WhatsApp Inactive: ಇಂತಹ ಜನರ ವಾಟ್ಸಾಪ್ ಬ್ಯಾನ್, 2024 ಬಿಗ್ ಅಪ್ಡೇಟ್ ನೀಡಿದ ವಾಟ್ಸಾಪ್
ಭಾರತದಲ್ಲಿ 69 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಯನ್ನು ಬ್ಯಾನ್ ಮಾಡಲಾಗಿದೆ
WhatsApp Account Is Inactive In India: WhatsApp ವಿಶ್ವದೆಲ್ಲೆಡೆ WhatsApp ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿ ಗುರುತಿಸಿಕೊಡಿದೆ. ಜನರಿಗೆ ಹಲವು ವರ್ಷಗಳಿಂದ ಬಹಳ ಒಳ್ಳೆಯ ಸೇವೆಯನ್ನ ಒದಗಿಸಿಕೊಂಡು ಬಂದಿರುವ WhatsApp ಈಗಾಗಲೇ ಹಲವು ಫೀಚರ್ ಗಳನ್ನೂ ಪರಿಚಯಿಸುವ ಮೂಲಕ ಜನರ ವಿಶ್ವಾಸವನ್ನ ಗಳಿಸಿಕೊಂಡಿದೆ.
ತಂತ್ರಜ್ಜಾನ ಮುಂದುವರೆದಂತೆ ಅದನ್ನ ದುರುಪಯೋಗ ಮಾಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇರುತ್ತದೆ. ಕೆಲವು ಜನರು ವಾಟ್ಸಾಪ್ ಅನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು ಅದಕ್ಕೆ ಕಡಿವಾಣ ಹಾಕುವ ಸಲುವಾಗಿ ಈಗ ವಾಟ್ಸಾಪ್ ಖಾತೆಯನ್ನ ನಿಷ್ಕ್ರಿಯ ಮಾಡಿದೆ.
![WhatsApp Account Is Inactive In India](https://nadunudi.in/wp-content/uploads/2024/02/WhatsApp-Account-Is-Inactive-In-India.png)
ಭಾರತದಲ್ಲಿ ನಿಷೇಧವಾಗಿದೆ 69 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆ
WhatsApp ಖಾತೆಯಿಂದ ಆಗುವ ವಂಚನೆಯನ್ನು ತಪ್ಪಿಸುವ ಸಲುವಾಗಿ ವಾಟ್ಸಾಪ್ ಖಾತೆಗಳನ್ನು ಬ್ಯಾನ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಇದೀಗ ಮೆಟಾ ಮಾಲೀಕತ್ವದ ವಾಟ್ಸಾಪ್ IT ನಿಯಮಗಳಿಗೆ ಪೂರಕವಾಗಿ ಅಕ್ರಮ ಎನಿಸಿದ ಖಾತೆಗಳನ್ನು ನಿಷ್ಕ್ರಿಯಗೊಳಿಸಿದೆ. ಮೆಟಾದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ WhatsApp ಡಿಸೆಂಬರ್ 2023 ರಲ್ಲಿ ದೇಶದಲ್ಲಿ 69 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ.
ಕಂಪನಿಯು ಹೊಸ ಐಟಿ ನಿಯಮಗಳು 2021 ರ ಅನುಸಾರವಾಗಿ ಈ ಮಾಹಿತಿಯನ್ನು ಒದಗಿಸಿದೆ. ಡಿಸೆಂಬರ್ 1 ರಿಂದ 31 ರ ನಡುವೆ 6,9,34,000 ಖಾತೆಗಳನ್ನು ಬ್ಯಾನ್ ಮಾಡಲಾಗಿದೆ. ಈಗಾಗಲೇ ಸಾಕಷ್ಟು ಜನರು ತಮ್ಮ ವಾಟ್ಸಾಪ್ ಖಾತೆಯನ್ನು ಕಳೆದುಕೊಂಡಿದ್ದಾರೆ.
![WhatsApp Account Is Inactive](https://nadunudi.in/wp-content/uploads/2024/02/WhatsApp-Account-Is-Inactive.png)
ವಾಟ್ಸಾಪ್ ಖಾತೆ ಹೊಂದಿರುವವರ ಗಮನಕ್ಕೆ
ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲು, ಈ ಖಾತೆಗಳಲ್ಲಿ ಸುಮಾರು 16,58,000 ಖಾತೆಗಳನ್ನು ಸಕ್ರಿಯವಾಗಿ ನಿಷೇಧಿಸಲಾಗಿದೆ ಎಂದು WhatsApp ತನ್ನ ಮಾಸಿಕ ಅನುಸರಣಾ ವರದಿಯಲ್ಲಿ ತಿಳಿಸಿದೆ. ದೇಶದಲ್ಲಿ 500 ಮಿಲಿಯನ್ ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್ ಫಾರ್ಮ್ ಡಿಸೆಂಬರ್ ನಲ್ಲಿ ದೇಶದಲ್ಲಿ ದಾಖಲೆಯ 16,366 ದೂರು ವರದಿಗಳನ್ನು ಸ್ವೀಕರಿಸಿದೆ. Accounts Actioned ವರದಿಯ ಆಧಾರದ ಮೇಲೆ WhatsApp ಪರಿಹಾರ ಕ್ರಮಗಳನ್ನು ತೆಗೆದುಕೊಂಡ ವರದಿಯನ್ನು ಸೂಚಿಸುತ್ತದೆ ಮಾತು ಖಾತೆಯನ್ನು ನಿಷೇದಿಸುತ್ತದೆ.