WhatsApp And Google: ವಾಟ್ಸಾಪ್ ಬಳಸುವವರಿಗೆ ಗೂಗಲ್ ನಿಂದ ಹೊಸ ರೂಲ್ಸ್, ಶುಲ್ಕ ಕಟ್ಟಿದರೆ ಮಾತ್ರ ಈ ಸೇವೆ ಉಚಿತ

ವಾಟ್ಸಾಪ್ ಬಳಕೆದಾರರು ಇನ್ನುಮುಂದೆ ಈ ಸೇವೆ ಬಳಸಲು ಶುಲ್ಕ ಕಟ್ಟಬೇಕು

WhatsApp Chat Backup Fee: ಪ್ರಸ್ತುತ ಎಲ್ಲೆಡೆ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಮೊಬೈಲ್ ಬಳಸುವ ಪ್ರತಿಯೊಬ್ಬರೂ ಕೂಡ ಹೆಚ್ಚಾಗಿ WhatsApp ಅನ್ನು ಬಳಸುತ್ತಾರೆ. ವಾಟ್ಸಾಪ್ ಹಾಗೂ ಗೂಗಲ್ ಎರಡರ ಮಧ್ಯೆ ಲಿಂಕ್ ಇರುವುದು ಸಾಕಷ್ಟು ಜನರಿಗೆ ತಿಳಿದಿಲ್ಲ ಎಂದು ಹೇಳಬಹುದು.. ಏಕೆಂದರೆ ವಾಟ್ಸಾಪ್ ನಲ್ಲಿನ ಸಂದೇಶಗಳನ್ನು ನೀಮ್ಮ ಗೂಗಲ್ ಕಲೆಹಾಕಿರುತ್ತದೆ.

ವಾಟ್ಸಾಪ್ ನಲ್ಲಿ ಸಾಲುಸಾಲು ಹೊಸ ಹೊಸ ಫೀಚರ್ ನ ಮೂಲಕ ಸಿಹಿಸುದ್ದಿ ಕೇಳುತ್ತಿದ್ದ ವಾಟ್ಸಾಪ್ ಬಳಕೆದಾರರಿಗೆ ಇದೀಗ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ವಾಟ್ಸಾಪ್ ಬಳಸುವವರಿಗೆ ಗೂಗಲ್ ನಿಂದ ಹೊಸ ರೂಲ್ಸ್ ಜಾರಿಯಾಗಿದೆ. ಹೌದು ವಾಟ್ಸಾಪ್ ನ ಈ ಸೇವೆಯನ್ನು ಬಳಸಲು ಜನರು ಇನ್ನುಮುಂದೆ ಶುಲ್ಕವನ್ನ ಕಡ್ಡಾಯವಾಗಿ ಕಟ್ಟಬೇಕಾಗುತ್ತದೆ.

WhatsApp Chat Backup Fee
Image Credit: Original Source

ವಾಟ್ಸಾಪ್ ಬಳಸುವವರಿಗೆ ಗೂಗಲ್ ನಿಂದ ಹೊಸ ರೂಲ್ಸ್
ಸಾಮಾನ್ಯವಾಗಿ WhatsApp ನಲ್ಲಿ ಜನರು ಹೆಚ್ಚಾಗಿ ಮೆಸ್ಸೇಜ್, ವಿಡಿಯೋ ಕಾಲ್, ವಿಡಿಯೋ, ಶೇರ್, ಇಮೇಜ್ ಶೇರ್ ಮಾಡಿಕೊಳ್ಳುತ್ತಾರೆ. ವಾಟ್ಸಾಪ್ ಚಾಟಿಂಗ್ ನ ಮೂಲಕ ದೂರವಿರುವ ವ್ಯಕ್ತಿಗಳ ಜೊತೆ ಚಾಟಿಂಗ್ ನ ಮೂಲಕ ತುಂಬಾ ಹತ್ತಿರವಾಗಿರುತ್ತಾರೆ. ಇನ್ನು ತಮ್ಮ ಪ್ರೀತಿ ಪಾತ್ರರಾದವರ ಜೊತೆಗಿನ ಚಾಟಿಂಗ್ ಹಿಸ್ಟರಿಯನ್ನು ಕಳೆದುಕೊಳ್ಳಲು ಯಾರು ಬಯಸುವುದಿಲ್ಲ.

ಹೀಗಾಗಿ ವಾಟ್ಸಾಪ್ ಬಳಕೆದಾರರು Chat Backup ಆಯ್ಕೆಯನ್ನು ಹೆಚ್ಚಾಗಿ ಬಳಸುತ್ತಾರೆ. ತಮ್ಮ ಜಿಮೈಲ್ ಅಕೌಂಟ್ ನ ಮೂಲಕ ತಮ್ಮ ಚಾಟಿಂಗ್ ಹಿಸ್ಟರಿಯನ್ನು ಪಡೆಯಲು ಬಯಸುತ್ತಾರೆ. ಆದರೆ ಇದೀಗ ವಾಟ್ಸಾಪ್ ಈ ಫೀಚರ್ ನಲ್ಲಿ ಬದಲಾವಣೆ ತರಲು ನಿರ್ಧರಿಸಿದೆ. ಹೌದು ಇನ್ನುಮುಂದೆ ನೀವು WhatsApp Chat Backup ಪಡೆಯಬೇಕಿದ್ದರೆ ಶುಲ್ಕ ಪಾವತಿಸುವುದು ಅನಿವಾರ್ಯವಾಗಿದೆ.

Whatsapp Data Backup In Google Drive
Image Credit: Kaspersky

ಶುಲ್ಕ ಕಟ್ಟಿದರೆ ಮಾತ್ರ ಈ ಸೇವೆ ಉಚಿತ
ಈ ಹಿಂದೆ ವಾಟ್ಸಾಪ್ ತನ್ನ ಬಳಕೆದಾರರಿಗೆ Chat Backup ಅನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿತ್ತು. ವಾಟ್ಸಾಪ್ ಬಳಕೆದಾರರು WhatsApp ಅನ್ನು Uninstall ಮಾಡಿದಾಗ ಅಥವಾ ಒಂದು ಮೊಬೈಲ್ ಫೋನ್ ನಿಂದ ಮತ್ತೊಂದು ಮೊಬೈಲ್ ಗೆ ಚಾಟ್ ಅನ್ನು ಟ್ರಾನ್ಸ್ಫರ್ ಮಾಡಿಕೊಳ್ಳುವಾಗ ಉಚಿತವಾಗಿ ಚಾಟ್ ಬ್ಯಾಕಪ್ ಮಾಡುವ ಆಯ್ಕೆ ಇತ್ತು.

Join Nadunudi News WhatsApp Group

ಆದರೆ ಇನ್ನುಮುಂದೆ ಗೂಗಲ್ ಡ್ರೈವ್ಸ್ ನಲ್ಲಿ ಚಾಟ್ ಬ್ಯಾಕಪ್ ಮಾಡಬೇಕಿದ್ದರೆ ಶುಲ್ಕ ಪಾವತಿಸಬೇಕಾಗುತ್ತದೆ. ಜನವರಿ 1 2024 ರಿಂದ ಈ ಹೊಸ ನಿಯಮ ಅನ್ವಯವಾಗಲಿದೆ. ಇನ್ನುಮುಂದೆ ನೀವು ನಿಮ್ಮ ಚಾಟ್ ಬ್ಯಾಕಪ್ ಹಿಸ್ಟರಿಯನ್ನು ಪಡೆಯಲು ಶುಲ್ಕವನ್ನು ಪಾವತಿಸುವುದು ಅನಿವಾರ್ಯವಾಗಿದೆ.

Join Nadunudi News WhatsApp Group