Green WhatsApp: ಇಂತಹ ಜನರಿಗೆ ಮಾತ್ರ ಸಿಗಲಿದೆ ಹಸಿರು ವಾಟ್ಸಾಪ್, ಭಾರತದಲ್ಲಿ ಕೆಲವರು ಮಾತ್ರ ಬಳಸುತ್ತಾರೆ ಯಾಕೆ…?

ಏನಿದು ಗ್ರೀನ್ ವಾಟ್ಸಾಪ್...? ಯಾರು ಯಾರು ಬಳಸುತ್ತಾರೆ ಈ ಗ್ರೀನ್ ವಾಟ್ಸಾಪ್

WhatsApp Green Theme Latest Update: ಬಳಕೆದಾರರ ನೆಚ್ಚಿನ ಚಾಟಿಂಗ್ Application ಆಗಿರುಗ WhatsApp ಇತ್ತೀಚೆಗಂತೂ ಹೊಸ ಹೊಸ ಅಪ್ಡೇಟ್ ಗಳ ಮೂಲಕ ಬಳಕೆದಾರರನ್ನು ಸೆಳೆಯುತ್ತಿದೆ. ಈಗಾಗಲೇ ವಾಟ್ಸಾಪ್ ನಲ್ಲಿ ಹಲವಾರು ಟ್ರೆಂಡಿ ಫೀಚರ್ಸ್ ಗಳು ಲಾಂಚ್ ಆಗಿದೆ.

ಮೆಟಾ ತನ್ನ ವಾಟ್ಸಾಪ್ ನಲ್ಲಿ ಹಲವಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಸೇರಿಸುವ ಮೂಲಕ ಬಳಕೆದಾರರಿಗೆ ಹೊಸ ಹೊಸ ರೀತಿಯ ಅನುಭವನ್ನು ನೀಡುತ್ತಿದೆ. ವಾಟ್ಸಾಪ್ ಬಳಕೆದಾರರು ಯಾವುದೇ ಅಡೆತಡೆ ಇಲ್ಲದೆ ಎಲ್ಲ ಫೀಚರ್ಸ್ ಗಳ ಲಾಭವನ್ನು ಪಡೆಯುತ್ತಿದ್ದಾರೆ. ಸದ್ಯ ಮೆಟಾ ಮಾಲೀಕತ್ವದ ವಾಟ್ಸಾಪ್ ಇದೀಗ ಎಲ್ಲ ಬಳಕೆದಾರರಿಗೆ ವಾಟ್ಸಾಪ್ ನಲ್ಲಿ ಬಿಗ್ ಅಪ್ಡೇಟ್ ಅನ್ನು ನೀಡಿದೆ.

WhatsApp Green Theme Feature
Image Credit: NDTV

ಇಂತಹ ಜನರಿಗೆ ಮಾತ್ರ ಸಿಗಲಿದೆ ಹಸಿರು ವಾಟ್ಸಾಪ್
ಮೆಟಾ ಮಾಲೀಕತ್ವದ ವಾಟ್ಸಾಪ್ ಈವರೆಗೆ ಯಾವುದೇ ಅಪ್ಡೇಟ್ ಬಿಡುಗಡೆ ಮಾಡಿದ್ದರು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿತ್ತು. ಆದರೆ ಇದೀಗ ವಾಟ್ಸಾಪ್ ನ ಈ ಅಪ್ಡೇಟ್ ಬಳಕೆದಾರರ ಅರಿವಿಲ್ಲದೆ ಅವರ ವಾಟ್ಸಾಪ್ ಗೆ ಬಂದಿದೆ ಎನ್ನಬಹುದು. ಇತ್ತೀಚಿನ ದಿನದಲ್ಲಿ ನಿಮ್ಮ ವಾಟ್ಸಾಪ್ ಹಸಿರಾಗಿರುವುದನ್ನು ನೀವು ಗಮನಿಸಿರಬಹುದು. ಇದು ವಾಟ್ಸಾಪ್ ನ ಹೊಸ ಅಪ್ಡೇಟ್ ಆಗಿದೆ. ಭಾರತದಲ್ಲಿ ಒಂದಿಷ್ಟು ಬಳಕೆದಾರರ ವಾಟ್ಸಾಪ್ ಹಸಿರಾಗಿದೆ. ಭಾರತದಲ್ಲಿನ iOS ಬಳಕೆದಾರರು ಹೊಸ WhatsApp ನವೀಕರಣವನ್ನು ಪಡೆಯುತ್ತಿದ್ದಾರೆ.

ಇದರಲ್ಲಿ, ಇಂಟರ್ಫೇಸ್ ಸಾಮಾನ್ಯ ನೀಲಿ ಬಣ್ಣಕ್ಕೆ ಬದಲಾಗಿ ಗ್ರೀನ್ Theme (WhatsApp Green Theme) ಕಾಣುತ್ತದೆ. ಆಂಡ್ರಾಯ್ಡ್ ಸಾಧನಗಳಲ್ಲಿ WhatsApp ಇದುವರೆಗೆ ಹಸಿರು ಇಂಟರ್ಫೇಸ್ ಅನ್ನು ಮಾತ್ರ ನೋಡಿರಬಹುದು. ಆದರೆ ಐಫೋನ್‌ ಗಳಲ್ಲಿ ಬಣ್ಣವು ರೋಮಾಂಚಕ ನೀಲಿ ಬಣ್ಣದ್ದಾಗಿತ್ತು. ಅಲ್ಲದೆ ಸ್ಟೇಟಸ್ ಪಟ್ಟಿ ಚಾಟ್-ಪಟ್ಟಿ ವಿಂಡೋದವರೆಗೆ ಎಲ್ಲವೂ ಹೊಸ ವಿನ್ಯಾಸ ಬದಲಾವಣೆಯನ್ನು ಸ್ವೀಕರಿಸಿದೆ. ಇದನ್ನು ಕಂಡು ನಿಮ್ಮ ಸೆಟ್ಟಿಂಗ್ ಬದಲಾಗಿದೆ ಎಂದು ಯೋಚಿಸಬೇಡಿ. ಬಳಕೆದಾರರಿಗೆ ಹೊಸ ರೀತಿಯ ಅನುಭವವನ್ನು ನೀಡಲು ಮೆಟಾ ಹೊಸ ಅಪ್ಡೇಟ್ ಅನ್ನು ನೀಡುತ್ತಿದೆ.

WhatsApp Green Theme Latest Update
Image Credit: Androidpolice

ನಿಮ್ಮ ವಾಟ್ಸಾಪ್ ಥೀಮ್ ಸಂಪೂರ್ಣ ಹಸಿರಾಗಿದೆಯಾ….?
ಐಕಾನ್‌ ಗಳ ಜೊತೆಗೆ, ಅಪ್ಲಿಕೇಶನ್‌ ನಲ್ಲಿ ಹಂಚಿಕೊಳ್ಳಲಾದ ಲಿಂಕ್‌ ಗಳು ಸಾಮಾನ್ಯ ನೀಲಿ ಬಣ್ಣಕ್ಕೆ ಬದಲಾಗಿ ಹಸಿರು ಬಣ್ಣವನ್ನು ಹೊಂದಿರುತ್ತವೆ. ಅಂತರ, ಬಣ್ಣಗಳು, ಐಕಾನ್‌ ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಬಳಕೆದಾರರಿಗೆ ಸ್ವಲ್ಪ ಹೆಚ್ಚು ಆಕರ್ಷಣೆ ಮತ್ತು ಹಿಡಿತವನ್ನು ನೀಡಲು ಹೊಸ ಅಪ್ಲಿಕೇಶನ್ ಮಾದರಿಯು ಕೆಲವು ಬದಲಾವಣೆಗಳನ್ನು ಮಾಡಿದೆ. ಹೆಚ್ಚಿನ ಜನರಿಗೆ ಈ ಹೊಸ ಬದಲಾವಣೆ ತಲುಪಿದೆ. ಸದ್ಯದಲ್ಲೇ ಎಲ್ಲ ಬಳಕೆದಾರರಿಗೂ WhatsApp Green Theme ಫೀಚರ್ ಸಿಗಲಿದೆ.

Join Nadunudi News WhatsApp Group

green whatsapp update
Image Credit: Gearrice

Join Nadunudi News WhatsApp Group