆರ್ಟಿಕಲ್ ನಲ್ಲಿ ನಾವು ನಿಮಗೆ ನೀಲಿ ಆಧಾರ್ ಕಾರ್ಡ್ ಬಗ್ಗೆ ಮಾಹಿತಿ ನೀಡಲಿದ್ದೇವೆ.

ನೀಲಿ ಆಧಾರ್ ಕಾರ್ಡ್
ಈ ಆಧಾರ್ ಕಾರ್ಡ್ ಅನ್ನು ನೀಲಿ ಆಧಾರ್ ಕಾರ್ಡ್ ( Bule Aadhar Card ) ಎಂದು ಕರೆಯಲಾಗುತ್ತದೆ. UIDAI ಇದನ್ನು ವಿಶೇಷವಾಗಿ ಮಕ್ಕಳಿಗೆ ನೀಡುತ್ತಿದೆ. ಹೌದು ಈ ನೀಲಿ ಆಧಾರ್ ಕಾರ್ಡ್ ಅನ್ನು 5 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತದೆ. ಇದಕ್ಕಾಗಿ ಮಗುವಿನ ಬಯೋಮೆಟ್ರಿಕ್ ವಿವರ ಅಗತ್ಯವಿರುವುದಿಲ್ಲ. ಆಧಾರ್ ಅನ್ನು ಫೋಟೋ, ಹೆಸರು, ಪಾಲಕರ ಹೆಸರು ಮುಂತಾದ ಮೂಲ ಮಾಹಿತಿಯೊಂದಿಗೆ ನೀಡಲಾಗುತ್ತದೆ.

ಅವರ ಆಧಾರ್ ಕಾರ್ಡ್ ಅನ್ನು ಪಾಲಕರ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾಗುತ್ತದೆ. ನೀಲಿ ಆಧಾರ್ ಕಾರ್ಡ್ 5 ವರ್ಷದ ವರೆಗೆ ಮಾನ್ಯವಾಗಿರುತ್ತದೆ. ನಂತರ ಅದನ್ನು ಪಿಂಗರ್ ಪ್ರಿಂಟ್ ಮತ್ತು ಕಣ್ಣಿನ ಸಂಪರ್ಕದಂತಹ ವಿವರವನ್ನು ಒದಗಿಸಿ ನವೀಕರಿಸಬೇಕಾಗುತ್ತದೆ. 15 ವರ್ಷದ ನಂತರ ಮತ್ತೆ ಮಕ್ಕರ ಆಧಾರ್ ಕಾರ್ಡ್ ಅನ್ನು ನವೀಕರಿಸಬೇಕಾಗುತ್ತದೆ.

Join Nadunudi News WhatsApp Group

Bule Aadhar Card
Image Credit: Informal News

ನೀಲಿ ಆಧಾರ್ ಕಾರ್ಡ್ ನೋಂದಣಿ ಪ್ರಕ್ರಿಯೆ
*ಪಾಲಕರ ಆಧಾರ್ ಕಾರ್ಡ್, ವಿಳಾಸ, ಮಗುವಿನ ಜನನ ಪ್ರಮಾಣ ಪತ್ರ, ಹಾಗೂ ಭಾವಚಿತ್ರವನ್ನು ಆಧಾರ್ ನೋಂದಣಿ ಕೇಂದ್ರಕ್ಕೆ ನೀಡಬೇಕು.

*ಪಾಲಕರ ಮೊಬೈಲ್ ಸಂಖ್ಯೆಯನ್ನು ಮಗುವಿನ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಬೇಕಾಗುತ್ತದೆ.

*ದಾಖಲೆಗಳ ಪರಿಶೀಲನೆ

*ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಮೊಬೈಲ್ ಗೆ ಸಂದೇಶ ಕಳುಹಿಸಲಾಗುತ್ತದೆ.

*ನಂತರ ಸ್ವೀಕೃತಿ ಚೀಟಿಯನ್ನು ತೆಗೆದುಕೊಳ್ಳಬೇಕು

*ಇದಾದ ನಂತರ 60 ದಿನಗಳಲ್ಲಿ ಮಕ್ಕಳಿಗೆ ಆಧಾರ್ ಕಾರ್ಡ್ ಅನ್ನು ನೀಡಲಾಗುತ್ತದೆ.

*ಯಾವುದೇ ಶುಲ್ಕ ನೀಡುವ ಅಗತ್ಯ ಇಲ್ಲಾ

Join Nadunudi News WhatsApp Group