WhatsApp Delete: ಇನ್ನು 30 ದಿನದಲ್ಲಿ ಈ ಮೊಬೈಲ್ ಗಳಿಂದ ವಾಟ್ಸಾಪ್ ಡಿಲೀಟ್, ನಿಮ್ಮ ಮೊಬೈಲ್ ಯಾವುದು ಚೆಕ್ ಮಾಡಿ.

ಇನ್ನುಮುಂದೆ Android Phone ಗಳಲ್ಲಿ ವಾಟ್ಸಾಪ್ ಲಭ್ಯವಿರುದಿಲ್ಲ.

WhatsApp Ban In Android Phone: ಇತ್ತೀಚಿಗೆ ಕೇಂದ್ರ ಸರ್ಕಾರ (Central Government) ಮೊಬೈಲ್ ಬಳಕೆದಾರರಿಗೆ ಹೊಸ ಹೊಸ Update ಅನ್ನು ನೀಡುತ್ತಲೇ ಇದೆ. ದೇಶದಲ್ಲಿ ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ಹ್ಯಾಕರ್ ಗಳ ಹಾವಳಿ ಕೂಡ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ Cyber Crime ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರು ದೊಡ್ಡ ಪ್ರಮಾಣದ ಸಂಕಷ್ಟ ಎದುರಿಸಬೇಕಿದೆ ಎನ್ನಬಹುದು.

Android ಫೋನ್ ಗಳಲ್ಲಿ ಹೆಚ್ಚಿನ ಅಪಾಯದ ದೋಷಗಳನ್ನು ಸರ್ಕಾರ ಪತ್ತೆಮಾಡಿದೆ. CERT -IN ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಗೆ ಹೊಸ ಭದ್ರತಾ ಎಚ್ಚರಿಕೆಯನ್ನು ನೀಡಿದೆ. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನ ಕೆಲವು ಆವೃತ್ತಿಗಳಲ್ಲಿ ಅವರು ಹೊಸ ದೋಷಗಳನ್ನು ಕಂಡುಕೊಳ್ಳಲಾಗಿದೆ. Android Phone ಗಳಲ್ಲಿ ದುರ್ಬಲತೆ ಹೆಚ್ಚಾಗಿರುವ ಬಗ್ಗೆ ಮಾಹಿತಿ ಲಭ್ಯವಾದ ಬೆನ್ನಲ್ಲೇ ಕೆಲವು Android Phone ಗಳಲ್ಲಿ WhatsApp ಸ್ಥಗಿತವಾಗಲಿದೆ.

WhatsApp Ban In Android Phone
Image Credit: Trak

Android Phone ಗಳಲ್ಲಿ ದುರ್ಬಲತೆ ಹೆಚ್ಚಾಗಿವೆ
CERT -In ನ ವರದಿಯ ಪ್ರಕಾರ, ಆಂಡ್ರಾಯ್ಡ್ 11, ಆಂಡ್ರಾಯ್ಡ್ 12, ಆಂಡ್ರಾಯ್ಡ್ 12L, ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುವ ಸಾಧನಗಳು Android Operating System ನಲ್ಲಿ ಕಂಡುಬರುವ ದೋಷಗಳಿಂದ ಪರಿಣಾಮ ಬೀರಬಹುದು. Android OS, 11, 12, 12L ಮತ್ತು 13 ನಲ್ಲಿ ಹಲವಾರು ದುರ್ಬಲತೆಗಳು ಇದೆ ಎಂದು ವರದಿಯಾಗಿದೆ. ಹೀಗಾಗಿ ಹಳೆಯ ಆಂಡ್ರಾಯ್ಡ್ ಫೋನ್ ಗಳಲ್ಲಿ ವಾಟ್ಸಾಪ್ ಅಷ್ಟೊಂದು ಸುರಕ್ಷಿತವಾಗಿರುವುದಿಲ್ಲ.

ಈ ನಿಟ್ಟಿನಲ್ಲಿ ಆಂಡ್ರಾಯ್ಡ್ ಫೋನ್ ಗಳಲ್ಲಿ ವಾಟ್ಸಾಪ್ ಸ್ಥಗಿತಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಬಳಕೆದಾರರಿಗೆ ಹೆಚ್ಚಿನ ಭದ್ರತೆಯನ್ನು ನೀಡುವ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಹಳೆಯ ಆಂಡ್ರಾಯ್ಡ್ ಫೋನ್ ಗಳಲ್ಲಿ ವಾಟ್ಸಾಪ್ ಸ್ಥಗಿತಗೊಳ್ಳಲಿದೆ. ಇದೀಗ ಆಂಡ್ರಾಯ್ಡ್ ಯಾವ ಆವೃತ್ತಿಯಲ್ಲಿ WhatsApp ಸ್ಥಗಿತಗೊಳ್ಳಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

WhatsApp Ban In Android Phone
Image Credit: Thesouthafrican

ಇನ್ನು 30 ದಿನಗಳಲ್ಲಿ Android phone ಗಳಲ್ಲಿ WhatsApp ಸ್ಥಗಿತ
ಪ್ರಸ್ತುತ WhatsApp ಆವೃತ್ತಿ 4 .1 ಅಥವಾ ಅದಕ್ಕಿಂತ ಹೊಸ ಆವೃತ್ತಿಯ ಆಂಡ್ರಾಯ್ಡ್ ಫೋನ್ ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ October 24 ರಿಂದ ಎಲ್ಲವು ಬದಲಾಗಲಿವೆ. ಆಂಡ್ರಾಯ್ಡ್ 5.0 ಅಥವಾ ಅದಕ್ಕಿಂತ ಹೊಸಾ ಫೋನ್ ಗಳಲ್ಲಿ ಮಾತ್ರ ವಾಟ್ಸಾಪ್ ಕಾರ್ಯನಿರ್ವಹಿಸಲಿದೆ.

Join Nadunudi News WhatsApp Group

ಇನ್ನುಮುಂದೆ ಹಳೆಯ ಆಂಡ್ರಾಯ್ಡ್ ಬಳಕೆದಾರರ ಫೋನ್ ಗಳಲ್ಲಿ ಹೊಸ ವೈಶಿಷ್ಟ್ಯಗಳಿರುವ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ನಿಮ್ಮ ಬಳಿ ಇರುವ ಹಳೆಯ ಆಂಡ್ರಾಯ್ಡ್ ಫೋನ್ ಗಳನ್ನೂ ಬದಲಾಯಿಸುವುದು ಉತ್ತಮ.

Join Nadunudi News WhatsApp Group